Headlines

Video: ಹಗ್ಗ ಎಳೆದ್ರೂ ಕದಲದೇ ನಿಂತಿದ್ದ ಎಮ್ಮೆ ಕರುವಿಗೆ ಸವಾಲು ಹಾಕಿದ ಪುಟಾಣಿ

Video: ಹಗ್ಗ ಎಳೆದ್ರೂ ಕದಲದೇ ನಿಂತಿದ್ದ ಎಮ್ಮೆ ಕರುವಿಗೆ ಸವಾಲು ಹಾಕಿದ ಪುಟಾಣಿ


Video: ಹಗ್ಗ ಎಳೆದ್ರೂ ಕದಲದೇ ನಿಂತಿದ್ದ ಎಮ್ಮೆ ಕರುವಿಗೆ ಸವಾಲು ಹಾಕಿದ ಪುಟಾಣಿ

ಈಗಿನ ಕಾಲದ ಮಕ್ಕಳು (ಮಕ್ಕಳು) ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆನೇ. ಏನೇ ಕೇಳಿದ್ರೂ ಪಟ ಪಟನೇ ಉತ್ತರ ಹೇಳ್ತಾರೆ. ಹೆತ್ತವರನ್ನು ಮಾತಿನಲ್ಲೇ ಕಟ್ಟಿ ಹಾಕ್ತಾರೆ, ಆದರೆ ಈ ಪುಟ್ಟ ಹುಡುಗಿಯೂಚಿಕ್ಕ ಹುಡುಗಿ) ಎಮ್ಮೆ ಕರುವಿಗೆ ಓಪನ್ ಚಾಲೆಂಜ್ ಹಾಕಿದ್ದಾಳೆ. ಕುತ್ತಿಗೆಗೆ ಕಟ್ಟಿದ ಹಗ್ಗವನ್ನು ಎಷ್ಟು ಎಳೆದರೂ ಎಮ್ಮೆ ಕರುವು ಕದಲದೆ ನಿಂತುಕೊಂಡಿದ್ದು, ಇದರಿಂದ ಕೋಪಗೊಂಡ ಪುಟ್ಟ ಹುಡುಗಿಯೂ ಸವಾಲು ಹಾಕಿರುವ ವಿಡಿಯೋ ವೈರಲ್ ಆಗಿದೆ. ಈ ಪುಟ್ಟ ಬಾಲಕಿಯ ಮಾತು ಕೇಳಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಅಯೂಬ್ ಖಿಲ್ಜಿ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಪುಟ್ಟ ಹುಡುಗಿಯೊಂದು ಎಮ್ಮೆ ಕರುವಿಗೆ ಕಟ್ಟಿದ ಹಗ್ಗವನ್ನು ಎಳೆಯುತ್ತಿರುವುದನ್ನು ಕಾಣಬಹುದು. ಎಮ್ಮೆ ಕರುವು ತಾನು ಬರಲ್ಲ ಎಂದು ಹಠ ಹಿಡಿದು ನಿಂತಿದೆ. ಇದೆ ವೇಳೆ ಈ ಪುಟ್ಟ ಬಾಲಕಿ ಈ ಕರುವಿಗೆ ಸವಾಲು ಹಾಕಿದ್ದು, ನಾನು ಕೂಡ ನಿಮ್ಮ ಅಮ್ಮನ ಹಾಲು ಕುಡಿದೇ ಬೆಳೆದಿದ್ದು ಎಂದು ಹೇಳಿದ್ದೆ. ಮತ್ತೆ ತನ್ನ ಪ್ರಯತ್ನ ಬಿಡದೆ ಎಮ್ಮೆ ಕರುವಿನ ಕುತ್ತಿಗೆಗೆ ಕಟ್ಟಿದ ಹಗ್ಗವನ್ನು ಎಳೆಯುತ್ತಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನಿಗೆ ಸುರಕ್ಷತೆಯ ಪಾಠ ಮಾಡಿದ ಪುಟ್ಟ ಹುಡುಗಿ

ಈ ವಿಡಿಯೋ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಬಯಸಿವೆ. ಒಬ್ಬ ಬಳಕೆದಾರ, ಪುಟ್ಟ ಹುಡುಗಿಯ ಮಾತು ಕೇಳಿ ನಗು ಇದೆ. ಮತ್ತೊಬ್ಬರು, ಈ ಪುಟಾಣಿಯ ಸವಾಲು ಮಜಾವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *