
ನಮ್ಮ ಸುತ್ತಮುತ್ತಲಿನ ಕೆಲವರಿಗೆ ಪ್ರಾಣಿ ಪಕ್ಷಿಗಳು (ಪ್ರಾಣಿ ಮತ್ತು ಪಕ್ಷಿಗಳು) ಬಲು ಇಷ್ಟ. ಹೀಗಾಗಿ ಅವುಗಳಿಗೆ ಆಹಾರ ನೀಡುವುದು. ನೀರು ಕುಡಿಯಲು ಇಡುವುದು ಹೀಗೆ ಅವುಗಳ ಹಸಿವು ಬಾಯಾರಿಕೆಯನ್ನು ನೀಗಿಸುವಂತಹ ಪ್ರಯತ್ನ ಮಾಡ್ತಾರೆ. ಈ ಮಹಿಳೆಯದ್ದು (ಮಹಿಳೆ) ಅಷ್ಟೇ ದೊಡ್ಡ ಮನಸ್ಸು. ಮನೆ ಹತ್ತಿರ ಬಂದ ಕಾಡು ಕೋಣವೊಂದು ಬಾಯಾರಿಕೆಯಿಂದ ಬಳಲಿದೆ. ಹೀಗಾಗಿ ಈ ಮೂಕ ಪ್ರಾಣಿಯ ನೀರಿನ ದಾಹವನ್ನು ಅರಿತುಕೊಂಡ ಮಹಿಳೆ, ನೀರು ಕೊಟ್ಟು ಅದರ ಬಾಯಾರಿಕೆಯನ್ನು ನೀಗಿಸಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯ ಮಾನವೀಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೀಪಕ್ ಗವಡ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮನೆ ಹತ್ತಿರ ಬಂದ ಬಾಯಾರಿದ ಕಾಡುಕೋಣಕ್ಕೆ ನೀರು ಕೊಟ್ಟಿದ್ದಾಳೆ. ಪಾತ್ರೆಯಲ್ಲಿಟ್ಟ ನೀರನ್ನು ಕುಡಿದು ಕಾಡು ಕೋಣವು ಬಾಯಾರಿಕೆ ನೀಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಶಂಖನಾದವು ಕಿವಿಗೆ ಬೀಳುವಂತೆ ಗೋಶಾಲೆಯತ್ತ ಓಡೋಡಿ ಬಂದ ಹಸುಗಳು
ಈ ವಿಡಿಯೋ ಅಧಿಕವಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ ಅಮ್ಮ ನಿನ್ನ ಹೊಟ್ಟೆ ತಣ್ಣಗೆ ಇರಲಿ. ಮತ್ತೊಬ್ಬರು, ಒಳ್ಳೆಯ ಕೆಲಸ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ನಿಜವಾಗಿಯೂ ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ