ಎಲ್ಲಾ ಮಕ್ಕಳ (ಮಕ್ಕಳು) ಬದುಕು ಒಂದೇ ರೀತಿ ಇರಲ್ಲ. ಕೇಳಿದ್ದನ್ನೆಲ್ಲ ಕೊಡಿಸುವ ಅಪ್ಪ ಅಮ್ಮನನ್ನು ಹೊಂದಿರುವ ಮಕ್ಕಳ ನಡುವೆ, ಕೆಲವು ಮಕ್ಕಳು ತಮ್ಮ ಓದಿನೊಂದಿಗೆ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋ ಹೋರಾಟದ ಬದುಕಿನ ಸ್ಪಷ್ಟ ಚಿತ್ರಣವನ್ನು ತೆರೆದಿಟ್ಟಿದೆ. ಈ ಶಾಲಾ ಬಾಲಕಿಯ (ಶಾಲೆಯ ಹುಡುಗಿ) ಬೆನ್ನ ಮೇಲೆ ಬ್ಯಾಗ್ ಜೊತೆಗೆ ಸಾವಿರ ಕನಸುಗಳು, ಆದರೆ ಮನೆಯ ಜವಾಬ್ದಾರಿಗಳು ಆಕೆಯ ತಲೆ ಮೇಲಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಬ್ಯಾಗ್ ಹೆಗಲಿಗೇರಿಸಿಕೊಂಡು, ತಲೆಯ ಮೇಲೆ ಸಿಲಿಂಡರ್ ಹೊತ್ತುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಹುಡುಗಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.
ದಿನೇಶ್ವರ ಪಾಟೇಲ್ (dineshwar_0673) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಈ ಬಾಲಕಿ ಶಿಕ್ಷಣದ ಬಗೆಗಿನ ಅವಳ ಸಮರ್ಪಣೆ ಹಾಗೂ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ ಎನ್ನುವುದನ್ನು ತೋರಿಸುತ್ತಿದೆ. ಈ ವಿಡಿಯೋದಲ್ಲಿ ರಸ್ತೆಯಲ್ಲಿ ಬೈಕ್ ಸವಾರರು, ಆಟೋಗಳು ಮತ್ತು ಪಾದಚಾರಿಗಳ ದೊಡ್ಡ ಜನಸಂದಣಿ ಕಾಣುತ್ತಿದೆ. ಆದರೆ ಶಾಲೆಗೆ ಹೊರಟಿರುವ ಈ ಹುಡುಗಿ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದು ಆಕೆಯು ತನ್ನ ದೈನಂದಿನ ಜೀವನದ ಹೋರಾಟಗಳಿಗೆ ಒಗ್ಗಿಕೊಂಡಿರುವುದನ್ನು ತೋರಿಸುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಜಿನಕೋ ಕಂಧೋ ಮೇ ಜಿಮ್ಮೇದಾರಿ ಹೋತಾ ಹೈ ಸಬ ಮೋಹಮಾಯಾ ಖತ್ಮ್ ಹೋ ಜಾತಃ
ಚಾಹೇ ಲಡಕಾ ಹೋ ಯಾ ಲಡಕೀ ಸಬಕೋ ಅಪನಾ ಅಪನಾ ಘರ ಕಾ ಜಿಮೇದಾರಿ ನಿಭಾನಾ ಪದತೈ pic.twitter.com/br3y0bgYZx
– ದಿನೇಶ್ವರ್ ಪಟೇಲ್ (@dineshwar_0673) ಡಿಸೆಂಬರ್ 7, 2025
ಇದನ್ನೂ ಓದಿ: ಅಜ್ಜಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಮುಗ್ಗರಿಸಿ ಬಿದ್ದ ಪುಟಾಣಿ
7 ರಂದು ಹಂಚಿಕೊಂಡಿದ್ದಾರೆ ಈ ವಿಡಿಯೋ ಇದುವರೆಗೆ ಐವತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಡಿಸೆಂಬರ್ಿವೆ. ಒಬ್ಬ ಬಳಕೆದಾರ ಜವಾಬ್ದಾರಿ ವಯಸ್ಸಿನ ಮಿತಿಯಿಲ್ಲ. ಇತರರು ಈ ಹುಡುಗಿಯ ಬಾಲ್ಯವೇ ಜವಾಬ್ದಾರಿಯನ್ನು ಕಸಿದಿದೆ. ದೇವರು ಇಂತಹ ಕಷ್ಟಗಳನ್ನು ಯಾರಿಗೂ ನೀಡದಿರಲಿ. ಮತ್ತೊಬ್ಬರು ಓದುವ ವಯಸ್ಸಿನಲ್ಲಿ ಜವಾಬ್ದಾರಿ ಹೊರಲು ಧೈರ್ಯ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 3:35 pm, ಮಂಗಳವಾರ, 9 ಡಿಸೆಂಬರ್ 25