ಬೆಂಗಳೂರು, (ಡಿಸೆಂಬರ್ 19): ಆಟವಾಡುತ್ತಿದ್ದ ಬಾಲಕನಿಗೆ ಕಾಲಿನಿಂದ ಒದ್ದು ದುರುಳನೊಬ್ಬ ಕ್ರೌರ್ಯ ಮರೆದಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ನಡೆದಿದೆ. ತನ್ನ ಪಾಡಿಗೆ ತಾನು ಆಟವಾಡ್ತಿದ್ದ ಬಾಲಕನನ್ನ ರಂಜನ್ ಎಂಬಾತ ಫುಟ್ಬಾಲ್ನಂತೆ ಓದು ವಿಕೃತಿ ಮೆರೆದಿದ್ದಾನೆ. ರಂಜನ್ ಹಲ್ಲೆಯಿಂದ ಬಾಲಕನ ಮೈ-ಕೈಗೆ ಗಾಯವಾಗಿದ್ದು, ಬಾಲಕನ ತಾಯಿ ದೂರು ನೀಡಿದ ಆರೋಪಿ ಬನಶಂಕರಿ ಆರೋಪಿ ರಂಜನ್ ನನ್ನ ಬಂಧಿಸಿದ್ದಾರೆ.
ಹಲ್ಲೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ರಸ್ತೆಯಲ್ಲಿ ಸಿಸಿಟಿವಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸೈಕೋ ರಂಜನ್ ಮಕ್ಕಳ ಮೇಲೆ ನಡೆಸಿರೋ ವಿಕೃತಿಗಳು ಬೆಳಕಿಗೆ ಬಂದಿವೆ. ಇಂತಹ ಕೃತ್ಯ ಇದೆ ಮೊದಲಲ್ಲ, ಈ ಹಿಂದೆಯೂ ಹಲವರಿಗೆ ಈ ಸೈಕೋ ರಂಜಿತ್ ಕಿರುಕುಳ ಕೊಟ್ಟಿದ್ದಾನೆ ಎಂಬುದಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.