Headlines

ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?

ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?


ದೇಶವೇ ಮೆಚ್ಚಿದ ಗಾಯಕ ಅರಿಜಿತ್ ಸಿಂಗ್ (ಅರಿಜಿತ್ ಸಿಂಗ್) ಅವರು ಕೆಲವು ದಿನಗಳ ಹಿಂದೆ ನಿವೃತ್ತಿ ಘೋಷಿಸಿದ್ದರು. ಇನ್ಮುಂದೆ ಯಾವುದೇ ಸಿನಿಮಾ ಗೀತೆಗಳನ್ನು ಹಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರ ಈ ನಿರ್ಧಾರದಿಂದ ಕೋಟ್ಯಂತರ ಅಭಿಮಾನಿಗಳಿಗೆ ಆಯಿತು. ಅರಿಜಿತ್ ಸಿಂಗ್ ಅವರು ನೂರಾರು ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಆದರೆ ಅವರು ಏಕಾಏಕಿ ನಿವೃತ್ತಿ (ನಿವೃತ್ತಿ) ತೆಗೆದುಕೊಂಡಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ. ಅರಿಜಿತ್ ಸಿಂಗ್ ಮನವೊಲಿಸಲು ಅಮೀರ್ ಖಾನ್ (ಅಮೀರ್ ಖಾನ್) ಪ್ರಯತ್ನಿಸಲಾಗುತ್ತಿದೆ.

ಈ ರೀತಿ ಸುದ್ದಿ ಹಬ್ಬಲು ಕಾರಣ ಕೂಡ ಇದೆ. ಅಮೀರ್ ಖಾನ್ ಅವರು ಇತ್ತೀಚೆಗೆ ಅರಿಜಿತ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮುಂಬೈನಿಂದ ಪಶ್ವಿಮ ಬಂಗಾಳಕ್ಕೆ ತೆರಳಿ, ಅಲ್ಲಿರುವ ಅರಿಜಿತ್ ಸಿಂಗ್ ಅವರ ಮನೆಗೆ ಅಮೀರ್ ಖಾನ್ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.

ಅರಿಜಿತ್ ಸಿಂಗ್ ಅವರಿಗೆ ತುಂಬಾ ಡಿಮ್ಯಾಂಡ್ ಇದೆ. ಸದ್ಯಕ್ಕಂತೂ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಇದ್ದಾರೆ. ಇಂಥ ಸಮಯದಲ್ಲಿ ನಿವೃತ್ತಿ ಘೋಷಿಸಿರುವುದು ಚಿತ್ರರಂಗಕ್ಕೆ ಕೂಡ ನಷ್ಟ. ಆದ್ದರಿಂದ ಅವರನ್ನು ಮತ್ತೆ ಹಿನ್ನೆಲೆ ಗಾಯನಕ್ಕೆ ಕರೆತರಬೇಕು ಎಂಬುದು ಅನೇಕರ ಬಯಕೆಯಾಗಿದೆ. ಆ ಕಾರಣದಿಂದಲೇ ಅಮೀರ್ ಖಾನ್ ಅವರು ಅರಿಜಿತ್ ಸಿಂಗ್ ನಿವಾಸಕ್ಕೆ ಬಂದಿದ್ದಾರೆ.

ಆದರೆ ಈ ಬಗ್ಗೆ ಅಮೀರ್ ಖಾನ್ ಅವರು ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಯಾವ ಕಾರಣಕ್ಕಾಗಿ ಅವರು ಅರಿಜಿತ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ. ಶೀಘ್ರದಲ್ಲೇ ಅವರು ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಮಾಡಿಕೊಂಡ ಆಸ್ತಿ ಎಷ್ಟು?

‘ಇದನ್ನು ನಿಲ್ಲಿಸುತ್ತಿದ್ದೇನೆ. ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೇಳುಗರಾಗಿ ಇಷ್ಟು ವರ್ಷಗಳ ಕಾಲ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ಪ್ರಯಾಣ ಅದ್ಭುತವಾಗಿತ್ತು’ ಎಂದು ಅರಿಜಿತ್ ಸಿಂಗ್ ಅವರು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *