ನಟ ದರ್ಶನ್ (ದರ್ಶನ್) ಅವರ ವಿರುದ್ಧ ಹಲವು ಆರೋಪಗಳಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ಇಂದು (ನವೆಂಬರ್ 3) ದೋಷಾರೋಪಣೆ ನಿಗದಿ ಮಾಡಲಾಗುತ್ತಿದೆ. ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹಾಜರಾಗಲು ದರ್ಶನ್ ಅವರು ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದಾರೆ. ಇಂದು ದರ್ಶನ್ ಪಾಲಿಗೆ ಮಹತ್ವದ ದಿನ. ಪವಿತ್ರಾ ಗೌಡ (ಪವಿತ್ರ ಗೌಡ) ಸೇರಿದಂತೆ 17 ಮಂದಿ ಆರೋಪಿಗಳ ಮೇಲಿನ ದೋಷಾರೋಪಣೆ ನಿಗದಿ ಆಗಲಿದೆ. 4 ಗಂಟೆಗೆ ವಿಚಾರಣೆ. ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ನ್ಯಾಯಾಧೀಶರು ನಿರ್ಧರಿಸಿದ್ದಾರೆ. ಕೋರ್ಟ್ ಹಾಲ್ ನಲ್ಲಿ ವಕೀಲರು ಕಿಕ್ಕಿರಿದು ತುಂಬಿ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.