Headlines

Video: ಸೂರಿಲ್ಲದ ತಾಯಿ ಮಗುವಿಗೆ ಕೈಲಾದ ಸಹಾಯ ಮಾಡಿದ ಯುವಕ

Video: ಸೂರಿಲ್ಲದ ತಾಯಿ ಮಗುವಿಗೆ ಕೈಲಾದ ಸಹಾಯ ಮಾಡಿದ ಯುವಕ


ಜೀವನದಲ್ಲಿ (ಜೀವನ) ಒಬ್ಬರದ್ದು ಒಂದೊಂದು ರೀತಿಯ ಹೋರಾಟ. ಕೆಲವರು ತಮ್ಮ ಮುರೊತ್ತಿನ ತುತ್ತು ಹಾಗೂ ಸೂರಿಗಾಗಿ ಹೋರಾಟ ನಡೆಸುತ್ತಾರೆ. ಆದರೆ ಮನೆಯಿಲ್ಲದೇ ರಸ್ತೆಯಲ್ಲೇ ಮಲಗುವ ಕೆಲವು ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಕರುಳು ಚುರ್ ಎನ್ನುತ್ತೆ. ಅವರಿಗಿಂತ ನಮ್ಮ ಜೀವನವೇ ಎಷ್ಟೋ ಲೇಸು ಎಂದೆನಿಸುತ್ತದೆ. ಇದೀಗ ಬೀದಿ ಬದಿಯಲ್ಲೇ ಪುಟಾಣಿ ಕಂದಮ್ಮನೊಂದಿಗೆ ಮಲಗಿರುವ ಮಹಿಳೆಗೆ ತನ್ನ ಕೈಲಾದ ಸಹಾಯ ಮಾಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

ಈ ತಾಯಿ ಮಗುವಿನದ್ದು ರಸ್ತೆಯಲ್ಲೇ ಬದುಕು: ಮುಂದೇನಾಯ್ತು ನೋಡಿ

ಮಂಜುನಾಥ್ ಲೋಕಾಪುರ್ (manjunath_lokapur) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯ ಸ್ಪರ್ಶಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಪುಟ್ಟ ಕಂದಮ್ಮನ ಜೊತೆಗೆ ಬೀದಿ ಬದಿಯಲ್ಲಿ ಮಲಗಿದ್ದಾಳೆ. ಇದನ್ನು ಗಮನಿಸಿದ ಯುವಕನೊಬ್ಬ ಹಾಸಿಗೆ, ಸೊಳ್ಳೆ ಪರದೆ ಹಾಗೂ ಆಕೆಗೆ ಕೊಟ್ಟಿದ್ದಾನೆ. ತಾನೇ ಸೊಳ್ಳೆ ಪರದೆಯನ್ನು ಹಾಕಿ, ಹಾಸಿಗೆ ಹಾಸಿ ತಾಯಿ ಮಲಗುವಂತೆ ಕೇಳಿದ್ದಾನೆ. ತಾಯಿ ಮಗುವಿನೊಂದಿಗೆ ಸಿಹಿ ತಿಂಡಿ ತಿಂದು ಪ್ರೀತಿ ಹಂಚಿದ್ದಾನೆ. ಅಪರಿಚಿತ ವ್ಯಕ್ತಿಯ ಸಹಾಯದಿಂದ ಖುಷಿಗೊಂಡ ಮಹಿಳೆಯೂ ಆತನಿಗೆ ಕೃತಜ್ಞತೆಯನ್ನು ಸಲ್ಲಿಸಿ ಖುಷಿಯಿಂದಲೇ ಕಳುಹಿಸಿಕೊಟ್ಟಿರುವುದು ಕಂಡುಬರುತ್ತದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ನೋಡೋರಿಗೆ ಮನೋರಂಜನ; ಇದು ಸೈಕಲ್ ಸರ್ಕಸ್ ನಂಬಿಕೊಂಡ ಕುಟುಂಬದ ಹೋರಾಟದ ಬದುಕು

ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಮೆಚ್ಚಿದ್ದು, ಒಬ್ಬ ಬಳಕೆದಾರ ದೇವರು ನಿನಗೆ ಒಳ್ಳೆಯದು ಮಾಡಲಿ, ಅಣ್ಣ ಆಯ್ತು. ಇತರರು, ಬಡವರಿಗೆ ಸಹಾಯ ಮಾಡಲು ದೇವರು ಇನ್ನು ಹೆಚ್ಚು ಕೊಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಮನುಷ್ಯನ ರೂಪದಲ್ಲಿ ಬಂದು ಆ ತಾಯಿ ಮಗುವಿಗೆ ಸಹಾಯ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *