ಪುಟಾಣಿಗಳೇ (ಚಿಕ್ಕ ಮಕ್ಕಳು) ಹಾಗೆ, ಸಣ್ಣ ಸಣ್ಣ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಇನ್ನು ಯಾವುದಾದರು ಕಥೆಯಲ್ಲಿ ಬರುವ ಪಾತ್ರವನ್ನು ನಿಜವೆಂದು ಭಾವಿಸುತ್ತಾರೆ. ಆದರೆ ಇಲ್ಲೊಬ್ಬ ಪುಟ್ಟ ಹುಡುಗನು ಕೂಡ ಪುಣ್ಯಕೋಟಿ (ಪುಣ್ಯಕೋಟಿ) ಗೋವಿನ ಹಾಡು ಕೇಳಿ, ಅದು ಮಾಡಿದ ತ್ಯಾಗವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದೆ ನೆಟ್ಟಿಗರು ಈ ಪುಟಿಯ ಮುಗ್ಧತೆಗೆ ,ಮನಸೋತಿದ್ದಾರೆ.
ಕೋಸ್ಟಲ್ ಬೀಟ್ಸ್ (ಕೋಸ್ಟಲ್ ಬೀಟ್ಸ್) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆಯವರೆಲ್ಲರೂ ಟಿವಿಯ ಮುಂದೆ ಕುಳಿತು ಪುಣ್ಯಕೋಟಿ ಗೋವಿನ ಹಾಡನ್ನು ವೀಕ್ಷಿಸುತ್ತಿದ್ದಾರೆ. ಈ ನಡುವೆ ಈ ಪುಟ್ಟ ಬಾಲಕನು ಈ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಸ್ಟೇಜ್ ಮೇಲೆ ಹೊಗೆ ಕಂಡು ಭಯದಲ್ಲೇ ಅಳುತ್ತಾ ಓಡಿಹೋದ ಪುಟಾಣಿ ಡ್ಯಾನ್ಸರ್ಸ್
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಸೇರಿದ್ದು, ಒಬ್ಬ ಬಳಕೆದಾರ ಮುಗ್ಧತೆ ಎಲ್ಲಾ ಕಾಲದಲ್ಲೂ ಸುಂದರ ದೃಶ್ಯ. ಇತರರು, ಈವಾಗ್ಲೂ ಈ ಪುಣ್ಯಕೋಟಿ ಹಾಡು ಕೇಳುವಾಗ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪುಣ್ಯಕೋಟಿ ಹಾಡಿನಲ್ಲಿ ಅಡಗಿರುವ ಭಾವನೆ, ದೇವರು ಮಗುವಿಗೆ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ