ತುಮಕೂರು, (ನವೆಂಬರ್ 14): ಆಕೆಗೆ ಅದಾಗಲೇ 80 ವರ್ಷ ದಾಟಿತ್ತು.. ವಯಸ್ಸಾದ ಕಾಲದಲ್ಲಿ ಪುಟ್ಟ ಮನೆಯಲ್ಲಿ ಒಂಟಿಯಾಗಿ ವಾಸವಿದ್ದಳು.. ದೂರದ ಸಂಬಂಧಿಯಾದ ಹಾಗೂ ಪಕ್ಕದ ಮನೆಯಲ್ಲೇ ಇದ್ದ ಯುವಕ ಮೊಮ್ಮಗನಂತೆ ಸಿಕ್ಕಿಬಿದ್ದ. ತುಮಕೂರು ಜಿಲ್ಲೆ ಶಿರಾತಲ್ಲ ದೊಡ್ಡಬಾಣಗೆರೆ ಹಳ್ಳಿಯಲ್ಲಿ ಅಜ್ಜಿ ಪುಟ್ಟೀರಮ್ಮ ಕೊಲೆಯಾದ ಅಜ್ಜಿ. ಯಾವುದೇ ಕ್ಲ್ಯೂ ಕೊಡದೇ ಕೃತ್ಯ ಎಸಗಿದವನ ಬೆನ್ನು ಬಿದ್ದ ಪೊಲೀಸರಿಗೆ ಕೊನೆಗೂ ಗೊತ್ತಾಗಿದ್ದು ಚಿನ್ನದ ಮೇಲಿನ ಆಸೆ.
ಪುಟ್ಟೀರಮ್ಮಗೆ ಅದಾಗಲೇ 80 ದಾಟಿತ್ತು. ಇಬ್ಬರು ಮಕ್ಕಳಾದ ಆಕೆ ಒಂಟಿಯಾಗಿ ಹಳ್ಳಿಯಲ್ಲಿ ವಾಸವಿದ್ದಳು.. ಮಗಳಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದರೇ, ಮಗ ವೀರಣ್ಣ ನಿವೃತ್ತ ಯೋಧ.. ಕರ್ತವ್ಯದ ಬಳಿಕ ತುಮಕೂರು ನಗರದಲ್ಲೇ ನೆಲೆಸಿದ್ದ ವೀರಣ್ಣ ವಾರಕ್ಕೆ ಎರಡು ಬಾರಿ ಬಂದು ಹೋಗುತ್ತಿದ್ದಳು. ಹೀಗೆ ಎಲ್ಲರಲ್ಲೂ ಅಜ್ಜಿ ಸಾವು ವಯಸ್ಸಾಗಿರೋದ್ರಿಂದ ಅನ್ನೋ ಮಾತು ಸಹಜವಾಗೇ ಚರ್ಚೆಯಲ್ಲಿತ್ತು. ಆದರೆ ಪಟ್ಟನಾಯಕನಹಳ್ಳಿ ಎಂಟ್ರಿ ಕೊಟ್ಟು ಮೃತದೇಹ ನೋಡುತಿದ್ದಂತೆ ಅಲ್ಲೊಂದು ಅನುಮಾನ ಮೂಡಿತ್ತು. ಇದು ವಯೋಸಹಜ ಸಾವು ಅಲ್ಲ. ಬದಲಿಗೆ ಕೊಲೆ ಎಂದು.
ಈ ಶ್ರೀಧರನಿಗೆ ಹುಡುಗಿರ ಸಹವಾಸವಿತ್ತಂತೆ. ವೇಶ್ಯವಾಟಿಕೆಯಲ್ಲಿ ತೊಡಗಿರೋರ ಜೊತೆ ಸಂಪರ್ಕವಿತ್ತಂತೆ.. ಯಾವಾಗಲು ಫೋನ್ ನಲ್ಲಿ ಅವರ ಜೊತೆ ಮಾತನಾಡುತಿದ್ದಂತೆ.. ಕುಡಿತದ ಚಟ.. ಜೂಜಾಟದ ಹುಚ್ಚು, ಇದರ ಜೊತೆಗೆ ವೇಶ್ಯೆಯರ ಸಂಪರ್ಕ ಶ್ರೀಧರನಿಗೆ ಹಣದ ಆಸೆ ಮೂಡಿಸಿತ್ತು.