Headlines

‘ಸನ್​ರೈಸರ್ಸ್’ ಪರ ಪಾಕ್ ಆಟಗಾರ ಕಣಕ್ಕಿಳಿಯುವುದು ಡೌಟ್!

‘ಸನ್​ರೈಸರ್ಸ್’ ಪರ ಪಾಕ್ ಆಟಗಾರ ಕಣಕ್ಕಿಳಿಯುವುದು ಡೌಟ್!


'ಸನ್‌ರೈಸರ್ಸ್' ಪರ ಪಾಕ್ ಆಟಗಾರ ಕಣಕ್ಕಿಳಿಯುವುದು ಡೌಟ್!

ಇಂಗ್ಲೆಂಡ್ ಕ್ರಿಕೆಟ್ ಆಡುವ ದಿ ಹ್ಯಾಂಡ್ರೆಡ್ ಲೀಗ್‌ಗೆ ಆಯ್ಕೆಯಾಗಿರುವ ಪಾಕಿಸ್ತಾನ್ ಸ್ಪಿನ್ನರ್ ಅಹ್ಮದ್ ಮುಂಬರುವ ಸ್ಪರ್ಧೆಯಲ್ಲಿ ಸನ್ ರೈಸರ್ಸ್ ಲೀ ಪರಡ್ಸ್ ಕಣಕ್ಕಿಳಿಯುವುದು ಅನುಮಾನ. ದಿ ಹಂಡ್ರೆಡ್ ಕೂಟದ ಪ್ರಶಸ್ತಿಗೆ ದಿನಾಂಕ ನಿಗದಿ, ಇದೇ ವೇಳೆ ಪಾಕಿಸ್ತಾನ್ ತಂಡ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಅಬ್ರಾರ್ ಆಯ್ಕೆಯಾದರೆ ಅವರು ಸನ್ ರೈಸರ್ಸ್ ಲೀಡ್ಸ್ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಮಾರ್ಚ್ 12, 2026 ರಂದು ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರ ಎಸ್‌ಆರ್‌ಹೆಚ್ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಬರೋಬ್ಬರಿ £1,90,000 (ಸುಮಾರು ₹2.34 ಕೋಟಿ) ಮೊತ್ತಕ್ಕೆ ಖರೀದಿಸಲಾಗಿದೆ.

ಭಾರತೀಯ ವಿರೋಧಿ ಹೊಂದಿರುವ ಪಾಕ್ ಆಟಗಾರನನ್ನು ಖರೀದಿಸಲು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಈ ಆಕ್ರೋಶದೊಂದಿಗೆ ಸನ್‌ರೈಸರ್ಸ್ ಲೀಡ್ಸ್‌ನ ‘X’ (ಟ್ವಿಟರ್) ಖಾತೆಯನ್ನು ವರದಿ ಮಾಡಿದ ಪರಿಣಾಮ ಎಸ್‌ಆರ್‌ಎಲ್ ತಂಡದ ಸೋಷಿಯಲ್ ಮೀಡಿಯಾ ಖಾತೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಇತ್ತ ಭಾರತ ಸೇರಿದಂತೆ ಎಲ್ಲೆಡೆಯಿಂದ ಎಸ್ ಆರ್ ಹೆಚ್ ಅಭಿಮಾನಿಗಳ ಒತ್ತಡ ಹೆಚ್ಚಾಗುವುದರಿಂದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪಾಕ್ ಆಟಗಾರನನ್ನು ಕೈ ಬಿಡಲಿದ್ದಾರೆ ಎಂದು ವರದಿಯಾಗಿದೆ.

ಇದೀಗ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಏಕೆಂದರೆ ಅಹ್ಮದ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದರೆ, ದಿ ಹಂಡ್ರೆಡ್ ಕಾರ್ಯಕ್ರಮಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಜುಲೈ ತಿಂಗಳವರೆಗೆ ಎಸ್ ಆರ್ ಹೆಚ್ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ.

ಪಾಕಿಸ್ತಾನ್-ವೆಸ್ಟ್ ಇಂಡೀಸ್ ಸರಣಿ ಯಾವಾಗ?

ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯು 202 ರ ಜುಲೈ 15 ರಿಂದ ಆಗಸ್ಟ್ 7 ರವರೆಗೆ. ಇತ್ತ ‘ದಿ ಹ್ಯಾಂಡ್ರೆಡ್’ ಪ್ರಕಟಣೆಯು ಜುಲೈ 21 ರಿಂದ ಆಗಸ್ಟ್ 16 ರವರೆಗೆ.

ಅಬ್ರಾರ್ ಅಹ್ಮದ್ ಅವರು ಆಗಸ್ಟ್ 7 ರವರೆಗೆ ವೆಸ್ಟ್ ಇಂಡೀಸ್‌ನಲ್ಲಿನ ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದ್ದು, ಅವರು ಸನ್ ರೈಸರ್ಸ್ ಲೀಡ್ಸ್ ತಂಡದ ಪಂದ್ಯಗಳಿಂದ ತಪ್ಪಿಸಿಕೊಳ್ಳುವುದು ಖಚಿತ.

ಇದೇ ನೆಪವಿಟ್ಟುಕೊಂಡು ಸನ್‌ರೈಸರ್ಸ್ ಲೀ ಫ್ರಾಂಚೈಸಿಯು ಅಬ್ರಾರ್ ಬದಲಿಗೆ ಮತ್ತೋರ್ವ ವಿದೇಶಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.

ನೇರವಾಗಿ ಕೈ ಬಿಡಲು ಯಾಕೆ ಸಾಧ್ಯವಿಲ್ಲ?

ಕಾನೂನು ಮತ್ತು ಆರ್ಥಿಕ ಸಮಸ್ಯೆ: ಅಬ್ರಾರ್ ಅಹ್ಮದ್ ಅವರನ್ನು ಹರಾಜಿನಲ್ಲಿ £190,000 (ಸುಮಾರು ₹2.34 ಕೋಟಿ) ಅಧಿಕೃತವಾಗಿ ಖರೀದಿಸಲಾಗಿದೆ. ಯಾವುದೇ ಬಲವಾದ ಶಿಸ್ತುಕ್ರಮದ ಕಾರಣವಿಲ್ಲದೆ ಅವರನ್ನು ಕೈಬಿಟ್ಟರೆ, ಫ್ರಾಂಚೈಸಿ ಅವರಿಗೆ ಪೂರ್ಣ ಹಣವನ್ನು ನೀಡಲಾಯಿತು.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿಯಮ: ‘ದಿ ಹಂಡ್ರೆಡ್’ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿಯಮದಡಿ ನಡೆಯುತ್ತಿದೆ. ಕೇವಲ ಸೋಶಿಯಲ್ ಮೀಡಿಯಾ ಆಕ್ರೋಶದ ಕಾರಣಕ್ಕೆ ಆಟಗಾರನನ್ನು ತೆಗೆದುಹಾಕಲು ICB ಅನುಮತಿ ನೀಡುವುದಿಲ್ಲ.

ಹೀಗಾಗಿಯೇ ಇದೀಗ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಅದರಂತೆ ಅಬ್ರಾರ್ ಅಹ್ಮದ್ ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ಆಯ್ಕೆಯಾದರೆ, ಸನ್ ರೈಸರ್ಸ್ ಲೀಡ್ಸ್ ತಂಡದಿಂದ ಹೊರಬೀಳುವುದು ಖಚಿತ.,

ಸನ್‌ರೈಸರ್ಸ್ ಲೀಡ್ಸ್ ತಂಡದ ಆಟಗಾರರು:

ವಿದೇಶಿ ಆಟಗಾರರು: ಅಬ್ರಾರ್ ಅಹ್ಮದ್ (ಪಾಕಿಸ್ತಾನ್), ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ), ನಾಥನ್ ಎಲ್ಲಿಸ್ (ಆಸ್ಟ್ರೇಲಿಯಾ), ಮತ್ತು ರಯಾನ್ ರಿಕೆಲ್ಟನ್ (ಸೌತ್ ಆಫ್ರಿಕಾ).

ಇನ್ನೂ ಓದಿ: ಕೆಎಲ್ ರಾಹುಲ್ ಗಾಗಿ ಇಂಗ್ಲೆಂಡ್ ಆಟಗಾರ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

ಇಂಗ್ಲೆಂಡ್ ಆಟಗಾರರು: ಹ್ಯಾರಿ ಬ್ರೂಕ್ (ನಾಯಕ), ಝಾಕ್ ಕ್ರಾಲಿ, ಬೆನ್ ಹೌವೆಲ್, ಬ್ರೈಡನ್ ಕಾರ್ಸ್, ಡಾನ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೀಸ್ ಟೋಪ್ಲಿ, ಟಾಮ್ ಅಲ್ಸೋಪ್, ಎಡ್ ಬರ್ನಾರ್ಡ್, ಟಾಮ್ ಲಾಸ್, ಮತ್ತು ಲಿಯಾಮ್ ಪ್ಯಾಟರ್ಸನ್-ವೈಟ್.

 

 

 



Source link

Leave a Reply

Your email address will not be published. Required fields are marked *