ಕೇವಲ 14 ಎಸೆತದಲ್ಲಿ ಹಾಫ್ ಸೆಂಚುರಿ, ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20ಯಲ್ಲಿ ಅಭಿಷೇಕ್ ಶರ್ಮಾ ಹಲವು ದಾಖಲೆ ಬರೆದಿದ್ದಾರೆ. ಸೂರ್ಯಕುಮಾರ್ ದಾಖಲೆ ಮುರಿದರೆ, ಯುವಿ ವಿಶ್ವ ದಾಖಲೆ ಸಮೀಪ ತಲುಪಿದ್ದಾರೆ.

ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಟಿ20 ಪಂದ್ಯಗಳಲ್ಲಿ ಭಾರತೀಯ ಆಟಗಾರರ ಪೈಕಿ ಎರಡನೇ ವೇಗದ ಅರ್ಧಶತಕ ಬಾರಿಸಿ ದಾಖಲೆ ಪುಸ್ತಕ ಸೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಶರ್ಮಾ ಹಾಫ್ ಸೆಂಚುರಿ ಸಿಡಿಸಿದ್ದಾರೆ.

ಟಿ20 ಪಂದ್ಯಗಳಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಅವರು 2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಇದು ವಿಶ್ವದಾಖಲೆಯಾಗಿದೆ. ಇದೀಗ ಅಭಿಷೇಕ್ ಶರ್ಮಾ, ಯವಿ ಸನಿಹಕ್ಕೆ ತಲುಪಿದ್ದಾರೆ.

ಈ ಅರ್ಧಶತಕದೊಂದಿಗೆ, 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ 50 ರನ್ ಗಳಿಸುವುದರಲ್ಲಿ ಅಭಿಷೇಕ್, ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿದ್ದಾರೆ. ಅಭಿಷೇಕ್ 25 ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಒಂಬತ್ತು ಟಿ20 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಯುವರಾಜ್ ಸಿಂಗ್ , 12 ಎಸೆತ vs ಇಂಗ್ಲೆಂಡ್ 2007

ಜಾನ್ ಫ್ರಾಂಕ್ಲಿನ್, 12 ಎಸೆತ vs ಜಿಂಬಾಬ್ವೆ 2025

ಕೊಲಿನ್ ಮುನ್ರೋ, 14 ಎಸೆತ vs ಶ್ರೀಲಂಕಾ 2016

ಅಭಿಷೇಕ್ ಶರ್ಮಾ , 14 ಎಸೆತ vs ನ್ಯೂಜಿಲೆಂಡ್ 2026

ಕ್ವಿಂಟನ್ ಡಿಕಾಕ್, 15 ಎಸೆತ vs ವೆಸ್ಟ್ ಇಂಡೀಸ್ 20223

3ನೇ ಟಿ20 ಪಂದ್ಯದಲ್ಲಿ ಭಾರತ ಸ್ಫೋಟಕ ಬ್ಯಾಟಿಂಗ್ನಿಂದ 154 ರನ್ ಟಾರ್ಗೆಟನ್ನು ಕೇವಲ 10 ಓವರ್ಗೆ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಅತೀ ಹೆಚ್ಚು ಎಸೆತ ಬಾಕಿ ಉಳಿಸಿ ಗೆಲುವು ಸಾಧಿಸಿದ ಸಾಧನೆಗೆ ಟೀಂ ಇಂಡಿಯಾ ಪಾತ್ರವಾಗಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಆರಂಭಿಕ 3 ಪಂದ್ಯ ಗೆದ್ದಿರುವ ಭಾರತ ಈಗಾಗಲೇ ಸರಣಿ ಕೈವಶ ಮಾಡಿದೆ. ಇನ್ನೆರಡು ಪಂದ್ಯ ಬಾಕಿ ಉಳಿದಿದೆ

Source link
ಕೇವಲ 14 ಎಸೆತದಲ್ಲಿ ಹಾಫ್ ಸೆಂಚುರಿ, ಹಲವು ದಾಖಲೆ ಮುರಿದು ಯುವಿ ಸನಿಹಕ್ಕೆ ಬಂದ ಅಭಿಷೇಕ್