ಬದುಕು (ಜೀವನ) ಯಾವಾಗ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಒಂಟಿಯಾಗಿ ತಮ್ಮ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡು ಅವರಿಗೆ ಉತ್ತಮ ಭವಿಷ್ಯ ಕಟ್ಟಿ ಕೊಡಲಾಯಿತು. ಇಲ್ಲೊಬ್ಬ ಆಟೋ ಡ್ರೈವರ್ ನದ್ದು (ಆಟೋ ಡ್ರೈವರ್) ಅದೇ ಕಥೆ. ಪತ್ನಿಯನ್ನು ಕಳೆದುಕೊಂಡ ಆಟೋ ಡ್ರೈವರ್ ತನ್ನ ಮಗಳಿಗೆ ತಂದೆ ತಾಯಿಯೂ ಆಗಿದ್ದಾನೆ. ಹೀಗಾಗಿ ಆಟೋದಲ್ಲೇ ತನ್ನ ಪುಟ್ಟ ಪ್ರಪಂಚವನ್ನು ಮಲಗಿಸಿಕೊಂಡು ದುಡಿಮೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾನೆ. ಈ ವ್ಯಕ್ತಿಯ ಬದುಕಿನ ಕಣ್ಣೀರಿನ ಕಥೆಯನ್ನು ಪ್ರಯಾಣಿಕನೊಬ್ಬ ಬಿಚ್ಚಿಟ್ಟಿದ್ದಾನೆ.
@SaffronChargers ಹೆಸರಿನ ಎಕ್ಸ್ ಖಾತೆಯಲ್ಲಿ ಆಟೋ ಡ್ರೈವರ್ ನ ಕಥೆಯನ್ನು ಹಂಚಿಕೊಳ್ಳಲಾಗಿದೆ. ಈ ಆಟೋ ಚಾಲಕನನ್ನು ಭೇಟಿ ಮಾಡಿ, ಈತ ಒಬ್ಬ ಸಿಂಗಲ್ ಪೇರೆಂಟ್. ಹೆಂಡತಿ ತೀರಿಹೋದ ಬಳಿಕ ಈತನಿಗೆ ಮಗಳೇ ಪ್ರಪಂಚ. ಮಗಳನ್ನು ಕಲಿಯುತ್ತಾ, ಜೀವನೋಪಾಯಕ್ಕಾಗಿ ದುಡಿಯುತ್ತಾ ಆಕೆಯನ್ನು ಏಕಾಂಗಿಯಾಗಿ ಸಾಕುತ್ತಿದ್ದಾನೆ. ಪುರುಷನಾಗಿರುವುದು ಅಷ್ಟು ಸುಲಭವಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
ಈ ಆಟೋ ಡ್ರೈವರ್, ಒಂಟಿ ಪೋಷಕರನ್ನು ಭೇಟಿ ಮಾಡಿ. ಅವನ ಹೆಂಡತಿ ತೀರಿಕೊಂಡಳು ಮತ್ತು ಅಂದಿನಿಂದ ಅವನು ತನ್ನ ಪುಟ್ಟ ಮಗಳನ್ನು ಎಲ್ಲೆಡೆ ಸಾಗಿಸುತ್ತಾನೆ, ಜೀವನವನ್ನು ಸಂಪಾದಿಸುತ್ತಾನೆ ಮತ್ತು ಅವಳನ್ನು ಒಬ್ಬಂಟಿಯಾಗಿ ಬೆಳೆಸುತ್ತಾನೆ.
ಮನುಷ್ಯನಾಗುವುದು ಸುಲಭವಲ್ಲ 💔 pic.twitter.com/JKVlNmtlg0
— ಕೇಸರಿ ಚಾರ್ಜರ್ಸ್ (@SaffronChargers) ಫೆಬ್ರವರಿ 9, 2026
ಈ ವಿಡಿಯೋದಲ್ಲಿ ಆಟೋ ಚಾಲಕನೊಬ್ಬ ತನ್ನ ಪುಟ್ಟ ಮಗಳನ್ನು ಆಟೋದಲ್ಲಿ ಮಲಗಿಸಿರುವುದನ್ನು ಕಾಣಬಹುದಾಗಿದೆ. ಈ ಆಟೋದಲ್ಲಿದ್ದ ಪ್ರಯಾಣಿಕರೊಬ್ಬರು ‘ಆಟೋದಲ್ಲಿ ಏಕೆ ಮಲಗಿದ್ದರು? ಯಾರಿದು ಮಗು? ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಆಟೋ ಚಾಲಕನು ಇವಳು ನನ್ನ ಮಗಳು. ಇತ್ತೀಚೆಗಷ್ಟೇ ನನ್ನ ಹೆಂಡತಿ ತೀರಿಕೊಂಡಳು. ಮಗಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಆಟೋ ಓಡಿಸಲು ಬರಲು ನನಗೆ ಸಾಧ್ಯವಿಲ್ಲ. ನಾನು ನೋಡಿಕೊಳ್ಳಬೇಕು. ಜೊತೆಗೆ ಕೆಲಸಕ್ಕೆ ಹೋಗದಿದ್ದರೆ ನಮ್ಮ ಜೀವನ ನಡೆಯುವುದು ಕಷ್ಟವಾಗುತ್ತದೆ. ನಾನು ಈಗ ಸಿಂಗಲ್ ಪೇರೆಂಟ್ ಆಗಿರುವ ಕಾರಣ, ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಕೆಲಸಕ್ಕೆ ಕರೆತರುತ್ತೇನೆ ಎಂದು ಹೇಳಿದ್ದಾನೆ. ಈ ಆಟೋ ಪ್ರಯಾಣಿಕನ ಕಥೆ ಕೇಳಿ ಮನದಲ್ಲೇ ನೊಂದುಕೊಂಡ ಪ್ರಯಾಣಿಕ, ಮಗು ಎಚ್ಚರಗೊಂಡಾಗ ಜ್ಯೂಸ್ ಕೊಡಿಸಿ ಎಂದು ಹಣ ನೀಡುತ್ತಿತ್ತು.
ಇದನ್ನೂ ಓದಿ: ರೈಲಿನಲ್ಲಿ ಬ್ರೆಸ್ಲೆಟ್ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ಅಪ್ಪ ಯಾವತ್ತಿದ್ದರೂ ಹೀರೋನೇ. ಮತ್ತೊಬ್ಬರು, ಕಷ್ಟಪಟ್ಟು ದುಡಿಯುತ್ತಾ ಮಗಳನ್ನು ಏಕಾಂಗಿಯಾಗಿ ಸಾಕುವುದು ಅಷ್ಟು ಸುಲಭವಲ್ಲ. ಇವರೇ ನಿಜವಾದ ಹೀರೋಗಳು, ಈ ಕಥೆ ಹೃದಯಸ್ಪರ್ಶಿ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಅಪ್ಪನ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ