Bigg Boss Kannada Season 12 Kavya Shaiva: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಮುಗಿದು, ತಿಂಗಳಾಗುತ್ತ ಬಂತು, ಹೀಗಿದ್ದರೂ ಕೂಡ ಕಾವ್ಯ ಶೈವ ಅವರನ್ನು ಭೇಟಿ ಮಾಡೋಕೆ ಆಗಿಲ್ಲ ಎಂದು ಓರ್ವ ವ್ಯಕ್ತಿ ನೊಂದುಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಲೇಖನ ಓದಿ.

ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ, ಗಿಲ್ಲಿ ನಟನಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಗಿಲ್ಲಿ ನಟ-ಕಾವ್ಯ ಮದುವೆಯಾಗಲಿ ಎಂದು ಅನೇಕರು ಹೇಳಿದ್ದುಂಟು. ಈಗ ಕಾವ್ಯ ಅವರನ್ನು ಭೇಟಿ ಮಾಡೋಕೆ ಆಗಿಲ್ಲ ಎಂದು ಅತ್ತಿದ್ದಾರೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗ್ತಿದೆ. ಕಾವ್ಯ ಅವರನ್ನು ಭೇಟಿ ಮಾಡಲು ಆಗ್ತಿಲ್ಲ ಎಂದು ಪುರುಷನೋರ್ವ ಕಣ್ಣೀರು ಹಾಕಿದ್ದಾನೆ. ಇನ್ನು ಕಾವ್ಯ ಹಾಗೂ ಗಿಲ್ಲಿಯ ಟ್ಯಾಟೂವನ್ನು ಕೂಡ ಹಾಕಿಸಿಕೊಂಡಿದ್ದಾರೆ.

ಬಿಳಿದೇವ ಗ್ರಾಮದಿಂದ ಲವ ಎಂದು ಹೆಸರು. ಕಾವ್ಯ ಅವರನ್ನು ಭೇಟಿ ಮಾಡಬೇಕು ಎಂದು ಲವ ಅವರು ಅಳುತ್ತಿದ್ದಾರೆ ಎಂದು ವ್ಯಕ್ತಿಯೋರ್ವರು ವಿಡಿಯೋ ಮಾಡಿದ್ದಾರೆ.

“ಗಿಲ್ಲಿ ನಟ ಸಿಕ್ಕಿದ್ದು, ಅವರ ಕಾಲಿಗೆ ಬಿದ್ದಿದ್ದೇನೆ, ಆಗ ಅವರು ಚಿಕ್ಕವರು ಎಂದು ಹೇಳಿದ್ದಾರೆ. ನನಗೆ ಕಾವ್ಯ ಅವರನ್ನು ನೋಡಬೇಕು” ಎಂದು ಲವ ಅವರು ಹೇಳಿದ್ದಾರೆ.

ಈ ವ್ಯಕ್ತಿಗೆ ಕಾವ್ಯ ಅವರನ್ನು ಭೇಟಿ ಮಾಡೋಕೆ ಆಗಿಲ್ಲ. ಈ ವಿಷಯವನ್ನು ದಯವಿಟ್ಟು ಕಾವ್ಯ ಅವರಿಗೆ ತಿಳಿಸಿ. ಕಾವ್ಯ ಅವರ ಮನೆ ಬಗ್ಗೆ ಗೊತ್ತಿದ್ದ ಕಂಟೆಂಟ್ ಕ್ರಿಯೇಟರ್ಸ್ ಕೂಡ ಇವರಿಗೆ ಸಹಾಯ ಮಾಡಿ ಎಂದು ಹೇಳಿದ್ದಾರೆ.

Source link
Bigg Boss ಕಾವ್ಯ ಶೈವ ಕಾರಣಕ್ಕೆ ಮನ ನೊಂದುಕೊಂಡ ವ್ಯಕ್ತಿ; ವಿಡಿಯೋ ವೈರಲ್!