68ನೇ ವಯಸ್ಸಿನಲ್ಲಿ 2ನೇ ಮದ್ವೆಯಾದ ವ್ಯಕ್ತಿಗೆ ಮಕ್ಕಳ ಕಾಟ, ಮಚ್ಚು ಹಿಡಿದ ಅಪ್ಪ: ಏನಿದು ವೃದ್ಧ ದಂಪತಿಯ ಸಂಘರ್ಷ?

68ನೇ ವಯಸ್ಸಿನಲ್ಲಿ 2ನೇ ಮದ್ವೆಯಾದ ವ್ಯಕ್ತಿಗೆ ಮಕ್ಕಳ ಕಾಟ, ಮಚ್ಚು ಹಿಡಿದ ಅಪ್ಪ: ಏನಿದು ವೃದ್ಧ ದಂಪತಿಯ ಸಂಘರ್ಷ?


ಹಾಸನ, (ಡಿಸೆಂಬರ್ 21): ಆತನಿಗೆ 68, ಆಕೆಗೆ 58 ವರ್ಷ. ಬದುಕಿನ ಸಂಧ್ಯಾಕಾಲದಲ್ಲಿ ಅವರು ಒಂದಾಗಿದ್ದಾರೆ. ಒಂಟಿಯಾಗಿ ಇಬ್ಬರು ಹೊಸಜೀವನ ಆರಂಭಿಸಿದ್ದಾರೆ. ಹೌದು..ಹಾಸನ (ಹಾಸನ) ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಗಾಳಿಪುರದ 68 ವರ್ಷದ ರಾಜಣ್ಣ ಅವರು ಕಿತ್ತಾನೆಗಡಿಯ 58 ವರ್ಷದ ಗೀತಾಳನ್ನ ಎರಡನೇ ಮದುವೆಯಾಗಿದ್ದಾರೆ (ಎರಡನೇ ಮದುವೆ). ಆದರೆ, ವೃದ್ಧ ನವವಿವಾಹಿತರಿಗೆ ಮಕ್ಕಳೇ ಕಂಟಕವಾಗಿದ್ದು, ಇಳಿವಯಸ್ಸಿನಲ್ಲಿ ಎರಡನೇ ಮದುವೆ ಮಾಡಿಕೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದೀಗ ದಂಪತಿಯ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಮಗನ ಕಾಟಕ್ಕೆ ಮಚ್ಚು ಹಿಡಿದ ಅಪ್ಪ!

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಾಳಿಪುರದ ರಾಜಣ್ಣನಿಗೆ 40 ವರ್ಷಗಳ ಹಿಂದೆಯೇ ಮದುವೆಯಾಗಿದ್ದು. ಎರಡು ಹೆಣ್ಣ ಮಕ್ಕಳು ಮತ್ತು ಮಗ ಇದ್ದ ರಾಜಣ್ಣ ಚನ್ನಾಗಿ ದುಡಿಮೆ ಮಾಡಿದ್ದ ಕೂಲಿ ಮಾಡಿ ಮನೆ ಕಟ್ಟಿ, ಮನೆ ಸಮೀಪವೇ ಒಂದು ಫ್ಲೋರ್ ಮಿಲ್ ಮಾಡಿ ನೆಮ್ಮದಿಯಾಗಿದ್ದರು. ಆದರೆ, 2 ವರ್ಷಗಳ ಹಿಂದೆ ಪತ್ನಿ ತೀರಿಕೊಂಡ ರಾಜಣ್ಣ ಒಂಟಿಯಾಗಿದ್ದರು. ಬಳಿಕ ಸ್ನೇಹಿತರ ಸಲಹೆ, ಹಾಸನದ ಕಿತ್ತಾನೆಗಡಿಯ 58 ವರ್ಷದ ಗೀತಾಳನ್ನ ಮದ್ವೆ ಆಗಿದ್ದಾರೆ. ಪತಿಯಿಂದ ದೂಡಲ್ಪಟ್ಟ ಗೀತಾ, ರಾಜಣ್ಣ ಅವರ ಜತೆ ಇದೇ 17ರಂದು ವಿವಾಹವಾಗಿದ್ದಾರೆ. ಆದರೆ, ಈಗ ರಾಜಣ್ಣನ 2ನೇ ಮದ್ವೆಗೆ ಪುತ್ರ ಕೆರಳಿದ್ದು, ಕಾಟ ಕೊಡ್ತಿದ್ದಾನಂತೆ. ಇದರಿಂದ ಮಗ ನನ್ನ ಮೇಲೆ ಹಲ್ಲೆ ಮಾಡ್ತಿದ್ದಾನೆಂದು ಮಚ್ಚು ಹಿಡಿದು ಹೊಳೆನರಸೀಪುರ ಠಾಣೆಗೆ ಬಂದ ರಾಜಣ್ಣ ರಕ್ಷಣೆ ಕೋರಿದ್ದಾರೆ.

ಇದನ್ನೂ ನೋಡಿ: ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ

ಮಕ್ಕಳಿಗೆ ಆಸ್ತಿ ಪಲಾಗುವ ಭಯ

ಹೊಳೆನರಸೀಪುರದ ಹೌಸಿಂಗ್ ಬೋರ್ಡ್‌ನಲ್ಲಿ ಫ್ಲೋರ್ ಮಿಲ್ ನಡೆಸುತ್ತಿರುವ ರಾಜಣ್ಣ, ಎರಡ್ಮೂರು ಮನೆ ಕಟ್ಟಿ ಬಾಡಿಗೆಗೂ ಬಿಟ್ಟಿದ್ದಾರೆ. ಪತ್ನಿ ಅಗಲಿದ ಬಳಿಕ ಮಕ್ಕಳು ರಾಜಣ್ಣನ ಬಗ್ಗೆ ತಲೆಕೆಡಿಸಿಕೊಳ್ತಿಲ್ವಂತೆ. ಹೀಗಾಗಿ ರಾಜಣ್ಣ ಗೀತಾರನ್ನ ಮದ್ವೆ ಆಗಿದ್ದಾರೆ. ಆದರೆ ಅಪ್ಪನ 2ನೇ ಮದ್ವೆಯಿಂದ ಆಸ್ತಿ ಪಾಲಾಗುತ್ತೆಂದು ಮಕ್ಕಳು ಕಾಟ ಕೊಡ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಪೊಲೀಸರು ತಮಗೆ ರಕ್ಷಣೆ ಕೊಡುತ್ತಿಲ್ಲ ಎಂದು ವೃದ್ಧ ದಂಪತಿಗಳು ಅಳಲು ತೊಡಿಕೊಂಡಿದ್ದಾರೆ.

ರಾಜಣ್ಣನ ಆರೋಪವೇನು?

ಈಗ ಎರಡು ವರ್ಷಗಳ ಹಿಂದೆ ಪತ್ನಿ ಬಳಿಕ ಹೆಣ್ಣು ಮಕ್ಕಳಾಗಲಿ, ಗಂಡು ಮಗನಾಗಲಿ ತನ್ನನ್ನ ನೋಡಿಕೊಳ್ತಿಲ್ಲ. ಕೊನೆಗಾಲದಲ್ಲಿ ನನಗೆ ಯಾರು ಆಗುತ್ತಾರೆ ಎಂದು ಗೀತಾಳನ್ನು ಕೈ ಹಿಡಿದಿದ್ದೇನೆ. ಹಾಸನ ತಾಲೂಕಿನ ಗೀತಾ ಅವರು ಮದುವೆಯಾಗಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ. ಆದರೆ, ಗಂಡನಿಂದ ದೂರವಾಗಿ ಕೂಲಿ ಮಾಡಿ ಜೀವನ ನಡೆಸುವಾಗ ಒಂದು ಬಾಳು ಸಿಗಲಿ ಎಂದು ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದಲ್ಲಿ ಸತಿಪತಿಗಳಾಗಿದ್ದೇವೆ. ಆದರೆ, ನೆಮ್ಮದಿ ಜೀವನ ಮಾಡಲು ಮಕ್ಕಳು ಬಿಡುತ್ತಿಲ್ಲ.

ನನ್ನ ಆಸ್ತಿ ಈ ಮಹಿಳೆ ಪಾಲಾಗುತ್ತೆ ಎಂದು ಮಕ್ಕಳು ತೊಂದರೆ ಕೊಡುತ್ತಿದ್ದಾರೆ. ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಮಕ್ಕಳು ತಂದೆಯೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿದೂರು ಹೇಳಿದ್ದಾರೆ. ಸದ್ಯ ಎರಡೂ ಕಡೆಯ ದೂರು ಸ್ವೀಕರಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ/ ಆದರೆ ಈ ನಡುವೆ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ. ವೈದ್ಯರು ತಮಗೆ ರಕ್ಷಣೆ ಕೊಡುತ್ತಿಲ್ಲ ಎಂದು ವೃದ್ಧ ದಂಪತಿ ವೀಡಿಯೋ ಮಾಡಿ ತಮಗೆ ರಕ್ಷಣೆ ನೀಡಿ ಎಂದು ಮೊರೆಯಿಟ್ಟಿದ್ದಾರೆ.

ಮಕ್ಕಳು, ಮೊಮ್ಮಕ್ಕಳು ಎಷ್ಟು ಇರಲಿ, ಪ್ರೀತಿ ತೋರದಿದ್ರೆ ಸಂಬಂಧಕ್ಕೆ ಅರ್ಥವೇ ಇರಲ್ಲ. ಇದರ ಅರ್ಥ ಮಾಡಿಕೊಂಡು ಮಕ್ಕಳು ನಡೆಯಬೇಕಿದೆ. ವೃದ್ಧ ದಂಪತಿಯ ಹೊಸ ಜೀವನಕ್ಕೂ ರಕ್ಷಣೆ ನೀಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *