ಖಾಸಗಿ ಬ್ಯಾಂಕ್ ಮ್ಯಾನೇಜರ್, ತನ್ನ ಬ್ಯಾಂಕ್ನ ಹೌಸ್ ಕೀಪಿಂಗ್ ಸಿಬ್ಬಂದಿ ಹಸಿನಾಬೇಗಂ ಅವರನ್ನು ಲೈಂಗಿಕವಾಗಿ ಬಳಸಿಕೊಂಡು, ಹಲ್ಲೆ ನಡೆಸಿ ವಿಷಪ್ರಾಷಣ ಮಾಡಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದು, ಬೇಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆಗೆ ವಿಷಪ್ರಾಷಣ ಮಾಡಿಸಿ ಕೊಲೆಗೈದಿರುವ ಆರೋಪ ಹುಬ್ಬಳ್ಳಿಯ ಖಾಸಗಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕೇಳಿ ಬಂದಿದೆ. ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಹಲ್ಲೆಗೈದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಬೇಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಸಿನಾಬೇಗಂ ಮೃತ ಮಹಿಳೆ. ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಹಸಿನಾಬೇಗಂ ಮೃತವಾಗಿದ್ದಾರೆ. ಮೂಲತಃ ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ನಿವಾಸಿ ಹಸಿನಾಬೇಗಂ ಹುಬ್ಬಳ್ಳಿಯ ಖಾಸಗಿ ಬ್ಯಾಂಕ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು.

ಆರೋಪಿ ಬ್ಯಾಂಕ್ ಮ್ಯಾನೇಜರ್ ಶ್ಯಾಮ್ ಸುಂದರ್ ವಿರುದ್ಧ ವಿಷಪ್ರಾಷಣದ ಆರೋಪ ಕೇಳಿ ಬಂದಿದೆ. ತನ್ನ ಬ್ಯಾಂಕ್ನಲ್ಲಿ ಕೆಲಸ ಕೊಡಿಸಿರೋದನ್ನು ನೆಪವಾಗಿಟ್ಟುಕೊಂಡು ಹಸಿನಾಬೇಗಂ ಅವರನ್ನು ಶ್ಯಾಮ್ ಸುಂದರ್ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಹಾಸನ: ಮಕ್ಕಳಿಂದ ಸಿಗದ ಪ್ರೀತಿ: ವೃದ್ಧಾಶ್ರಮದಿಂದ ಬಂದು ಸಾವಿಗೆ ಶರಣಾದ ದಂಪತಿ

ಏಳು ವರ್ಷಗಳ ಹಿಂದೆ ಪತಿ ಮತ್ತು ಮಕ್ಕಳೊಂದಿಗೆ ಬಂದು ಹಸಿನಾಬೇಗಂ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಎರಡು ದಿನಗಳ ಹಿಂದೆ ಹಸಿನಾಬೇಗಂ ಮನೆಗೆ ಬಂದಿದ್ದ ಶ್ಯಾಮಸುಂದರ್, ಲೈಂಗಿಕವಾಗಿ ಬಳಸಿಕೊಂಡು ಹಲ್ಲೆಗೈದು ವಿಷ ಕುಡಿಸಿ ಎಸ್ಕೇಪ್ ಆಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಪುತ್ತೂರು ಬಿಜೆಪಿ ನಾಯಕನ ಪುತ್ರನಿಂದ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ: ಆತ್ಮ*ಹತ್ಯೆಗೆ ಯತ್ನಿಸಿದ ಮಗುವಿನ ತಾಯಿ

Source link
ಲೈಂ*ಗಿಕವಾಗಿ ಬಳಸ್ಕೊಂಡು ಹಸಿನಾಬೇಗಂಗೆ ವಿಷ ಕುಡಿಸಿದ್ನಾ ಬ್ಯಾಂಕ್ ಮ್ಯಾನೇಜರ್ ಶ್ಯಾಮ್!