ಪ್ರೀತಿಸಿ ಮದ್ವೆ: ಹಸುಗೂಸು ಸೇರಿ 3 ಹೆಣ್ಮಕ್ಕಳನ್ನ ಪತ್ನಿ ಕೈಗಿಟ್ಟು ಪತಿ ಪರಾರಿ

ಪ್ರೀತಿಸಿ ಮದ್ವೆ: ಹಸುಗೂಸು ಸೇರಿ 3 ಹೆಣ್ಮಕ್ಕಳನ್ನ ಪತ್ನಿ ಕೈಗಿಟ್ಟು ಪತಿ ಪರಾರಿ


ಬೆಂಗಳೂರು, (ಜನವರಿ 04): ಮೂರೂ ಹೆಣ್ಣು ಮಕ್ಕಳು (ಮಕ್ಕಳು) ಎಂದು ಪತ್ನಿಗೆ ಕೈಕೊಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ (ಬೆಂಗಳೂರು) ನಡೆದಿದ್ದು, ಈ ಸಂಬಂಧ ಈಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್, ಪತ್ನಿಗೆ ಕೈಕೊಟ್ಟು ಪರಾರಿಯಾದ ವ್ಯಕ್ತಿ. ಹರೀಶ್ ಮೂಲತಃ ರಾಜಸ್ಥಾನದವನಾಗಿದ್ದರೆ, ಬೆಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದಾನೆ. ಈತ ವರಲಕ್ಷ್ಮೀ ಎಂಬ ಸ್ಟಾಫ್ ನರ್ಸ್ ನ ಪ್ರೀತಿಸಿ ಮದುವೆ ಆಗಿದ್ದ. ಬಳಿಕ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಿದ್ದ. ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಈ ಜೋಡಿಗೆ ಹುಟ್ಟಿದ ಮೂವರು ಮಕ್ಕಳು ಕೂಡ ಹೆಣ್ಣು. ಇದರಿಂದ ಹರೀಶ್ ವರಲಕ್ಷ್ಮೀಗೆ ಕೈಕೊಟ್ಟು ನಾಪತ್ತೆಯಾಗಿದ್ದಾನೆ.

ಇದು ಹರೀಶ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲ ಇಬ್ಬರು ಮಕ್ಕಳು ಹೆಣ್ಣು ಎಂದು ಗೊತ್ತಾದಾಗ ಮೂರನೇ ಬಾರಿಗೆ ಗಂಡು ಹುಟ್ಟಬಹುದು ಎಂಬ ಆಸೆಯಲ್ಲಿದ್ದರು. ಇದೀಗ ಹರೀಶ್ ಪತ್ನಿ ವಿಜಯಲಕ್ಷ್ಮೀ, ಕಳೆದ ಒಂದೂವರೆ ತಿಂಗಳ ಹಿಂದೆ ಹಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಒಂದೂವರೆ ತಿಂಗಳ ಹಸಗೂಸು ಹಾಗೂ ಇಬ್ಬರು ಮಕ್ಕಳನ್ನ ಪತ್ನಿಯ ಮಡಿಲಿಗೆ ಹಾಕಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು, (ಪ್ರೀತಿಸಿದ ಹುಡುಗನನ್ನು ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ!

ಪತಿ ಕೈಕೊಟ್ಟ ಬೆನ್ನಲ್ಲೇ ಪತ್ನಿ ವರಲಕ್ಷ್ಮೀ ಆತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಮೂವರು ಹೆಣ್ಮಕ್ಕಳು ಎಂದು ನಮ್ಮನ್ನು ಬಿಟ್ಟು ಹೋಗಿ ಮತ್ತೊಂದು ಮಹಿಳೆ ಜೊತೆ ವಾಸವಿದ್ದಾನೆ. ಈಗ ನನಗೆ ಮೂವರು ಮಕ್ಕಳನ್ನು ಸಾಕೋದಕ್ಕೆ ಆಗುತ್ತಿಲ್ಲ. ಮಕ್ಕಳ ಶಾಲಾ ಫೀಸ್, ಮನೆ ಬಾಡಿಗೆ ಕಟ್ಟಲೂ ಕೂಡ ಆಗುತ್ತಿಲ್ಲ. ಇದೀಗ ಹುಟ್ಟಿರುವ ಹಸುಗೂಸನ್ನ ವೈದ್ಯರು ಮಾಡೋದೇ ಕಷ್ಟವಾಗಿದೆ ಎಂದು ಆರೋಪಿಸಿ ಒಂದು ತಿಂಗಳ ಹಿಂದೆಯೇ ಈಶಾನ್ಯ ವಿಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದರೆ, ಹರೀಶನನ್ನು ಕರೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *