Video: ದುಡಿಮೆಯಲ್ಲಿ ಖುಷಿ ಕಾಣುವ ಹಿರಿಜೀವಕ್ಕೆ ಹೆಗಲಾದ ಶ್ವಾನ

Video: ದುಡಿಮೆಯಲ್ಲಿ ಖುಷಿ ಕಾಣುವ ಹಿರಿಜೀವಕ್ಕೆ ಹೆಗಲಾದ ಶ್ವಾನ


ವಿಡಿಯೋ: ದುಡಿಮೆಯಲ್ಲಿ ಖುಷಿ ಕಾಣುವ ಹಿರಿಜೀವಕ್ಕೆ ಹೆಗಲ ಶ್ವಾನ

ನಿಯತ್ತು ಎಂದರೆ ಮೊದಲು ನೆನಪಾಗುವುದೇ ಈ ಶ್ವಾನ (ನಾಯಿ) ಮನುಷ್ಯರಿಗೆ ನಾಯಿಗಿಂತ ಹೆಚ್ಚು ಆಪ್ತರು ಬೇರಾರೂ ಇರಲಿಕ್ಕೆ ಸಾಧ್ಯವಿಲ್ಲ. ಶ್ವಾನಗಳು ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿ. ಮನೆಯ ಸದಸ್ಯರಂತೆ ಇರುವ ಈ ಶ್ವಾನವು ಒಂದು ತುತ್ತು ಹಾಕಿದ್ರೆ ಸಾಕು, ಜೀವನ ಪರ್ಯಂತ ಮಾಲೀಕನಿಗೆ ಋಣಿಯಾಗಿರಬೇಕು ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ. ತನ್ನ ಮೇಲೆ ಕಾಳಜಿ ತೋರುವ ವ್ಯಕ್ತಿ ಹೂವಿನ ಮಾಲೆ ಮಾರುತ್ತಿದ್ದರೆ, ಶ್ವಾನವು ಆ ಹಿರಿಜೀವಕ್ಕೆ ಸಹಾಯ ಮಾಡಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಕಣ್ಣಂಚಲಿ ನೀರು ತರಿಸಿದೆ.

Somanath kanrar ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಶ್ವಾನ ಹಾಗೂ ವ್ಯಕ್ತಿಯ ನಡುವಿನ ಬಾಂಧವ್ಯವನ್ನು ನೋಡಬಹುದು. ಹಿರಿಯ ವ್ಯಕ್ತಿಯೊಬ್ಬರು ಹೂವಿನ ಮಾಲೆಯನ್ನು ಮಾರಾಟ ಮಾಡುತ್ತಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಗೆ ಕೈಯಲ್ಲಿದ್ದ ಮಾಲೆಯನ್ನು ಕೊಡುತ್ತಿದ್ದಾರೆ, ಇತ್ತ ಶ್ವಾನವು ತನ್ನ ಬಾಯಲ್ಲಿ ಹೂವಿನ ಮಾಲೆಯನ್ನು ಹಿಡಿದು ಪಕ್ಕದಲ್ಲಿ ನಿಂತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಮಗುವಿನಂತೆ ಮನೆಮಾಲೀಕನನ್ನು ಹಿಂಬಾಲಿಸಿದ ಬಾತುಕೋಳಿ

ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಬಯಸಿದ್ದು, ಒಬ್ಬ ಬಳಕೆದಾರ ತುಂಬಾ ಮುದ್ದಾಗಿದೆ. ಮತ್ತೊಬ್ಬರು, ಪ್ರಾಣಿಗಳಿಗೆ ಅನ್ನ ಹಾಕಿ, ನಿಮ್ಮ ಕಷ್ಟ ಸುಖಕ್ಕೆ ಹೇಗಾಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಇಂತಹ ದೃಶ್ಯಗಳನ್ನು ನೋಡಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *