Headlines

ಮನೆ ನೋಡಿಕೊಳ್ಳುವ ಹೋಮ್‌ ಮ್ಯಾನೇಜರ್‌ಗೆ ತಿಂಗಳಿಗೆ 1 ಲಕ್ಷ ರೂ. ಸಂಬಳ ಕೊಡುತ್ತಿದ್ದಾರಂತೆ ಗ್ರೇಲ್ಯಾಬ್ಸ್ ಸಿಇಒ

ಮನೆ ನೋಡಿಕೊಳ್ಳುವ ಹೋಮ್‌ ಮ್ಯಾನೇಜರ್‌ಗೆ ತಿಂಗಳಿಗೆ 1 ಲಕ್ಷ ರೂ. ಸಂಬಳ ಕೊಡುತ್ತಿದ್ದಾರಂತೆ ಗ್ರೇಲ್ಯಾಬ್ಸ್ ಸಿಇಒ


ಈಗಿನ ಕಾಲದಲ್ಲಿ ದಂಪತಿಗಳಿಬ್ಬರೂ ಸಹ ಹೊರಗೆ ಹೋಗುವವರೇ. ಹೀಗಿರುವಾಗ ಅವರಿಗೆ ಮನೆ ಕೆಲಸಗಳನ್ನು ನೋಡಿಕೊಳ್ಳಲು ಕಷ್ಟಸಾಧ್ಯವಾಗುತ್ತದೆ. ಅದಕ್ಕಾಗಿ ಅಡುಗೆಯಿಂದ ಬಟ್ಟೆ ಒಗೆಯುವವರೆಗೆ ಮನೆ ಕೆಲಸ ಮಾಡಲು, 10 ರಿಂದ 20 ಸಾವಿರ ಸಂಬಳ ಕೊಟ್ಟು ಮನೆ ಕೆಲಸದವರನ್ನು ನೇಮಿಸುತ್ತಾರೆ. ಇದರ ಜೊತೆಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಯಾರಿಗೂ ವಹಿಸಿಕೊಡುವುದಿಲ್ಲ. ಅದೇ ಗ್ರೇಲ್ಯಾಬ್ಸ್ ಕಂಪನಿ ಸಿಐಒ ಅಮನ್ ಗೋಯಲ್ ಮಾತ್ರ ತಮಗೂ ಮತ್ತು ತಮ್ಮ ಹೆಂಡತಿಯರಿಗೂ ಯಾವುದೇ ರೀತಿಯ ತೊಂದರೆ ಆಗ್ಬಾರ್ದು ಎಂಬ ಕಾರಣಕ್ಕೆ ಅಡುಗೆ, ದಿನಸಿಯಿಂದ ಹಿಡಿದು ರಿಪೇರಿ ಕೆಲಸಗಳವರೆಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳಲು ಹೌಸ್ ಮ್ಯಾನೇಜರನ್ನು (ಹೋಮ್ ಮ್ಯಾನೇಜರ್) ನೇಮಿಸಿದ್ದಾರಂತೆ. ಇವರಿಂದ ಸಮಯ ಉಳಿಯುತ್ತಿದೆ, ತಲೆನೋವು ಕೂಡ ಕಮ್ಮಿಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತ ಪೋಸ್ಟ್ ವೈರಲ್ ಆಗುತ್ತಿದೆ.

ಹೋಮ್ ಮ್ಯಾನೇಜರ್‌ಗೆ ತಿಂಗಳಿಗೆ 1 ಲಕ್ಷ ರೂ. ಸಂಬಳ ಕೊಡ್ತಿದ್ದಾರೆ ಗೋಯೆಲ್:

ಗ್ರೇಲ್ಯಾಬ್ಸ್ ನ ಸಂಸ್ಥಾಪಕ ಮತ್ತು ಸಿಐಒ ಅಮನ್ ಗೋಯೆಲ್, ಹಾಗೂ ಅವರ ಪತ್ನಿ ಹರ್ಷಿತಾ ಶ್ರೀವಾಸ್ತವ ಕಂಪನಿ ಕೆಲಸದಲ್ಲಿ ಬ್ಯೂಸಿ ಆಗಿರುವ ಕಾರಣ ಮನೆ ಹಾಗೂ ಕಂಪನಿಯವರಿಗೆ ಕಷ್ಟಸಾಧ್ಯವಾದ ಕಾರಣ ಮನೆಯನ್ನು ನೋಡಿಕೊಳ್ಳಲು ಹೌಸ್ ಮ್ಯಾನೇಜರನ್ನು ನೇಮಿಸಿದಂತೆ. ಮನೆ ನಿರ್ವಹಿಸುವಲ್ಲಿ ತರಬೇತಿ ಪಡೆದ ಈ ಮ್ಯಾನೇಜರ್‌ಗಳ ಊಟದ ಯೋಜನೆ, ದಿನಸಿ, ವಾರ್ಡ್‌ರೋಬ್‌ಗಳು, ಮನೆ ರಿಪೇರಿ, ಲಾಂಡ್ರಿ ಸೇರಿದಂತೆ ಮನೆಯ A To Z ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಇವರಿಂದಾಗಿ ನಮ್ಮ ತಲೆನೋವು ಸಾಕಷ್ಟು ಕಮ್ಮಿಯಾಗಿದೆ ಎಂದು ಅವರು ಹೇಳಿದ್ದಾರೆ.

ಎಕ್ಸ್‌ನಲ್ಲಿ ಹೌಸ್ ಮ್ಯಾನೇಜರ್‌ಗಳ ಬಗ್ಗೆ ಲೇಖಕ ಸಾಹಿಲ್ ಬ್ಲೂಮ್ ಅವರ ಪೋಸ್ಟ್‌ಗೆ ಪ್ರತ್ಯುತ್ತರಿಸುತ್ತದೆ, “ವಾಸ್ತವವಾಗಿ ನನ್ನ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಹೌಸ್ ಮ್ಯಾನೇಜರನ್ನು ನೇಮಿಸಿಕೊಂಡಿದ್ದೇನೆ, ಅವರು ಊಟದ ಯೋಜನೆ, ವಾರ್ಡ್‌ರೋಬ್‌ಗಳು, ರಿಪೇರಿ, ನಿರ್ವಹಣೆ, ದಿನಸಿ, ಲಾಂಡ್ರಿ ಸೇರಿದಂತೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ” ಎಂದು ಬರೆದಿದ್ದಾರೆ.

ಪೋಸ್ಟ್ ಇಲ್ಲಿದೆ ನೋಡಿ:

ತಮ್ಮ ಹೌಸ್ ಮ್ಯಾನೇಸ್ ಬಗ್ಗೆ ಮಾತನಾಡುತ್ತಾ, ಗೋಯೆಲ್, “ನಮ್ಮೊಂದಿಗೆ ಕೆಲಸ ಮಾಡುವ ವ್ಯಕ್ತಿಯೇ ವಿದ್ಯಾವಂತರು ಮತ್ತು ಹೋಟೆಲ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಅವರಿಗೆ ತಿಂಗಳಿಗೆ 1 ಲಕ್ಷ ರೂ. ನೀಡುತ್ತೇವೆ. ಇದು ದುಬಾರಿಯೇ? ಬಹುಶಃ ಹೌದು. ಆದರೆ ನಾವು ಶಕ್ತರಾಗಿದ್ದೇವೆ, ಆದ್ದರಿಂದ ಅವರಿಗೆ ನಾವು ಮಾಡಿದ ದುಃಖವು ಕಮ್ಮಿಯಾಗಿದೆ ಮತ್ತು ಸಮಯವೂ ಉಳಿದಿದೆ” ಎಂದು ಹೇಳಿದರು. ನಮ್ಮ ಹಿರಿಯರು, ಅವರಿಗೆ ಮನೆಯ ಜವಾಬ್ದಾರಿಗಳನ್ನು ಬಿಟ್ಟು ನಿಮಗೆ ಹೊರೆ ಕೊಡಲು ನಾವು ಬಯಸುವುದಿಲ್ಲ. ಅದಕ್ಕಾಗಿ ಅಡುಗೆ, ಪೂರೈಸುವುದು, ದಿನಸಿ, ಮ್ಯಾನ್ ರಿಪೇರಿ ಕಾರ್ಯವನ್ನೂ ನೋಡಿಕೊಳ್ಳಲು ಮನೆ ನೇಜರನ್ನು ನೇಮಿಸಿದ್ದು ಎಂದು ಗೋಯೆಲ್ ಹೇಳಿದ್ದಾರೆ.

ಇದನ್ನೂ ಓದಿ: ಕೂದಲು ಉದುರುವಿಕೆಯ ಸಮಸ್ಯೆಗೆ ಗುಡ್ಬೈ ಹೇಳಲು ನೀವು ಮಾಡಬೇಕಾದದ್ದು ಇಷ್ಟೆ

ಈ ಪೋಸ್ಟ್ ಸಾಕಷ್ಟು ಪ್ರತಿಕ್ರಿಯೆಗಳನ್ನು ತೋರಿಸಿದ್ದು, `ನೀವು 2 ರಿಂದ ನಾಲ್ಕು ಮನೆಕೆಲಸದವರನ್ನು ಮೇಲ್ವೆಚಾರಣೆ ಮಾಡುವ ಹೌಸ್ ಮ್ಯಾನೇಜರ್‌ಗೆ 1 ಲಕ್ಷ ಕೊಟ್ಟು ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೌಸ್‌ ಮ್ಯಾನೇಜರ್‌ ನೇಮಿಸುವುದರಿಂದ ಪೋಷಕರಿಗೆ ಉತ್ತಮ ಆರೋಗ್ಯ ಸಿಗುತ್ತದೆ’ ಎಂದು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *