ಶಿವಮೊಗ್ಗ, (ಡಿಸೆಂಬರ್ 12): ಈ ಸ್ನೇಹ ಅನ್ನೋದೇ ಹಿಂಗೆ. ಗೆಳತನ ಒಂದು ಸರಿ ಬೆಳೆದರೆ ಸಾಕು ತನ್ನ ಮನೆಯಲ್ಲಿ ಏನೇ ಇರಲಿ ಇಲ್ಲದಿರಲಿ ಸ್ನೇಹಿತನಿಗೊಂದು ಪಾಲು ಎಂಬಂತೆ ಇರುತ್ತೆ. ಆದರೆ ಆ ಗೆಳತನದಲ್ಲಿ ಮೋಸವಾದ್ರೆ ಅದು ಕೊಲೆ ಮಾಡುವುದಕ್ಕೂ ಕೊಲೆ ಆಗುವುದಕ್ಕೂ ಕಾರಣ. ಅದೇ ರೀತಿ ಸ್ನೇಹದ ಲೋಕದಲ್ಲಿ ತೇಲಾಡುತ್ತಿದ್ದವರು ಈ ಶಿವು ಮತ್ತು ಹರೀಶ. ಎಷ್ಟರ ಮಟ್ಟಿಗೆ ಅಂದ್ರೆ ಪ್ರತಿನಿತ್ಯ ಇವರಿಬ್ಬರೂ ಕೆಲಸ ಮುಗಿಸಿದ ನಂತರ ಒಂದೆಡೆ ಸೇರಿ ತಮ್ಮ ಕೆಲಸದಲ್ಲಾದ ನೋವನ್ನ ಮರೆಯಲು ತಿನ್ನಲು ಕುಳಿತುಕೊಳ್ಳಲು. ಆದರೆ ಹರೀಶನ ಆಸೆಯಿಂದಾಗಿ ಈಗ ಆ ಗೆಳತನದಲ್ಲಿ ದೊಡ್ಡ ಬಿರುಕೊಂದುಂಟಾಗಿ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಹೌದು… ಶಿವಮೊಗ್ಗ (ಶಿವಮೊಗ್ಗ) ತಾಲೂಕು ಬನ್ನಿಕೆರೆ ಗ್ರಾಮದ ವ್ಯಕ್ತಿಯನ್ನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆ ಪ್ರಕರಣವನ್ನ ಒಳಹೊಕ್ಕು ನೋಡಿದಾಗ ಅಲ್ಲಿ ಕಾಣಿಸಿದ್ದು ಅನೈತಿಕ ಸಂಬಂಧ.
ಶಿವಮೊಗ್ಗ ತಾಲೂಕು ಬನ್ನಿಕೆರೆ ಗ್ರಾಮದಲ್ಲಿ ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ (ದಾಳಿ) ಮಾಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೆಂಡತಿ ಮೇಲೆ ಕಣ್ಣಾಕಿದ್ದಕ್ಕೆ ಶಿವು ಎಂಬಾತ ತನ್ನ ಆಪ್ತ ಸ್ನೇಹಿತ ಹರೀಶ್ ನಾಯ್ಕ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಶಿವು ಎಣ್ಣೆ ಪಾರ್ಟಿಗೆಂದು ಸ್ನೇಹಿತ ಹರೀಶ್ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆ ಸಮಯದಲ್ಲಿ ಹರೀಶ್, ಶಿವು ಹೆಂಡ್ತಿ ಮೇಲೆ ಕಣ್ಣಾಕಿದ್ದು, ಸಲುಗೆಯಿಂದ ಇರುವುದನ್ನು ಕಣ್ಣಾರೆ ಕಂಡಿದ್ದಾನೆ. ಇದರಿಂದ ಕೋಪಗೊಂಡು ಮಚ್ಚಿನಿಂದ ಹರೀಶ್ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತೋರಿಸಿದರು.
ಇದನ್ನೂ ಓದಿ: ಇನ್ನೇನು ತಾಳಿ ಕಟ್ಟುವ ವೇಳೆಯಲ್ಲಿ ಮಂಟಪ್ಪಕ್ಕೆ ಪ್ರೇಯಸಿ ಎಂಟ್ರಿ:ಕಕ್ಕಾಬಿಕ್ಕಿಯಾದ ಪ್ರಿಯಕರ
ಶಿವು ನಾಯ್ಕ್ ವೃತ್ತಿಯಲ್ಲಿ ಜೆಸಿಬಿ ಆಪರೇಟರ್, ಹರೀಶ್ ನಾಯ್ಕ್ ಕೂಲಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಇಬ್ಬರು ಎಣ್ಣೆ ಪಾರ್ಟಿ ಮಾಡುವ ಯೋಜನೆ ಇತ್ತು. ಅದರಂತೆ ಶಿವು, ಗೆಳೆಯ ಹರೀಶ್ ಅವರನ್ನು ಕರೆದುಕೊಂಡು ಎಣ್ಣೆ ಸಮೇತ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ, ಶಿವು ಸೈಡ್ಸ್ ತರಲೆಂದು ಆಚೆ ಹೋಗಿದ್ದಾನೆ. ಇದೇ ಸಿಕ್ಕಿದ್ದೇ ಚಾನ್ಸ್ ಎಂದ ಹರೀಶ್, ಗೆಳೆಯ ಶಿವು ಹೆಂಡತಿ ಜತೆ ಶುರುಮಾಡಿಕೊಂಡಿದ್ದಾನೆ. ಅದೇ ಸ್ವಲ್ಪ ಸಮಯದ ನಂತರ ಶಿವು ಮನೆಗೆ ಬಂದಿದ್ದು, ಒಳಗೆ ತನ್ನ ಹೆಂಡ್ತಿ ಜೊತೆ ಹರೀಶ್ ಇರುವುದನ್ನು ಕಣ್ಣಾರೆ ಕಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಶಿವು, ಮನೆಯಲ್ಲಿದ್ದ ಮಚ್ಚಿನಿಂದ ಹರೀಶನ ತಲೆಗೆ ಹೊಡೆದಿದ್ದಾನೆ.ಈ ದಾಳಿಯಿಂದ ಹರೀಶ್ ನಾಯ್ಕ್ ತಲೆಯ ಭಾಗಕ್ಕೆ ತೀವ್ರ ತೊಂದರೆಯಾಗಿದ್ದು, ತಕ್ಷಣ ಸ್ಥಳೀಯರು ಹರೀಶ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಹರೀಶ್ ಕೋಮಾದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಮೊದಲಿನಿಂದಲೂ ಇತ್ತು
ಪೊಲೀಸ್ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ, ಆರೋಪಿ ಶಿವನಾಯ್ಕನ ಪತ್ನಿಯೊಂದಿಗೆ ಹಲ್ಲೆಗೊಳಗಾದ ಹರೀಶ್ ನಾಯ್ಕ್ ಅನೈತಿಕ ಸಂಬಂಧ ಹೊಂದಿದ್ದ. ಇದೇ ವಿಚಾರವಾಗಿ ಕೋಪಗೊಂಡಿದ್ದ ಶಿವನಾಯಕ್, ಇಂದು (ಡಿಸೆಂಬರ್ 12 ರಂದು ಬೆಳಗ್ಗೆ ಹರೀಶ್ ನಾಯ್ಕ್ ಮೇಲೆ ಮಚ್ಚು ಬೀಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದ್ದು, ದಾಳಿಯಿಂದ ತೀವ್ರ ಗಾಯಗೊಂಡಿರುವ ಹರೀಶ್ ನಾಯ್ಕ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.