Headlines

Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ


Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ತಂದೆ ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗಳ ಪಾಲಿಗೆ ಅಪ್ಪ (ತಂದೆ) ಎಲ್ಲವೂ ಆಗಿರುತ್ತದೆ. ಇತ್ತ ಕಷ್ಟಪಟ್ಟು ದುಡಿದು ಮಗಳು ಇಷ್ಟಗಳನ್ನು ನೀಡುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಬೇರೆ ಇಲ್ಲ. ಮಗಳ ಖುಷಿಯಲ್ಲಿ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಪುಟಾಣಿಯೊಂದು ನಡುರಸ್ತೆಯಲ್ಲೇ ತಂದೆಯ ಮೇಲೆ ಕೋಪಿಸಿಕೊಂಡಿದೆ. ತಂದೆ ಎಷ್ಟು ರಮಿಸಿದ್ರೂ ಈ ಪುಟಾಣಿಯ ಕೋಪ ಮಾತ್ರ ಕಡಿಮೆಯಾಗಿಲ್ಲ. ಈ ಮುದ್ದಾದ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗುತರಿಸಿದೆ.

republicmag.pk ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಂದೆ ಮಗಳ ಬಾಂಧವ್ಯ ಕಾಣಿಸಿಕೊಂಡಿದೆ. ಪುಟಾಣಿಯೊಂದು ನಡುರಸ್ತೆಯಲ್ಲೇ ಕೋಪಿಸಿಕೊಂಡಿದೆ. ಇತ್ತ ತಂದೆಯೂ ತನ್ನ ಮಗಳನ್ನು ರಮಿಸಿ ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈ ಪುಟ್ಟ ಮಗಳು ಮಾತ್ರ ತಂದೆ ಮಾತನ್ನು ಕೇಳುತ್ತಲೇ ಇಲ್ಲ.

ವೈರಲ್ ವಿಡಿಯೋ ಇಲ್ಲಿದೆ

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ರಿಪಬ್ಲಿಕ್ ಮ್ಯಾಗಜೀನ್ ಪಾಕಿಸ್ತಾನ್ (@republicmag.pk) ಹಂಚಿಕೊಂಡ ಪೋಸ್ಟ್

ಇದನ್ನೂ ಓದಿ: ಎಷ್ಟು ಚಂದ ಈ ಬಾಂಧವ್ಯ; ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಕೈ ತುತ್ತು ನೀಡಿದ ಪುಟಾಣಿ

ಈ ವಿಡಿಯೋ ಮೂವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಬಳಕೆದಾರ ಮುದ್ದಾಗಿದೆ ದೃಶ್ಯ ಎಂದರೆ, ಮತ್ತೊಬ್ಬರು, ಮಗಳು ಸಮಾಧಾನ ಪಡಿಸಲು ತಂದೆಗೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *