Headlines

ಕಾರ್ಕಳ ಯುವನ ಸಾವಿನ ಹಿಂದೆ ಹನಿಟ್ರ್ಯಾಪ್ ಜಾಲ? ಡೆತ್ ನೋಟ್​​ನಿಂದ ಸ್ಪೋಟಕ ಅಂಶ ಬಯಲು

ಕಾರ್ಕಳ ಯುವನ ಸಾವಿನ ಹಿಂದೆ ಹನಿಟ್ರ್ಯಾಪ್ ಜಾಲ? ಡೆತ್ ನೋಟ್​​ನಿಂದ ಸ್ಪೋಟಕ ಅಂಶ ಬಯಲು


ಉಡುಪಿ , ​​(ಅಕ್ಟೋಬರ್ 18): ಜಿಲ್ಲೆಯ ಕಾರ್ಕಳ (ಕಾರ್ಕಲ್) ತಾಲೂಕಿನ ನಿಟ್ಟೆ ಗ್ರಾಮದ ಯುವಕ ಅಭಿಷೇಕ್ ಇತ್ತೀಚೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ಅಭಿಷೇಕ್ ಆತ್ಮಹತ್ಯೆ ಪ್ರಕರಣ) ಮಾಡಿಕೊಂಡಿದ್ದ. ಖಾಸಗಿ ಲಾಡ್ಜ್ ಒಂದರಲ್ಲಿ ಈತನ ಶವವಿತ್ತು. ಆದರೆ, ಇದೀಗ ಶವದ ಜೊತೆ ಸಿಕ್ಕಿರುವ ಏಳು ಪುಟಗಳ ಡೆತ್ ನೋಟ್ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ತಾನು ಪ್ರೀತಿಸುತ್ತಿದ್ದ ಹುಡುಗಿ ಮೊದಲು ತನ್ನನ್ನು ಪ್ರೀತಿಸುವಂತೆ ನಾಟಕವಾಡಿ ನಂತರ ತನ್ನ ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾಳೆ. ಈಕೆ ಮತ್ತು ಈಕೆಯ ತಂಡ, ತನ್ನಿಂದ 4 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದರಿಂದ ರೋಸಿ ಹೋಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟಿನಲ್ಲಿ ಉಲ್ಲೇಖಿಸಲಾಗಿದೆ.

ತಾನು ಪ್ರೀತಿಸಿದ ಹುಡುಗಿ ನಿರೀಕ್ಷಾ, ಆಕೆ ತಂಡದಲ್ಲಿದ್ದ ಮಂಗಳೂರು ಮೂಲದ ರಾಕೇಶ್ ,ರಾಹುಲ್ ಹಾಗೂ ತಸ್ಲೀಮ್ ಸಾವಿಗೆ ಕಾರಣ ಎಂದು ಬರೆದಿದ್ದಾನೆ. ಇವರು ತಂಡವಾಗಿ ಅನೇಕ ಜನರನ್ನು ಅಶ್ಲೀಲ ಫೋಟೋ ಬಳಸಿ ವಂಚಿಸಿದ್ದಾರೆ ಅಂತಲೂ ಆರೋಪಿಸಿದ್ದಾನೆ.

ಇದನ್ನೂ ಓದಿ: ಪ್ರೇಯಸಿ ಜತೆ 8 ದಿನಗಳಿಂದ ಬೆಂಗಳೂರಿನ ಲಾಡ್ಜ್‌ನಲ್ಲಿದ್ದ ಯುವಕ 9ನೇ ದಿನಕ್ಕೆ ಮೃತ್ಯು

ಐಟಿಐ ಮಾಡಿಕೊಳ್ಳುವ ಮಂಗಳೂರು ಖಾಸಗಿ ಆಸ್ಪತ್ರೆ ಒಂದರಲ್ಲಿ ವೈದ್ಯಕೀಯ ಸಲಕರಣೆಗಳ ಸರ್ವಿಸಿಂಗ್ ಕೆಲಸ ಮಾಡುತ್ತಿರುವ ಅಭಿಷೇಕ್, ಈ ಸಂಚಿಗೆ ಬಲಿಯಾಗಿರುವುದು ಮನೆಯವರಿಗೆ ಆತಂಕ ತಂದಿದೆ. ಈತ ಪ್ರೀತಿಸುವ ಹುಡುಗಿ ನಿರೀಕ್ಷಾ ಕೂಡ ಮಂಗಳೂರಿನ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾಳೆ. ಆದರೆ ಯಾವ ಸಂಗತಿಗಳು ಕೂಡ ಮನೆಯವರಿಗಾಗಲಿ ಆತನ ರೂಮ್ ಮೇಟ್ ಆಗಿದ್ದ ಸಹೋದರ ಸಂಬಂಧಗಳಿಗಾಗಲಿ ಗೊತ್ತಿಲ್ಲ. ಆದರೆ, ಡೆತ್ ನೋಟ್ ಬರೆದು ಸಾವನ್ನಪ್ಪಿರುವುದು ತಲ್ಲಣ ಮೂಡಿಸಿದೆ. ಇದೀಗ ಅಭಿಷೇಕ್ ಕುಟುಂಬದ ನೆರವಿಗೆ ವಿಶ್ವಕರ್ಮ ಸಂಘಟನೆಗಳು ಬಂದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈತ ಆರೋಪಿಸಿರುವ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಿದೆ. ಮೇಲ್ನೋಟಕ್ಕೆ ತನಿಖೆಯಿಂದಾಗಲಿ ಅವರ ಮೊಬೈಲ್ ದಾಖಲೆಗಳಿಂದಾಗಲಿ ಯಾವುದೇ ಸುಳಿವು ಸಿಕ್ಕಿಲ್ಲ. ಡೆತ್ ನೋಟಿನಲ್ಲಿರುವ ಆರೋಪಗಳಿಗೆ ಪೂರಕವಾದ ಯಾವುದೇ ಪುರಾವೆ ದೊರಕಿಲ್ಲ. ಪ್ರೇಮ ವೈಫಲ್ಯದಿಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಪೊಲೀಸ್ ಇಲಾಖೆಗೆ ಗುಮಾನಿ. ಇಷ್ಟಾದರೂ ಆರೋಪಿತ ವ್ಯಕ್ತಿಗಳ ಮೊಬೈಲನ್ನು ರಿಟ್ರೈ ಮಾಡಲು ಪೊಲೀಸರು ಕಳುಹಿಸಿದ್ದಾರೆ. ಹನಿಟ್ರ್ಯಾಪ್ನಂತಹ ಗಂಭೀರ ಆರೋಪ ಬಂದಿರುವ ಬಗ್ಗೆ ತನಿಖೆ ತೀವ್ರ ಸ್ವರೂಪದಲ್ಲಿದೆ.

ಬಡ ಯುವಕನೊಬ್ಬ ಹನಿಟ್ರ್ಯಾಪಿಗೆ ಬಲಿಯಾಗಿದ್ದಾನೆ ಎನ್ನುವ ಸಂಗತಿ ಆತಂಕಕ್ಕೀಡು ಮಾಡಿದ್ದು, ತಾಂತ್ರಿಕ ದಾಖಲೆಗಳ ಮೂಲಕ ಈ ಪ್ರಕರಣವನ್ನು ಭೇದಿಸಬೇಕಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *