ಬದುಕೇ (ಜೀವನ) ಹಾಗೆ, ಮೂರು ಹೊತ್ತಿನ ತುತ್ತಿಗಾಗಿ ಒಬ್ಬರದ್ದು ಒಂದೊಂದು ರೀತಿಯ ಹೋರಾಟ. ಕೆಲವು ಕೂಲಿ ಕೆಲಸ ಜೀವನ ಸಾಗಿಸಿದರೆ, ಕೆಲವು ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಅದರಲ್ಲಿ ಬರುವ ಹಣವನ್ನು ಜೀವನಕ್ಕಾಗಿ ನೆಚ್ಚಿಕೊಳ್ಳುತ್ತಾರೆ. ಆದರೆ ಈ ಯುವಕ (ಚಿಕ್ಕ ಹುಡುಗ) ತನ್ನ ಬುದ್ದಿವಂತಿಕೆಯನ್ನು ಬಳಸಿಕೊಂಡಿದ್ದಾನೆ. ಗೂಡಂಗಡಿ ಇಟ್ಟುಕೊಳ್ಳದೇ, ನಡೆದುಕೊಂಡು ಹೋಗಿಯೇ ಕಾಫಿ ತಯಾರಿಸಿ ಗ್ರಾಹಕರಿಗೆ ನೀಡುವ ಮೂಲಕ ತನ್ನ ಅಲ್ಪ ದುಡಿಮೆಯಲ್ಲಿ ಖುಷಿ ಕಾಣುತ್ತಿದೆ. ಈ ಯುವಕನ ವಿಡಿಯೋ ವೈರಲ್ ಆಗಿದ್ದು ಸರಳವಾದ ಉಪಾಯವನ್ನು ಮೆಚ್ಚಿದೆ.
Sourceofkhaddo ಹೆಸರಿನ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯುವಕನು ಲೈಫ್ ಜಾಕೆಟ್ ಮಾದರಿಯ ಜಾಕೆಟ್ ಧರಿಸಿದ್ದಾನೆ. ಈ ಜಾಕೆಟ್‌ನಲ್ಲಿ ಕಾಫಿ ಮಾಡಲು ಬೇಕಾದ ಕಾಫಿ ಪುಡಿ, ಸಕ್ಕರೆ, ಹಾಲು ಸೇರಿದಂತೆ ಪೇಪರ್ ಗ್ಲಾಸ್ ಅನ್ನು ಇಟ್ಟುಕೊಂಡಿರಬೇಕು. ಖರೀದಿಸಿದ ಕಾಫಿ ತಯಾರಿಸಿ ಗ್ರಾಹಕರು ನೀಡುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಕೋವಿಡ್ ತಂದ ಸಂಕಷ್ಟ; ರ್ಯಾಪಿಡೋ ಚಾಲಕನಾಗಿ ಬದುಕು ಕಟ್ಟಿಕೊಂಡ ಉದ್ಯಮಿ
ಈ ವಿಡಿಯೋ 6.4 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಕೆಲಸ ಇಲ್ಲವೆಂದು ಕೂರುವ ಬದಲು, ಈ ಸ್ವಂತ ದುಡಿಮೆ ಬದುಕಿಗೆ ಸಹಾಯ ಮಾಡುತ್ತದೆ. ಕಾಫಿ, ಕಾಫಿ ತಯಾರಿಸುವ ರೀತಿ ನೋಡಿದ್ರೆ ಕಾಫಿ ಕುಡಿಯಬೇಕೆನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಿಜವಾಗಿಯೂ ಒಳ್ಳೆಯ ಐಡಿಯಾ, ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ