ಜಾತಕದಲ್ಲಿದ್ದಂತೆ ಆಗೋಯ್ತು; ರಾಯರ ಮಠದಲ್ಲಿ ಕಸ ಗುಡಿಸಿದ ಅಸಲಿ ಕಾರಣ ಬಿಚ್ಚಿಟ್ಟ ನಟ ಜಗ್ಗೇಶ್

ಜಾತಕದಲ್ಲಿದ್ದಂತೆ ಆಗೋಯ್ತು; ರಾಯರ ಮಠದಲ್ಲಿ ಕಸ ಗುಡಿಸಿದ ಅಸಲಿ ಕಾರಣ ಬಿಚ್ಚಿಟ್ಟ ನಟ ಜಗ್ಗೇಶ್

ಜಾತಕದಲ್ಲಿದ್ದಂತೆ ಆಗೋಯ್ತು; ರಾಯರ ಮಠದಲ್ಲಿ ಕಸ ಗುಡಿಸಿದ ಅಸಲಿ ಕಾರಣ ಬಿಚ್ಚಿಟ್ಟ ನಟ ಜಗ್ಗೇಶ್

Actor Jaggesh On Mutt: ಇತ್ತೀಚೆಗೆ ನವರಸನಾಯಕ ಜಗ್ಗೇಶ್‌ ಅವರು ಮಂತ್ರಾಲಯದಲ್ಲಿ ಕಸ ಗುಡಿಸಿದರು. ಈ ವಿಡಿಯೋ ವೈರಲ್‌ ಆಗಿದ್ದು, ಕೆಲವರು ನೆಗೆಟಿವ್‌ ಮಾತನಾಡಿದರು. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.

ಪ್ರಿಯಾಂಕಾ ಚೋಪ್ರಾ ಶ್ರೀಮಂತೆ ನಟಿ, ಆದರೂ ಆಲಯದಲ್ಲಿ ತಟ್ಟೆತೊಳೆದಳು ಎಂದಾಗ ದೊಡ್ಡ ಸುದ್ಧಿ ಆಯಿತು..! ಜಗ್ಗೇಶ್ ರಾಯರ ಮಠದಲ್ಲಿ ಕಸಗುಡಿಸಿದ ಎಂದಾಗ ಜಾಲತಾಣದಲ್ಲಿ ಅಣಕವಾಯಿತು..!

ವಿಷಯ ಅದಲ್ಲ, ಯಾರೇ ಮನುಷ್ಯನಾಗಲಿ ಸೇವಕನಂತೆ ಬಾಳಿದರೆ ದೇವರಿಗೆ ಪ್ರಿಯವಾಗಿ ಗ್ರಹ ದೋಷ ನಿವೃತ್ತಿಯಾಗುತ್ತದೆ! ನಮ್ಮ ಅಮ್ಮ ಕಲಿಸಿದ ಈ ಪಾಠ ನಾನು ಇಂದು ಪಾಲಿಸಿ ದೇವರ ಕೃಪೆಯಿಂದ ನನ್ನ ಬದುಕು ಶ್ರೀರಾಮಪುರ ಪುಟ್ಪಾತಿನಿಂದ ಶುರುವಾಗಿ ಇಲ್ಲಿಯವರೆಗೂ ತಂದು ನಿಲ್ಲಿಸಿದೆ.. ಧನ್ಯೋಸ್ಮಿ

ಉದಾಹರಣೆಗೆ, ನನ್ನ ಗ್ರಹಸ್ಥಿತಿ ಈಗ 5 ರಲ್ಲಿ ಶನಿ 8 ರಲ್ಲಿ ಗುರು ಗ್ರಹ ಇದೆ. ಜೋತಿಷ್ಯ ಅರಿತವನಾಗಿ ನನಗೆ ಅರಿವಿತ್ತು, ಕಡ್ಡಾಯ ವಾಹನ ಅಪಘಾತ ಆಗುತ್ತದೆ ಅಥವಾ ಅನಾವಷ್ಯಕ ತೊಂದರೆ ಆಗುತ್ತದೆ, ಅದಕ್ಕಾಗಿ ದೋಷ ನಿವೃತ್ತಿಗೆ ಆಲಯ ಗುಡಿಸುವ ಸೇವೆ ಮಾಡಬೇಕೆಂದು, ಇದೇ ಶ್ರೇಷ್ಠ ಪರಿಹಾರ ಎಂದು ರಾಯರ ಮಠದ ಕಸಗುಡಿಸುವ ಸೇವೆ ಮಾಡುವೆ.

ಆಶ್ಚರ್ಯ ಪಡುವಂತೆ ನನಗೆ 2 ಅಪಘಾತವಾಯಿತು. ಒಂದು ದೆಹಲಿಯಲ್ಲಿ ನಾನು ಚಲಿಸುತ್ತಿದ್ದ ಕಾರಿಗೆ ಮುಂದಿನ ಕಾರು ಏಕಾಏಕಿ ಬ್ರೇಕ್ ಹಾಕಿ ನಮ್ಮ ಕಾರು ಅದಕ್ಕೆ ಗುದ್ದಿ ಹಿಂದಿನ ಕಾರುಗಳು ನಮಗೆ ಗುದ್ದಿ ಘೋರ ಅಪಘಾತವಾಯಿತು. ಒಳಗಿದ್ದ ನನಗೂ, ನನ್ನ PA ಗೂ ಸಣ್ಣ ಗಾಯವು ಇಲ್ಲ, ಗಾಡಿ ಮಾತ್ರ ಜಕಮ್! 2ನೇ ಅಪಘಾತ, ನಿಂತ ನನ್ನ ಗಾಡಿಗೆ ಚಾಲಕ ಅಚಾತುರ್ಯಕ್ಕೆ ಮರಕ್ಕೆ ಅಪ್ಪಳಿಸಿ ಲಕ್ಷ ರೂ ಖರ್ಚಾಯಿತು ರಿಪೇರಿಗೆ!

ನನಗೆ ಯಾವ ತೊಂದರೆ ಆಗಲಿಲ್ಲ, ಈಗ ಹೇಳಿ ಇದು ಕಾಕತಾಳಿಯವೇ? ದೇವರ ಸೇವೆಯ ಮಹತ್ವ ಆಪತ್ತಿನ ಸಮಯದಲ್ಲಿ ಅರಿಯ ಬೇಕು. ಯಾರೇ ಆಗಲಿ ದೇವರ ನಂಬಿಕೆ ಇದ್ದವರ ಸೇವೆಯ ಕಾರಣ ಅರಿಯಬೇಕೆ ಹೊರತು, ಅವರ ಕಾರ್ಯ(ವಿಶೇಷವಾಗಿ ಸೆಲಿಬ್ರಿಟಿಗಳ ವೈಯಕ್ತಿಕ ವಿಷಯ) ಕದ್ದು ಚಿತ್ರೀಕರಿಸಿ ಜಾಲತಾಣಕ್ಕೆ ಹಾಕಿ ಬರುವ ಕೆಟ್ಟ ಸಂದೇಶ ನೋಡಿ ವಿಕೃತ ಆನಂದ ಚರ್ಚೆ ಮಾಡಬಾರದು!

ಅಣಕ, ಅಪಹಾಸ್ಯ, ದೇವರ ಸೇವೆ ಮಾಡುವ ಮನುಷ್ಯನಿಗೆ ಮಾಡಿದಾಗ ಅವನ ದೋಷ ಅಣಕ ಮಾಡಿದವನಿಗೆ ಸುತ್ತಿಕೊಂಡು ಅವನ ಯಶಸ್ಸು ಕುಂಟಿತವಾಗುತ್ತದೆ (ಭಾಗವತದಲ್ಲಿ ಇದರ ಉಲ್ಲೇಖವಿದೆ). ಜಗತ್ತು ಎಷ್ಟೇ ಆಧುನಿಕತೆ ಆದರು ದೇವರ ಕೃಪೆ ಹಾಗು ಗುರು ಹಿರಿಯರ ಆಶೀರ್ವಾದ ಪ್ರತಿ ಮನುಷ್ಯನಿಗೆ ಇಂದು ಮುಂದು ಎಂದೆಂದೂ ಬೇಕೇ ಬೇಕು ಎಂಬುದು ನನ್ನ ಅನುಭವದ ಅನಿಸಿಕೆ.

ಸದಾ ನಿಮ್ಮ ಒಳಿತು ಬಯಸುವ ನಿಮ್ಮವನೆ ನಾನು.. ನನಗೆ ತಿಳಿದದ್ದು ನಿಮಗೆ ತಿಳಿಸುವೆ. ಇಷ್ಟಪಟ್ಟವರು ಕೇಳಿ ಇಷ್ಟವಾಗದವರು ಏನೋ ನಮ್ಮ ಜಗ್ಗೇಶ ಬರೆದವನೆ ಎಂದು ನಕ್ಕು ಸುಮ್ಮನಾಗಿ.

Source link

Leave a Reply

Your email address will not be published. Required fields are marked *