ಸೋಶಿಯಲ್ ಮೀಡಿಯಾದಲ್ಲಿ(ಸಾಮಾಜಿಕ ಮಾಧ್ಯಮ) ವೈರಲ್ ಆಗುವ ಕೆಲ ವಿಡಿಯೋಗಳು ಕಂಡಾಗ ಅಚ್ಚರಿಯಾಗುತ್ತದೆ. ಇದೇನಪ್ಪಾ ಹೀಗೆ ಎಂದೆನ್ನಿಸುತ್ತದೆ. ಈ ವಿಡಿಯೋ ನೋಡಿದ ಮೇಲೂ ನಿಮಗೂ ಹಾಗೆಯೇ ಅನಿಸದೇ ಇರದು. ಹೌದು, ಕುಟುಂಬವೊಂದು ಮೂರು ಟ್ರೇನಷ್ಟು ಮೊಟ್ಟೆಗಳನ್ನು ತಂದು ಮನೆಯಲ್ಲಿಟ್ಟಿದ್ದು, ಎರಡು ತಿಂಗಳ ಕಾಲ ಟ್ರಿಪ್‌ಗೆ (ಪ್ರಯಾಣ) ಹೋಗಿದೆ. ಮನೆಗೆ ಬಂದು ನೋಡಿದ್ರೆ ಅಚ್ಚರಿಯೊಂದು ಕಾದಿತ್ತು. ಅಷ್ಟಕ್ಕೂ ಆಗಿದ್ದೇನು, ಈ ಕುರಿತಾದ ಮಾಹಿತಿ ಇಲ್ಲಿದೆ.
ಟ್ರಿಪ್‌ಗೆ ಹೊರಡುವ ಮುನ್ನ ಮೂರು ಟ್ರೇ ಮೊಟ್ಟೆಗಳನ್ನು ತಂದಿಟ್ಟಿದ್ದರಂತೆ. ಈ ಮೊಟ್ಟೆಗಳಿಂದ ಮರಿಗಳು ಹೊರಬಂದಿವೆ. ಹೌದು, ಪ್ರವಾಸ ಮುಗಿಸಿ ಬರುವ ವೇಳೆಗೆ ಮನೆ ತುಂಬಾ ಇದ್ದ ಕೋಳಿ ಮರಿಗಳನ್ನು ಕಂಡು ಮನೆ ಮಂದಿ ಶಾಕ್ ಆಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಘರ ಪೇ ಅಂಡಾ ರಖ ಕರ ಗೇ ಚುಟಿ ಮನನೇ 2 ಮಾಹೀನೇ ಘರ್ ಸೆ ಬಾಹರ್ ಗಯೇ, ಸಭೆ ಅಂದೇ ಮೇ ಗಯೇ ದೇಖಿಯೇ ಅಬ್ ಲಗ್ ರಹಾ ಹೈ ಚಿಕನ್ ಬನಾನಾ ಹೋಗಾ,
ಕುದರತ ಕಾ ಕರಿಷ್ಮಾ ಹೋ ಗಯಾ ಅಂದೆ ಮೆಂ ಸೆ ಬಚ್ಚೆ ನಿಕಲ್ ಗಯಾ pic.twitter.com/NSIA7EnEyD
— ರಂಜನ್ ಸಿಂಗ್ 🇮🇳 (@RanjanSinghh_) ನವೆಂಬರ್ 29, 2025
@RanjanSingh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮನೆ ತುಂಬಾ ಕೋಳಿ ಮರಿಗಳು ಕಾಣಿಸಿಕೊಂಡಿರುವುದನ್ನು ನೋಡಬಹುದು.
ಇದನ್ನೂ ಓದಿ:ಟಿಫಿನ್ ಬಾಕ್ಸ್ ಕಂಡೊಡನೆ ಓಡೋಡಿ ಬಂದ ಅಳಿಲು, ಮುಂದೇನಾಯ್ತು ನೋಡಿ
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಸೇರಿಸಿದ್ದು, ಒಬ್ಬ ಬಳಕೆದಾರ ಇದು ನಿಜವೇ ಎಂದು ಕೇಳಿದ್ದಾರೆ. ಇತರರು, ತುಂಬಾ ಒಳ್ಳೆಯ ಸಂಗತಿ ಎಂದರೆ, ಮತ್ತೊಬ್ಬರು ಮನೆಯಲ್ಲಿ ಫ್ರೆಂಡ್ಸ್ ಆಗಿಲ್ಲವೇ ಎಂದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ