Headlines

Video: ಶವರ್ ಇಲ್ಲದೇನೇ ಈ ಪುಟಾಣಿ ಸ್ನಾನ ಮಾಡುವ ರೀತಿ ನೋಡಿ

Video: ಶವರ್ ಇಲ್ಲದೇನೇ ಈ ಪುಟಾಣಿ ಸ್ನಾನ ಮಾಡುವ ರೀತಿ ನೋಡಿ


ಕೆಲವರ ಬದುಕಿನಲ್ಲಿ ಹಣ, ಶ್ರೀಮಂತಿಕೆಯಿದ್ದು ಖುಷಿ (ಸಂತೋಷ) ಅನ್ನೋದೆ ಇರಲ್ಲ. ಆದರೆ ಇದ್ಯಾವುದು ಇಲ್ಲದೇ ಕೆಲವು ಜೀವನದಲ್ಲಿ ಸಂತೋಷದಿಂದ ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಈ ಪುಟಾಣಿಯೇ (ಚಿಕ್ಕ ಮಕ್ಕಳು) ಸಾಕ್ಷಿ. ಹೌದು ಮನೆಯ ಹೊರಭಾಗದಲ್ಲಿ ಸ್ನಾನ ಮಾಡಿದ್ದು ಅದರಲ್ಲೇ ಖುಷಿಯನ್ನು ಕಂಡಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

@shutupari ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ಮನೆಯ ಹೊರಭಾಗದಲ್ಲಿ ಸ್ನಾನ ಮಾಡಲು ಮುಂದಾಗಿದೆ. ಈ ವೇಳೆ ಪುಟಾಣಿ ನೀರನ್ನು ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿ ಅದನ್ನು ಮೇಲಕ್ಕೆ ನೇತುಹಾಕಿ, ಅದರ ಕೆಳಭಾಗದಲ್ಲಿ ನಿಂತು ಸ್ನಾನ ಮಾಡುವುದನ್ನು ನೋಡಬಹುದು. ಮೈಗೆ ಸೋಪ್ ಹಚ್ಚಿಕೊಂಡು, ಪೊರಕೆಯಿಂದ ಪ್ಲಾಸ್ಟಿಕ್ ಚೀಲದಲ್ಲಿ ರಂಧ್ರ ಮಾಡಿ ಸ್ನಾನವನ್ನು ಆನಂದಿಸುತ್ತಿರುವುದು ಕಂಡುಬರುತ್ತದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಕೆಸರು ಗದ್ದೆಯಲ್ಲಿ ಈಜಾಡುತ್ತಿರುವ ಪುಟಾಣಿಗಳು; ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಇದುವರೆಗೆ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಮತ್ತೆ ಮಕ್ಕಳಾಗಬಹುದೇ? ನನಗೆ ಆ ದಿನಗಳು ತುಂಬಾ ನೆನಪಾಗುತ್ತಿದೆ. ಇತರರು, ಕಡಿಮೆ ಬಜೆಟ್‌ನಲ್ಲಿ ಶವರ್ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಇದೆ ನೋಡಿ ಬುದ್ಧಿವಂತಿಕೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *