ಭಾರತವನ್ನು ಗೇಲಿ ಮಾಡಿದ್ದ ಪಾಕ್ ಕ್ರಿಕೆಟಿಗನ ಖರೀದಿಸಿ ಕೆಟ್ಟ ಕಾವ್ಯ ಮಾರನ್

ಭಾರತವನ್ನು ಗೇಲಿ ಮಾಡಿದ್ದ ಪಾಕ್ ಕ್ರಿಕೆಟಿಗನ ಖರೀದಿಸಿ ಕೆಟ್ಟ ಕಾವ್ಯ ಮಾರನ್


ಭಾರತವನ್ನು ಗೇಲಿ ಮಾಡಿದ್ದ ಪಾಕ್ ಕ್ರಿಕೆಟಿಗನ ಖರೀದಿಸಿ ಕೆಟ್ಟ ಕಾವ್ಯ ಮಾರನ್

ದಿ ಹಂಡ್ರೆಡ್‌ (ದಿ ಹಂಡ್ರೆಡ್) ಲೀಗ್ ಹರಾಜಿನಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಬ್ರಾರ್ ಅಹ್ಮದ್ ಕಾವ್ಯ ಮಾರನ್ (ಕಾವ್ಯ ಮಾರನ್) ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಖರೀದಿ ಮಾಡಿರುವುದು ಭಾರತೀಯರನ್ನು ಕೇರಳಿಸಿದೆ. ನಿನ್ನೆ ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ನ (ಅಬ್ರಾರ್ ಅಹ್ಮದ್) ಕಾವ್ಯ ಮಾರನ್ ಖರೀದಿ ಮಾಡಿದ್ದರಿಂದ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ, ಈ ಹಿಂದೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಅಬ್ರಾರ್ ಅಹ್ಮದ್ ಭಾರತೀಯ ವಾಯುಪಡೆಯ ಅಪಹಾಸ್ಯ ಮಾಡಿದ್ದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ಈ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಭಾರತೀಯರು ಕಾವ್ಯ ಮಾರನ್ ಮೇಲೆ ಮುಗಿಬಿದ್ದಿದ್ದಾರೆ.

ಭಾರತೀಯ ವಾಯುಪಡೆಯನ್ನು ಅಪಹಾಸ್ಯ ಮಾಡಿದೆ

ವಾಸ್ತವವಾಗಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪಹಲ್ಗಾಮ್ನಲ್ಲಿ ಅಟ್ಟಹಾಸದಿಂದ 26 ಅಮಾಯಕ ಭಾರತೀಯರು ಸಾವನ್ನಪ್ಪಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಭಾರತ ಸರ್ಕಾರ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ನೀಡಿತ್ತು. ಇದೇ ಸಂದರ್ಭದಲ್ಲಿ ಈ ಅಬ್ರಾರ್ ಅಹ್ಮದ್ ಭಾರತದ ವಾಯುಪಡೆಯನ್ನು ಅಪಹಾಸ್ಯ ಮಾಡಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಟೀ ಕಪ್ ಹಿಡಿದು ನಿಂತಿದ್ದ ಅಹ್ಮದ್, ‘ರಂಜಾನ್ ಪ್ರಾರಂಭವಾಗುವ ಮೊದಲು ಅದ್ಭುತವಾದ ಮುಸ್ಸಂಜೆಯ ಚಹಾ ಸವಿಯುತ್ತಿದೆ’ ಎಂದು ಬರೆದುಕೊಂಡಿದ್ದರು.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಅಬ್ರಾರ್ ಅಹ್ಮದ್ ಅವರು ಹಂಚಿಕೊಂಡ ಪೋಸ್ಟ್ (@abrarahmedpak01)

ಅಭಿನಂದನೆ ವರ್ಧಮಾನ್ ಘಟನೆ

ಅಬ್ರಾ ಹಂಚಿಕೊಂಡಿದ್ದ ಈ ಪೋಸ್ಟ್ 2019 ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಘಟನೆಯನ್ನು ನೆನಪಿಸಿತ್ತು. ವಾಸ್ತವವಾಗಿ ಪಾಕ್ ಮೂಲದ ಉಗ್ರಸಂಘಟನೆ 2019 ರ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಉಗ್ರದಾಳಿ ನಡೆಸಿ 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತ, ಬಾಲಾಕೋಟ್‌ ಏರ್‌ಸ್ಟ್ರೈಕ್‌ ನಡೆಸಿತ್ತು. ಆ ಸಮಯದಲ್ಲಿ ಪಾಕಿಸ್ತಾನದ F-16 ವಿಮಾನವನ್ನು ಯುದ್ಧದಲ್ಲೇ ಹೊಡೆದು ಉರುಳಿಸಿದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನದಲ್ಲಿ ಸೆರೆ ಹಿಡಿಯಲಾಯಿತು. ಆ ಸಮಯದಲ್ಲಿ ಅಭಿನಂದನೆ ಚಹಾ ಕುಡಿಯುತ್ತಿರುವ ವಿಡಿಯೋವನ್ನು ಪಾಕಿಸ್ತಾನ ಸೇನೆ ಮಾಡಿತ್ತು. ಆ ವಿಡಿಯೋದಲ್ಲಿ ಚಹಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿನಂದನೆ ‘ಟೀ ತುಂಬಾ ಚೆನ್ನಾಗಿದೆ, ಧನ್ಯವಾದಗಳು’ ಎಂದು ಉತ್ತರಿಸಿದರು.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *