ಅಂದರೆ ಒಂದು ಇನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಅಭಿಷೇಕ್ ಶರ್ಮಾ, ಮತ್ತೊಂದು ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಒಪ್ಪಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಕಳೆದ 6 ಪಂದ್ಯಗಳಲ್ಲಿ ಅವರು ಮೂರು ಬಾರಿ ಡಕ್ ಔಟ್ ಆಗಿರುವುದು. ಅಂದರೆ ಅತ್ತ ಭರ್ಜರಿ ಫಾರ್ಮ್ ನಲ್ಲಿದ್ದರೂ ಅಭಿಷೇಕ್ ಶರ್ಮಾ ಒಂದೊಂದೇ ಇನಿಂಗ್ಸ್ ಗಳ ಸೊನ್ನೆ ಸುತ್ತುತ್ತಿರುವುದು ಇದೀಗ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿದೆ.