ನಟಿ ಉರ್ಫಿ ಜಾವೇದ್ ಅವರ ವಿಚಿತ್ರ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ನಟ ಫೈಜಾನ್ ಅನ್ಸಾರಿ, ಉರ್ಫಿ ಹೆಣ್ಣಲ್ಲ, ಆಕೆ ತೃತೀಯ ಲಿಂಗಿ ಎಂದು ಹೇಳಿದ್ದು, ಈ ಸತ್ಯವನ್ನು ಸಾಬೀತುಪಡಿಸಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ದಿನಕ್ಕೊದ್ದರಂತೆ ಚಿತ್ರ-ವಿಚಿತ್ರ ಡ್ರೆಸ್ಗಳಿಂದ ಅದರಲ್ಲಿಯೂ ಕ್ರಿಯೇಟಿವ್ ಬಟ್ಟೆಗಳಿಂದ ಎಲ್ಲರ ಮನಸ್ಸನ್ನು, ಎಲ್ಲರ ಗಮನವನ್ನು ಸೆಳೆಯುತ್ತಿರುವವರು ಎಂದರೆ ನಟಿ ಉರ್ಫಿ ಜಾವೇದ್ (Uorfi Javed). ಕಳೆದ ಕೆಲವು ತಿಂಗಳುಗಳಿಂದ ಈಕೆಯ ಹವಾ ಸ್ವಲ್ಪ ಕಡಿಮೆಯಾಗುತ್ತಾ ಬಂದಿದ್ದರೂ, ಆಗಾಗ್ಗೆ ಶಾಕಿಂಗ್ ಎನ್ನುವಂಥ ಬಟ್ಟೆ ಧರಿಸಿ ಬಂದು ಶಾಕ್ ಮೇಲೆ ಶಾಕ್ ಕೊಡುತ್ತಲೇ ಇರುತ್ತಾರೆ.

ಆದರೆ, ಇದೀಗ ಅವರಿಗೇ ಒಂದು ಶಾಕ್ ಎದುರಾಗಿದೆ. ಅದೇನೆಂದರೆ, ಉರ್ಫಿ ಹೆಣ್ಣಲ್ಲ ಎಂದು ಸಾಬೀತು ಮಾಡಲು ಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ನಟ ಫೈಜಾನ್ ಅನ್ಸಾರಿ ಹೇಳಿದ್ದಾರೆ. ಉರ್ಫಿ ಕಿನ್ನರ್ (ತೃತೀಯ ಲಿಂಗಿ). ಆಕೆ ಹೆಣ್ಣಲ್ಲ. ಅವಳು ಆ ಸಮುದಾಯಕ್ಕೆ ಸೇರಬೇಕು ಎಂದು ನಟ ಹೇಳಿದ್ದಾರೆ.

ಈ ಸತ್ಯ ನನಗೆ ಗೊತ್ತಾಗಿದೆ. ಅದು ಜಗತ್ತಿಗೆ ತಿಳಿಯಬೇಕಿದೆ. ಆಕೆ ಕಿನ್ನರ್ ಸಮುದಾಯಕ್ಕೆ ಸೇರಬೇಕಿದೆ. ಇದೇ ಕಾರಣಕ್ಕೆ ಆಕೆಯ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಉರ್ಫಿ ಬಗ್ಗೆ ಸಾಕಷ್ಟು ದಾಖಲೆ ಕಲೆ ಹಾಕಿದ್ದೇನೆ. ಕಿನ್ನರ್ ಸಮಾಜದ ಮುಖಂಡರ ಜೊತೆ ಮಾತನಾಡಿದ್ದೇನೆ. ಅವರು ಕೂಡ ಕೋರ್ಟ್ನಲ್ಲಿ ಕೇಸ್ ಹಾಕಲು ಸಹಾಯ ಮಾಡುತ್ತಿದ್ದಾರೆ ಎಂದು ಫೈಜಾನ್ ಹೇಳಿದ್ದಾರೆ.

ಅಷ್ಟಕ್ಕೂ ಉರ್ಫಿ ಎಂದರೆ, ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ.

ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇತ್ತೀಚೆಗೆ ಈಕೆಯ ಡ್ರೆಸ್ಗಾಗಿಯೇ ಮುಂಬೈನ ರೆಸ್ಟೋರೆಂಟ್ನಲ್ಲಿ ಎಂಟ್ರಿ ಸಿಕ್ಕಿರಲಿಲ್ಲ. ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ನಾವು ನಿಜವಾಗಿಯೂ 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ಕೇಳಿದ್ದರು. ಇದೀಗ ಹೈಕೋರ್ಟ್ಗೆ ಅರ್ಜಿ ಹೋಗಲಿದೆ ಎನ್ನಲಅಘಿದೆ. vibelyfz ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.

Source link
ಉರ್ಫಿ ಜಾವೇದ್ ಹೆಣ್ಣಲ್ಲ- ನಟ ಫೈಜಾನ್ ಬಳಿ ಸಾಕ್ಷಿ ಇದೆಯಂತೆ! ಹೈಕೋರ್ಟ್ ಮೆಟ್ಟಿಲೇರಿದ ನಟ ಹೇಳಿದ್ದೇನು