ಬೆಂಗಳೂರು, (ನವೆಂಬರ್ 19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದೆ. ಸಿಎಂಎಸ್ ಕಂಪನಿಯ ವ್ಯಾನ್ ಅಡ್ಡಗಟ್ಟಿ ಹಣ ದರೋಡೆ ನಡೆದಿದ್ದು, ಈ ದರೋಡೆಯಿಂದ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಸುಮಾರು 7 ಕೋಟಿ 11 ಲಕ್ಷ ರೂಪಾಯಿ ಹಣ ಇದ್ದ ವಾಹನವನ್ನು ದೋಚಿಕೊಂಡು, ಅಶೋಕ್ ಪಿಲ್ಲರ್ ಬಳಿ ಹೈಜಾಕ್ ಮಾಡಿದ್ದು, ಬಳಿಕ ಹಣವಿದ್ದ ವಾಹನವನ್ನು ಜಯದೇವ ಡೈರಿ ಸರ್ಕಲ್ ಫ್ಲೈಓವರ್ ಬಳಿ ನಿಲ್ಲಿಸಲಾಗಿದೆ. ನಂತರ ದರೋಡೆಕೋರರು ತಮ್ಮ ಹಣವನ್ನು ಇನ್ನೋವಾ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚುಗಾರರು, ಪೊಲೀಸರು ದೌಡಾಯಿಸಿ ಪರಿಶೀಲಿಸುತ್ತಾರೆ. ಇನ್ನು ಈ ದರೋಡೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿರುವುದನ್ನು ಕೇಳಿ.