ಬೆಂಗಳೂರು, (ಡಿಸೆಂಬರ್ 21): ಇತ್ತೀಚೆಗೆ ಸೋಶಿಯಲ್ ಮೀಡಿಯಾ (ಸಾಮಾಜಿಕ ಮಾಧ್ಯಮ) ಕ್ರೇಜ್ ಜನರಲ್ಲಿ ವಿಪರೀತವಾಗಿದೆ. ಬೆಳಿಗ್ಗೆ ಎದ್ದಾಗ ರಾತ್ರಿ ಮಲಗಿದರೂ ಏನು ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಂಪ್ಲೀಟ್ ಅಪ್‌ಡೇಟ್ ಮಾಡುತ್ತಾರೆ. ಇನ್ನೂ ಏನೇನು ಸ್ಕೆಚ್ ಹಾಕಿ ಕಂಡ ಕಂಡವರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಇನ್ನು ಕೆಲವು ಸೋಶಿಯಲ್ ಮೀಡಿಯಾಗಳಿಂದಲೇ ಸಾಕಷ್ಟು ಕಷ್ಟ ನೋವು ಅನುಭವಿಸಿದ ಉದಾಹರಣೆಗಳಿವೆ.ಅದರ ಸಾಮಾಜಿಕ ತಾಲನದಲ್ಲಿ ಪರಿಚಯವಾದ ಗೆಳೆಯ, ಬೆಂಗಳೂರು (ಬೆಂಗಳೂರು) ಮಹಿಳೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಮಂಚಕ್ಕೆ ಕರೆದಿದ್ದಾನೆ. ಆಕೆ ನಿರಾಕರಿಸಿದ್ದಕ್ಕೆ ನಾನಾ ರೀತಿಯಾಗಿ ಬ್ಲ್ಯಾಕ್ ಮೇಲ್ ಮಾಡಿದ್ದು, ಇದಕ್ಕೆ ಹೆದರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸಾಲ ಕೊಟ್ಟು ಮಂಚಕ್ಕೆ ಕರೆದ ಗೆಳೆಯ
ಅಂದಹಾಗೆ ಇಂತಹ ದುಸ್ಥಿತಿಗೆ ಬಂದಿದ್ದು ರಾಜಗೋಪಾಲ ನಗರ ವ್ಯಾಪ್ತಿಯ ಮಹಿಳೆ. ಸೋಶಿಯಲ್ ಮೀಡಿಯಾ ಮೂಲಕ ಸಂತ್ರಸ್ತೆಗೆ ಪರಿತೋಷ್ ಯಾದವ್ ಎಂಬಾತ ಪರಿಚಿದ್ದು, ಬಣ್ಣ ಬಣ್ಣದ ಮಾತುಗಳಿಂದ ಮಹಿಳೆಯನ್ನು ಕ್ಲೋಸ್ ಮಾಡಿಕೊಂಡಿದ್ದಾನೆ. ಹೀಗಾಗಿ ಮಹಿಳೆ, ಇತ್ತೀಚೆಗೆ ಗ್ಯಾಸ್ ಸಿಲಿಂಡ್ ಸ್ಫೋಟದಿಂದ ತನ್ನ ಮಗಳಿಗೆ ಗಾಯವಾಗಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಹೀಗಾಗಿ ಪರಿತೋಷ್ ಯಾದವ್ ಚಿಕಿತ್ಸೆಗೆಂದು 30 ಸಾವಿರ ಹಣ ಸಾಲ ನೀಡಿದ್ದ. ಬಳಿಕ ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಗೆಳೆಯ, ಮಹಿಳೆಯನ್ನು ದೈಹಿಕವಾಗಿ ಸಂಯೋಜಿಸುವಂತೆ ಮಂಚಕ್ಕೆ ಕರೆದಿದ್ದಾನೆ. ಸಾಲ ಕೊಟ್ಟ ನಂತರ ಮಹಿಳೆಗೆ ಪ್ರತಿನಿತ್ಯ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾನೆ. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅಶ್ಲೀಲ ವಿಡಿಯೋ ಕಳಿಸಿ ಫ್ಲ್ಯಾಟ್ ಗೆ ಬರುವಂತೆ ಬಲವಂತ ಮಾಡಿದ್ದಾನೆ.
ಇದನ್ನೂ ಓದಿ: ಪೂರ್ತಿ ವಿಡಿಯೋ ಬೇಕಾದ್ರೆ ಫಾಲೋ- ಲೈಕ್ ಮಾಡುವಂತೆ ಪೋಸ್ಟ್ ಹಾಕುವವರೇ ಹುಷಾರ್
ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನ
ಒಂದು ವೇಳೆ ಕಾರ್ಯ ನಿರ್ವಹಿಸದಿದ್ದರೆ ಪೋರ್ನ್ ವೆಬ್ ಸೈಟ್, ಪಬ್ಲಿಕ್ ಟಾಯ್ಲೆಟ್ ನಲ್ಲಿ ವೇಶ್ಯಾವಾಟಿಕೆಗೆ ಸಂಪರ್ಕಿಸಲಾಗಿದೆ ಎಂದು ನಿನ್ನ ನಂಬರ್ ಬರೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ಸಂತ್ರಸ್ತ ಮಹಿಳೆಯ ಗಂಡನಿಗೆ ತಿಳಿದು ಇಬ್ಬರ ಮದ್ಯೆ ಮನಸ್ಥಾಪ ಕೂಡ ಉಂಟಾಗಿದೆ. ಬಳಿಕ ಜಗಳ ಮಾಡಿಕೊಂಡು ಗಂಡನನ್ನು ತೊರೆದು ಸ್ನೇಹಿತೆಯರ ಮನೆಗೆ ಹೋಗಿದ್ದ ಸಂತ್ರಸ್ತ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ರಾಜಗೋಪಾಲ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದರೂ ಅಂತ ಅಪರಿಚಿತರ ಜೊತೆ ಸ್ನೇಹ ಮಾಡುವ ಮುನ್ನ ಎಚ್ಚರದಿಂದ ಇರಬೇಕು. ಅದರಲ್ಲೂ ಹೆಣ್ಮಕ್ಳು ಹುಷಾರವಾಗಿ. ಇಲ್ಲವಾದ್ರೆ ಈ ರೀತಿ ಫಜೀತಿ ಅನುಭವಿಸಿದರು.
ವರದಿ: ವಿಕಾಸ್, ಟಿವಿ9 ಬೆಂಗಳೂರು.