
ಮುದ್ದು ಮಕ್ಕಳ (ಚಿಕ್ಕ ಮಕ್ಕಳು) ಆಟ ತುಂಟಾಟಗಳನ್ನು ನೋಡುವುದೇ ಚಂದ. ಹೆತ್ತವರು ಕೂಡ ಮಕ್ಕಳ ಆಟ ಪಾಠಗಳನ್ನು ಕಣ್ಣು ತುಂಬಿಸಿಕೊಳ್ಳುತ್ತಾರೆ. ಈ ಪುಟ್ಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಮುದ್ದಾದ ಕ್ಲಿಪಿಂಗ್ ವೈರಲ್ ಆಗಿದ್ದು, ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳು ಕೈ ಜೋಡಿಸಿಕೊಂಡು ನಿಂತುಕೊಂಡರೆ, ಪುಟಾಣಿಯೊಂದು ಲಾಲಿಪಾಪ್ ತಿನ್ನೋದ್ರಲ್ಲಿ ಬ್ಯೂಸಿಯಾಗಿದೆ. ಈ ಪುಟ್ಟ ಬಾಲಕನ ವಿಡಿಯೋ ನೋಡಿ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
Shubham_kr_rana ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳೆಲ್ಲಾ ಸಾಲಾಗಿ ನಿಂತಿರುವುದನ್ನು ಕಾಣಬಹುದು. ಮಕ್ಕಳೆಲ್ಲಾ ಕೈ ಜೋಡಿಸಿ ನಿಂತು ಪ್ರಾರ್ಥನೆಗೆ ಸಜ್ಜಾದರೆ, ಆದರೆ ಪುಟಾಣಿಯೊಂದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಲಾಲಿ ಪಾಪ ಸವಿಯೋದ್ರಲ್ಲಿಯೇ ಬುಸ್ಯಿಯಾಗುತ್ತಿದೆ. ಲಾಲಿಪಾಪ್ ತಿಂದ ಬಳಿಕ ಕಡ್ಡಿಯನ್ನು ಜೇಬಿಗೆ ಹಾಕಿ ಕಣ್ಣು ಮುಚ್ಚಿ ಕೈ ಜೋಡಿಸಿ ನಿಂತಿದೆ. ಅಲ್ಲೇ ಇದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಇದನ್ನೂ ಓದಿ: ಕಷ್ಟ ಪಡುತ್ತಿರುವ ತಾಯಿಗೆ ಹೆಗಲು ನೀಡಿದ ಪುಟಾಣಿ
ಈ ವಿಡಿಯೋ 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಕದ್ದು ತಿನ್ನುವ ಮಜಾನೇ ಬೇರೆ ಎಂದರೆ, ಮತ್ತೊಬ್ಬರು, ಕ್ಯಾಮೆರಾ ಮ್ಯಾನ್ ಖಾಸಗಿ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇತರರು, ಮುಗ್ಧತೆ ಮನಸ್ಸಿಗೆ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ