Headlines

Video: ಕರುವಿನ ಮೈ ಮೇಲಿನ ಉಣ್ಣೆಗಳನ್ನು ಹೆಕ್ಕಿ ತೆಗೆಯುತ್ತಿರುವ ಸಾಕು ನಾಯಿ

Video: ಕರುವಿನ ಮೈ ಮೇಲಿನ ಉಣ್ಣೆಗಳನ್ನು ಹೆಕ್ಕಿ ತೆಗೆಯುತ್ತಿರುವ ಸಾಕು ನಾಯಿ


ಈ ಪ್ರಾಣಿಗಳಿಗೆ (ಪ್ರಾಣಿಗಳು) ಇರುವ ಬುದ್ಧಿ ಮನುಷ್ಯರಿಗಿಲ್ಲ. ಮನುಷ್ಯರಿಗಿಂತ ಈ ಪ್ರಾಣಿಗಳೇ ಲೇಸು ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಸಾಕು ನಾಯಿಯೊಂದು (ಸಾಕು ನಾಯಿ) ಕರುವಿನ ಮೈ ಮೇಲಿರುವ ಉಣ್ಣೆಗಳನ್ನು ನಾಲಿಗೆಯಲ್ಲಿ ನೆಕ್ಕಿ, ಹೆಕ್ಕಿ ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಮುಗ್ಧ ಜೀವಿಗಳ ಬಾಂಧವ್ಯಕ್ಕೆ ಮನಸೋತಿದ್ದಾರೆ.

ಯುವರಾಜ್ ಹೆಗಡೆ ಮೇಗರವಳ್ಳಿ (ಯುವರಾಜ್ ಹೆಗಡೆ ಮೇಗರವಳ್ಳಿ) ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಶಿರುಪತಿ ಗ್ರಾಮದ ಚೇತನ್ ಮನೆಗೆ ಚಿಕಿತ್ಸೆಗೆ ಹೋದಾಗ ಕಂಡ ದೃಶ್ಯವಿದು. ಒಮ್ಮೆಲೇ ನೋಡಿದರೆ ನಾಯಿಯೊಂದು ಕರುವಿಗೆ ಕಚ್ಚುತ್ತಿರುವಂತೆ ಭಾಸವಾದರೂ, ಗಮನಿಸಿ ನೋಡಿದಾಗ ವಿಷಯ ಬೇರೆಯದೇ ಇದೆ. ಅವರ ಮನೆಯ ಸಾಕುನಾಯಿ, ಕರುವಿನ ಮೈಮೇಲಿನ ಉಣ್ಣೆಗಳನ್ನು ಹೆಕ್ಕಿ ತೆಗೆಯುತ್ತಿದೆ. ಕರುವಿಗೂ ಆ ನಾಯಿಯ ಮೇಲೆ ವಿಶ್ವಾಸ ಇದೆ.

ವೈರಲ್ ವಿಡಿಯೋ ಇಲ್ಲಿದೆ

ತನ್ನ ಮುಖ, ಕುತ್ತಿಗೆಯನ್ನು ಚಾಚಿ, ತನ್ನ ಮೈಮೇಲಿನ ಉಣ್ಣೆ/ಒಣಗು ಹೊರಪರಾವಲಂಬಿಗಳನ್ನು ತೆಗೆಸಿಕೊಳ್ಳುತ್ತಿದೆ. ಇದು ಕರುವಿಗೆ ಮಾತ್ರ ಸೀಮಿತವಲ್ಲ. ಅವರ ಮನೆಯ ಎಲ್ಲಾ ಜಾನುವಾರುಗಳಿಗೆ ಮನೆಯ ನಾಯಿಗಳು ಪ್ರತಿ ದಿನವೂ ಇದೆ ರೀತಿ ಉಣ್ಣೆ ತೆಗೆದು ಕಳಿಸುವುದು ದೈನಂದಿನ ದಿನಚರಿಯಂತೆ ಎಂದು ಬರೆಯಲಾಗಿದೆ. ಈ ವಿಡಿಯೋದಲ್ಲಿ ಸಾಕುನಾಯಿಯೂ ಮನೆಯ ಕರುವಿನ ಮೈ ಮೇಲಿನ ಉಣ್ಣೆಗಳನ್ನು ನಾಲಿಗೆಯಲ್ಲಿ ನೆಕ್ಕಿ ತೆಗೆಯುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಕಾಡುಕೋಣ ಹೇಗೆ ಘೀಳಿಡುತ್ತಿದೆ ಗೊತ್ತಾ? ಈ ವಿಡಿಯೋ ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಆ ಮೂಕ ಪ್ರಾಣಿಗಳು ಅದು ಹೇಗೆ ಮಾಹಿತಿ ವಿನಿಮಯ ಮಾಡಿಕೊಳ್ತಾವೇ? ಆಶ್ಚರ್ಯ! ಎಂದು ಹೇಳಿದ್ದಾರೆ. ಮತ್ತೊಬ್ಬರು, ನಮ್ಮ ಮನೆಯಲ್ಲೂ ಹೀಗೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *