ಪುಟಾಣಿಗಳೇ (ಚಿಕ್ಕ ಮಕ್ಕಳು) ಹಾಗೆ, ತುಂಟಾಟ ಮಾಡೋದರಲ್ಲಿ ಎತ್ತಿದ ಕೈ. ಅದಲ್ಲದೇ ಶಾಲೆಗೆ ಹೋಗಲು ಸ್ವಲ್ಪ ಹಿಂದೇಟು ಹಾಕುತ್ತಾರೆ. ಆದರೆ ಈ ಹೆತ್ತವರು ಪುಲಾಯಿಸಿ ಶಾಲೆಗೆ ಕಳಿಸಿ ಕೊಡುತ್ತಾರೆ. ಆದರೆ ಈ ಪುಟಾಣಿ ಮಾತ್ರ ಶಾಲೆಗೆ (ಶಾಲೆ) ಹೋಗಲ್ಲ ಎಂದು ಹಠ ಮಾಡಿಲ್ಲ. ಶಾಲೆಗೆ ಕಳಿಸಿಕೊಡಲು ಬಂದ ಅಮ್ಮನನ್ನು ಪುಟಾಣಿಯೊಂದು ಮುದ್ದಾಗಿ ಕಳಿಸಿಕೊಟ್ಟಿದೆ. ಮನೆಗೆ ಹೋಗಿ ನೀನು ಟಿವಿ ನೋಡು ಎನ್ನುವ ಪುಟಾಣಿಯ ಮುದ್ದು ಮಾತು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೆಡಿ ಎಫ್‌ಎಂ ಕನ್ನಡ (ರೆಡ್ ಎಫ್‌ಎಂ ಕನ್ನಡ) ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟಾಣಿಯೊಂದು ಶಾಲೆಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದು ಮುದ್ದಾಗಿ ಮಾತನಾಡಿದೆ. ಈ ವಿಡಿಯೋದಲ್ಲಿ ಪುಟ್ಟ ಮಗು ತನ್ನ ತಾಯಿ ಬಳಿ ಟಾಟಾ ಬೇಗ ಬಾ ಎನ್ನುತ್ತಿರುವುದನ್ನು ಕಾಣಬಹುದು. ಆ ಬಳಿಕ ಮನೆಗೆ ಹೋಗಿ ಟಿವಿ ನೋಡು ಎನ್ನುವುದನ್ನು ನೀವಿಲ್ಲಿ ನೋಡಬಹುದು. ಮತ್ತೆ ಮತ್ತೆ ತನ್ನ ತಾಯಿ ಇರುವಲ್ಲಿಗೆ ಓಡಿ ಬರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಮೇಕೆ ಮರಿಯನ್ನು ರಕ್ಷಿಸಲು ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿಸಿದ್ರು
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಸೇರಿದ್ದು, ಒಬ್ಬ ಬಳಕೆದಾರ ಮುದ್ದು ಕಂದ ಎಂದರೆ, ಮತ್ತೊಬ್ಬರು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಮುದ್ದಾದ ವಿಡಿಯೋ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ