Headlines

Video: ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನಿಗೆ ಸುರಕ್ಷತೆಯ ಪಾಠ ಮಾಡಿದ ಪುಟ್ಟ ಹುಡುಗಿ

Video: ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನಿಗೆ ಸುರಕ್ಷತೆಯ ಪಾಠ ಮಾಡಿದ ಪುಟ್ಟ ಹುಡುಗಿ


ವಿಡಿಯೋ: ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿರುವ ಯುವಕನಿಗೆ ಸುರಕ್ಷತೆಯ ಪಾಠ ಮಾಡಿದ ಪುಟ್ಟ ಹುಡುಗಿ

ವಾಹನ ಚಲಾಯಿಸುವ ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (ಹೆಲ್ಮೆಟ್) ಧರಿಸುವುದು ಕಡ್ಡಾಯ. ಆದರೆ ಈ ರೂಲ್ಸ್ ಬ್ರೇಕ್ ಮಾಡ್ತಾರೆ. ಕೆಲವೊಮ್ಮೆ ಪೊಲೀಸರ ಕೈಯಲ್ಲಿ ತಗಲಾಕಿ ಕೊಳ್ತಾರೆ. ಆದರೆ ಇಲ್ಲೊಬ್ಬ ಯುವಕ ಪೋಲೀಸರ ಕೈಯಲ್ಲಿ ಅಲ್ಲ, ಪುಟಾಣಿ (ಚಿಕ್ಕ ಹುಡುಗಿ) ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಹೌದು, ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿರುವ ಯುವಕನಿಗೆ ಪುಟ್ಟ ಹುಡುಗಿಯೂ ಸುರಕ್ಷತೆಯ ಪಾಠ ಮಾಡಿದ್ದು, ಹೆಲ್ಮೆಟ್ ಧರಿಸುವಂತೆ ಹೇಳಿದೆ. ಈ ಪುಟಾಣಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

instaviral.inm ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದನ್ನು ಕಾಣಬಹುದು. ಹೆತ್ತವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಪುಟ್ಟ ಹುಡುಗಿಯೂ ಅದನ್ನು ಗಮನಿಸುತ್ತಾಳೆ. ತಕ್ಷಣವೇ ಈ ಯುವಕನನ್ನು ಕರೆದು, ಹೆಲ್ಮೆಟ್ ಹಾಕುವಂತೆ ಹೇಳುವುದನ್ನು ಕಾಣಬಹುದು. ಈ ಪುಟಾಣಿ ಹೆತ್ತವರು, ಈ ಮಗಳ ಮಾತು ಕೇಳಿ ಜೋರಾಗಿ ನಗುತ್ತಿರುವುದು ಕಂಡುಬರುತ್ತದೆ.

ವೈರಲ್ ವಿಡಿಯೋ ಇಲ್ಲಿದೆ

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

@instaviral.inm ನಿಂದ ಹಂಚಿಕೊಂಡ ಪೋಸ್ಟ್

ಇದನ್ನೂ ಓದಿ: ಪುಟ್ಟ ಹುಡುಗಿ ಐಸ್ ಕ್ರೀಮ್ ಕೊಟ್ಟಿದ್ದಕ್ಕೆ ಮುತ್ತು ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ

ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ. ಒಬ್ಬ ಬಳಕೆದಾರ ಈ ಪುಟಾಣಿಯನ್ನು ಬ್ರಾಂಡ್ ಅಂಬಾಸಿಡರ್ ಮಾಡಿ. ಇತರರು, ಹೇ ಬಾಬು, ಜೈ ಬಾಬು ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *