
ಸಿನಿಮಾ (ಸಿನಿಮಾ) ರಂಗವೇ ಹಾಗೆ. ಎಲ್ಲೋ, ಹೇಗೋ ಇದ್ದವರು ಸಹ ಸ್ಟಾರ್ ಆಗಿ ಬಿಡುತ್ತಾರೆ, ಸ್ಟಾರ್ ಆಗಿ ಮೆರೆದವರು ಸಹ ಅದೃಷ್ಟ ಕೈಕೊಟ್ಟು ಪಾತಾಳ ಸೇರುತ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ದಕ್ಷಿಣ ಭಾರತ ಚಿತ್ರರಂಗದಲ್ಲಿದೆ. ಐಶ್ವರ್ಯಾ ರೈ, ಮಮ್ಮುಟಿ, ಮಾಧವನ್ ಇನ್ನೂ ಹಲವಾರು ಸ್ಟಾರ್ ನಟ-ನಟಿಯರು, ಹಲವು ಅತ್ಯುತ್ತಮ ನಿರ್ದೇಶಕರ ಜೊತೆಗೆ ಕೆಲಸ ಮಾಡಿ, ಸೂಪರ್ ಸ್ಟಾರ್ ಎನಿಸಿಕೊಂಡ ನಟನೋರ್ವ ಆ ಬಳಿಕ ಎಲ್ಲವನ್ನೂ ಕಳೆದುಕೊಂಡು ಚಿತ್ರರಂಗದಿಂದ ದೂರವಾಗಿ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಾ, ಲಾರಿ ಓಡಿಸುತ್ತಾ ಜೀವನ ನಡೆಸಿ, ಇದೀಗ ಬರೋಬ್ಬರಿ 11 ವರ್ಷದ ಬಳಿಕ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಅದು ಇನ್ಯಾರೂ ಅಲ್ಲ ಕನ್ನಡದಲ್ಲೂ ನಟಿಸಿರುವ ತಮಿಳಿನ ನಟ ಅಬ್ಬಾಸ್.
1996 ರ ಬ್ಲಾಕ್ ಬಸ್ಟರ್, ಕಲ್ಟ್ ಬಸ್ಟರ್ ಸಿನಿಮಾ ‘ಪ್ರೇಮ ದೇಸಂ’ ಸಿನಿಮಾ ಮೂಲಕ ನಟನೆ ಆರಂಭಿಸಿದ ಅಬ್ಬಾಸ್ ತಮ್ಮ ಅತ್ಯುತ್ತಮ ನಟನೆ ಮತ್ತು ಅದ್ಭುತ ಲುಕ್ಸ್ ನಿಂದಾಗಿ ಬಹು ಬೇಗ ಸ್ಟಾರ್ ನಟ ಎನಿಸಿಕೊಂಡರು. ವರ್ಷಕ್ಕೆ ಏಳು-ಎಂಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಮಾಧವನ್ ಜೊತೆಗೆ ‘ಶಾಂತಿ, ಶಾಂತಿ’ ಹೆಸರಿನ ಸಿನಿಮಾದಲ್ಲಿಯೂ ನಟಿಸಿದ್ದರು. ಐಶ್ವರ್ಯಾ ರೈ, ಕಮಲ್ ಹಾಸನ್, ರಜನೀಕಾಂತ್, ಮಮ್ಮುಟಿ ಇನ್ನೂ ಹಲವರೊಟ್ಟಿಗೆ ನಟಿಸಿದರು ಅಬ್ಬಾಸ್, 200 ಇತ್ತೀಚಿನಲ್ಲೂ ಸ್ಟಾರ್ ಆಗಿದ್ದರು, ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದರು. ಆದರೆ ಆ ಬಳಿಕ ಅವರಿಗೆ ಅವಕಾಶಗಳು ಕಡಿಮೆ ಆದವು.
ಇದನ್ನೂ ಓದಿ:’ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳಬೇಡಿ’; ರವಿಚಂದ್ರನ್ ಕೋರಿಕೆ
2015ರ ಬಳಿಕ ಚಿತ್ರರಂಗದಿಂದಲೇ ದೂರಾದ ಅಬ್ಬಾಸ್ ವಿದೇಶಕ್ಕೆ ಹೋದರು ಅಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದರು. ಲಾರಿ ಡ್ರೈವಿಂಗ್ ಮಾಡಿದರು. ಕಸ್ಟ್ರಕ್ಷನ್ ನಲ್ಲಿ ಕೆಲಸ ಮಾಡಿದರು. ಬಳಿಕ ಮೋಟಿವೇಷನಲ್ ಸ್ಪೀಕರ್ ಆದರು. ಆದರೆ ಈಗ ಅವರು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಇದೀಗ 11 ವರ್ಷಗಳ ನಂತರ ಅಬ್ಬಾಸ್ ಮತ್ತೆ ಬಣ್ಣ ಹಚ್ಚಿದ್ದಾರೆ. ಜಿ.ವಿ. ಪ್ರಕಾಶ್ ನಟನೆಯ ‘ಹ್ಯಾಪಿ ರಾಜ್ ಎಂಬ ತಮಿಳು ಚಿತ್ರದಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಟ್ರೈಲರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅದರ ಜೊತೆಗೆ ಮಲೆಯಾಳನ್ನ ‘ಹಾಫ್’ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಅದರ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.
ಅಬ್ಬಾಸ್, ತಮಿಳಿನ ಜೊತೆಗೆ ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕನ್ನಡದ ‘ಶಾಂತಿ ಶಾಂತಿ’ ಸಿನಿಮಾ ಆದ ಬಳಿಕ ‘ಶ್ವೇತ ನಾಗ’, ‘ಅಪ್ಪು ಪಪ್ಪು’, ‘ಸವಾರಿ 2’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿರುವುದು ಅವರ ಹಳೆಯ ಅಭಿಮಾನಿಗಳಿಗೆ ಖುಷಿ ತಂದಿದೆ. ಮೊದಲಿನಂತೆ ಅವರಿಗೆ ಸ್ಟಾರ್ ಗಿರಿ ಸಿಗುತ್ತದೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ