
ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಗೆ ಬ್ಯಾನ್ ಬಿಸಿ ತಟ್ಟಿದೆ. ದಿ ಹಂಡ್ರೆಡ್ ಲೀಗ್‌ನಲ್ಲಿ ಕಾವ್ಯಾ ಅವರ ಸನ್ ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿತು. ಆಕ್ಷನ್ ಅಲ್ಲಿ 2.35 ಕೋಟಿ ರೂಪಾಯಿಯನ್ನು ಕೊಡಲು ಸನ್ ರೈಸರ್ ಒಪ್ಪಿಕೊಂಡಿತು. ಈ ಬೆನ್ನಲ್ಲೇ ಕಾವ್ಯಾ ಮಾರನ್ ಅವರು ಸಾಕಷ್ಟು ಟೀಕೆ ಎದುರಿಸಿದರು. ಅಷ್ಟೇ ಅಲ್ಲ, ಸನ್ ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಬ್ಯಾನ್ ಆಗಿದೆ.
ಮಾರ್ಚ್ 12ರ ರಾತ್ರಿ 8.30ಕ್ಕೆ ಈ ಖರೀದಿ ನಡೆದಿದೆ. ಇಂದು (ಮಾರ್ಚ್ 13) ಮುಂಜಾನೆ ಸನ್ ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಸನ್ ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ರಿಪೋರ್ಟ್ ಮಾಡಬಹುದೆಂದು ಸೂಚಿಸಲಾಗಿದೆ. ಈ ಕಾರಣದಿಂದಲೇ ಸಸ್ಪೆಂಡ್ ಆಗಿರಬಹುದು ಎಂಬುದು ಕೆಲವರ ಊಹೆ.
ಹಂಡ್ರೆಡ್ ಲೀಗ್ಸ್ ಆಕ್ಷನ್ ಅಲ್ಲಿ ಕಾವ್ಯಾ ಮಾರನ್, ತಂಡದ ಕೋಚ್ ಡ್ಯಾನಿಯಲ್ ವಿಟ್ಟೋರಿ ಇಬ್ಬರು. ಭಾರತ ಒಡೆತನದ ನಾಲ್ಕು ತಂಡಗಳು ಹಂಡ್ರೆಡ್ ಲೀಗ್‌ನಲ್ಲಿ ಇದ್ದು, ಇವರು ಪಾಕಿಸ್ತಾನದ ಆಟಗಾರರನ್ನು ಖರೀದಿಸುತ್ತಾರೆಯೇ ಎಂಬ ಪ್ರಶ್ನೆ ಇತ್ತು. ಕಾವ್ಯಾ ಅವರು ತೆಗೆದುಕೊಂಡ ಒಂದು ನಿರ್ಧಾರಕ್ಕೆ ಸಾಕಷ್ಟು ವಿರೋಧವಿದೆ. ಇದು ಐಪಿಎಲ್ ತಂಡದ ವರ್ಚಸ್ಸಿನ ಮೇಲೂ ಪರಿಣಾಮ ಬೀರಿರಬಹುದು.
ಸನ್ರೈಸರ್ಸ್ ಲೀಡ್ಸ್ ಫ್ರ್ಯಾಂಚೈಸ್ ಅಧಿಕೃತ ಖಾತೆಯನ್ನು ಅಮಾನತುಗೊಳಿಸಲಾಗಿದೆ
– ಕಳೆದ ರಾತ್ರಿ 8:30 PM ಕ್ಕೆ, ಸನ್ರೈಸರ್ಸ್ ತಮ್ಮ ತಂಡದಲ್ಲಿ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಿದರು ಮತ್ತು 2:00 AM ಕ್ಕೆ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಯಿತು
.
– ಇದು ಭಾರತೀಯ ಜನರ ಶಕ್ತಿಯನ್ನು ತೋರಿಸುತ್ತದೆ. ಈಗ ಕಾವ್ಯಾ ಮಾರನ್ಗೆ ಜನರದ್ದು ಏನೆಂದು ಅರ್ಥವಾಗುತ್ತದೆ… pic.twitter.com/sSPN475K6E
– ಬೆಂಬ ತವುಮ
(@gaandfaadtits) ಮಾರ್ಚ್ 13, 2026
ಸನ್ನರೈಸರ್ಸ್ ಲೀಡ್ಸ್ ಅಬ್ರಾರ್ ಗೆ ವೆಲ್ ಕಮ್ ಎಂದು ಪೋಸ್ಟ್ ಹಾಕಿತ್ತು. ಈ ಪೋಸ್ಟ್ ಸಾಕಷ್ಟು ವೈರಲ್ ಆಯಿತು. ಕಾವ್ಯಾ ಅವರನ್ನು ಬ್ಯಾನ್ ಮಾಡುವಂತೆ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ. ಸನ್ನರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಓಪನ್ ಮಾಡಿದರೆ ‘ಈ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ’ ಎಂಬ ಬರಹ ಕಾಣಿಸಿಕೊಂಡಿದೆ.
ಭಾರತದಲ್ಲಿ ಪಾಕಿಸ್ತಾನಿ ಆಟಗಾರರ ಮೇಲೆ ಸಂಪೂರ್ಣ ಬ್ಯಾನ್ ಹೇರಲಾಗಿದೆ. ಅವರ ಜೊತೆ ಐಸಿಸಿ ಟೂರ್ನಮೆಂಟ್ ಸಾಮಾನ್ಯವಾಗಿ ಮತ್ಯಾವುದೇ ಪಂದ್ಯವನ್ನು ಆಡುತ್ತಿಲ್ಲ. ಹೀಗಿರುವಾಗ ಸನ್ ರೈಸರ್ಸ್ ಹೈದರಾಬಾದ್ ನ ಸೋದರ ಸಂಸ್ಥೆಯಾಗಿರುವ ಸನ್ ರೈಸರ್ಸ್ ಲೀಡ್ಸ್ ಪಾಕ್ ಆಟಗಾರನನ್ನು ಖರೀದಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಈ ವಿರೋಧದ ಬಳಿಕ ಆಟಗಾರನನ್ನು ಕೈ ಬಿಡಲಾಗುವುದೇ ಎಂಬ ಪ್ರಶ್ನೆ ಮೂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿ ಇಲ್ಲಿ ಕ್ಲಿಕ್ ಮಾಡಿ..
ಸನ್ರೈಸರ್ಸ್ ಲೀಡ್ಸ್ ಫ್ರ್ಯಾಂಚೈಸ್ ಅಧಿಕೃತ ಖಾತೆಯನ್ನು ಅಮಾನತುಗೊಳಿಸಲಾಗಿದೆ 
(@gaandfaadtits)