ತಾವು ಪ್ರೀತಿಸುವವರು ಬೇರೊಬ್ಬಳನ್ನು ಮದುವೆಯಾಗುವುದನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ಮಹಾಯುದ್ಧದ ಸಮಯದಲ್ಲಿ ಎರಡನೇ ಬಾರಿಗೆ ತನ್ನ ಗಂಡನಿಂದ ಬೇರ್ಪಟ್ಟ ನಂತರ ಅವನು ಕಣ್ಮುಂದೆ ಬಂದರೆ ಒಮ್ಮೆ ಖುಷಿಯಾಗಿದ್ದಂತೂ ಹೌದು, ತಾನಿಲ್ಲದೆ ಆತ ಬದುಕು ಕಟ್ಟಿಕೊಂಡಿರಲಿಲ್ಲ, ಬೇರೆ ಮದುವೆಯಾಗಿ ಮಕ್ಕಳು ಇದ್ದಾರೆ ಎಂದು ಕೇಳಿ ಆಕೆ ಗಂಡನ ಎದುರೇ ಕುಸಿದು ಬಿದ್ದಿದ್ದಾಳೆ. ಆದರೆ ಇಷ್ಟು ವರ್ಷವಾದರೂ ಆಕೆ ಬೇರೆ ಮದುವೆಯಾಗಿಲ್ಲ, ಗಂಡನ ಬರುವಿಕೆಗಾಗಿಯೇ ಕಾದು ಕುಳಿತಿದ್ದಳು.
54 ವರ್ಷಗಳ ಬಳಿಕ ಇಬ್ಬರು ಮತ್ತೆ ಒಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಭಾವನಾತ್ಮಕ ಪುನರ್ಮಿಲನವನ್ನು ಕಾಣಬಹುದಾಗಿದೆ. ತಾನು ಯಾರಿಗಾಗಿ ಕಾಯುತ್ತಿದ್ದಳೋ ಆತ ಬೇರೆ ಮದುವೆಯಾಗಿ, ಮಕ್ಕಳು, ಮೊಮ್ಮಕ್ಕಳು ಇದ್ದಾರೆ ಎಂದು ತಿಳಿದು ಆಕೆ ಜರ್ಜರಿತಳಾಗಿದ್ದಾಳೆ. ಗಂಡನ ಕಂಡಾಕ್ಷಣ ಆತನನ್ನು ಗದರಿಸುವುದು ಪ್ರೀತಿಯಿಂದ ಒಪ್ಪಿಕೊಳ್ಳುವುದನ್ನು ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ