ಸಿಬಿಎಸ್‌ಐ (CBSE) 10ನೇ ತರಗತಿಯ ಫಲಿತಾಂಶ ಶೀಘ್ರವೇ ಪ್ರಕಟವಾಗುವ ನಿರೀಕ್ಷೆಯಿದೆ. ಈ ಕುತೂಹಲದ ನಡುವೆ, ಬಾಲಿವುಡ್‌ನ ಮಿಸ್ಟರ್ ಪರ್ಕ್ಷನಿಸ್ಟ್ ಅಮೀರ್ ಖಾನ್ (ಅಮೀರ್ ಖಾನ್) ಅವರು ತಮ್ಮ ಮಗಳು ಇರಾ ಖಾನ್ (ಇರಾ ಖಾನ್) ಅವರ ಹತ್ತನೇ ತರಗತಿಯ ರಿಸಲ್ಟ್ ಬಂದಾಗ ನಡೆದ ಒಂದು ಮೋಜಿನ ಘಟನೆಯನ್ನು ಈ ಹಿಂದೆ ಹಂಚಿಕೊಂಡಿದ್ದರು. ತಮ್ಮ ಮಗಳು ಫೇಲ್ ಆಗುತ್ತಾಳೆ ಎಂದು ಬಲವಾಗಿ ನಂಬಿದ್ದ ಅಮೀರ್ ಖಾನ್ ಗೆ, ಆಕೆಯ ಅಂಕಪಟ್ಟಿಯನ್ನು ನೋಡಿ ಅಕ್ಷರಶಃ ಶಾಕ್ ಆಗಿತ್ತಂತೆ! ಕುತೂಹಲಕಾರಿ ಘಟನೆಯ ವಿವರ ಇಲ್ಲಿದೆ.
ಈ ಹಿಂದೆ ‘ಬಾಲಿವುಡ್ ಹಂಗಾಮಾ’ ನಡೆಸಿದ ಸಂದರ್ಶನದಲ್ಲಿ ಆಮಿರ್ ಖಾನ್ ಅವರು ಈ ಬಗ್ಗೆ ಮಾತನಾಡಿದ್ದರು. ಪುತ್ರಿ ಇರಾ ಖಾನ್ ಐಸಿಸ್ ಬೋರ್ಡ್ ಎಕ್ಸಾಂ ಫಲಿತಾಂಶ ಬಂದಾಗ ಆ ಸಂದರ್ಭ ಹೇಗಿತ್ತು ಅಮಿರ್ ಖಾನ್ ನೆನಪಿದ್ದರು. ಇರಾ ಖಾನ್ ಅವರು ಹತ್ತನೇ ತರಗತಿಯಲ್ಲಿ ಶೇಕಡ 88.3 ಅಂಕಗಳನ್ನು ಗಳಿಸಿದ್ದರು. ಆದರೆ ಇದನ್ನು ಕೇಳಿದ ಅಮೀರ್‌ಗೆ ಮೊದಲು ನಂಬಲು ಸಾಧ್ಯವೇ ಆಗಲಿಲ್ಲ.
ಇರಾ ಅವರ ತಾಯಿ ರೀನಾ ದತ್ತಾ ಅವರು ಬಂದು ರಿಸಲ್ಟ್ ಹೇಳಿದಾಗ, ‘ಇದು ಖಂಡಿತಾ ಏನೋ ತಪ್ಪಾಗಿರಬೇಕು. ರೀನಾ ಮತ್ತೊಮ್ಮೆ ಚೆಕ್ ಮಾಡು’ ಎಂದು ಅಮೀರ್ ಖಾನ್ ಹೇಳಿದ್ದರಂತೆ. ರೀನಾ ಚೆಕ್ ಮಾಡಿದ ಮೇಲೂ ಆಮಿರ್‌ಗೆ ಸಮಾಧಾನವಾಗಲಿಲ್ಲ. ಕೊನೆಗೆ ತಾವೇ ಹೋಗಿ ನಂಬರ್ ಆನ್‌ಲೈನ್‌ಗೆ, ಇರಾ ಅವರ ರೋಲ್ ಹಾಕಿ ರಿಸಲ್ಟ್ ನೋಡಿದಾಗ ಅಲ್ಲಿ ಶೇಕಡ 88.3 ಅಂಕಗಳು ಇರುವುದು ಖಚಿತವಾಯಿತು.
ಸಂದರ್ಶನದಲ್ಲಿ ಈ ಬಗ್ಗೆ ಹೇಳುತ್ತಾ ನಕ್ಕ ಆಮಿರ್ ಖಾನ್, ‘ನನಗೆ ಅವಳು ಫೇಲ್ ಆಗುತ್ತಾಳೆ ಎಂಬ ಪೂರ್ಣ ನಂಬಿಕೆಯಿತ್ತು. ಆದರೆ ಅವಳು 89ರ ಆಸುಪಾಸು ಅಂಕ ಗಳಿಸಿದಾಗ ನನಗೆ ತುಂಬಾ ಹೆಮ್ಮೆಯಾಯಿತು. ಸಾಮಾನ್ಯವಾಗಿ ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಲಿ ಎಂದು ಬಯಸುತ್ತಾರೆ, ಆದರೆ ಆಮಿರ್ ಅವರು ಮಗಳ ಓದಿನ ವಿಚಾರದಲ್ಲಿ ಇಷ್ಟು ತಮಾಷೆಯಾಗಿ ವರ್ತಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಅಮೀರ್ ಖಾನ್
ಸ್ಟಾರ್ ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಕಾಲಿಡುವುದು ಸಹಜ. ಆದರೆ ಐರಾ ಖಾನ್ ಅವರು ಚಿತ್ರರಂಗಕ್ಕೆ ಬಂದಿಲ್ಲ. ತಂದೆ ದೊಡ್ಡ ಸ್ಟಾರ್ ನಟ ಆಗಿದ್ದರೂ ಕೂಡ ಐರಾ ಖಾನ್ ಅವರ ಬಣ್ಣದ ಲೋಕದ ಹಾದಿಯನ್ನು ತುಳಿದಿಲ್ಲ. ಫಿಟ್ನೆಸ್ ಟ್ರೇನರ್ ನೂಪುರ್ ಶಿಕಾರೆ ಜೊತೆ ಇರಾ ಖಾನ್ ಮದುವೆ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.