Headlines

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​

ಬಿಗ್​ಬಾಸ್​ನ ಪ್ರಬಲ ಸ್ಪರ್ಧಿ ಎನಿಸಿರುವ ಗಿಲ್ಲಿ ನಟನ ಕುರಿತು ನಟ ಜಗ್ಗೇಶ್ ಈ ಹಿಂದೆ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಆಡಿದ್ದ ಮಾತುಗಳು ವೈರಲ್ ಆಗಿವೆ. ಗಿಲ್ಲಿ ನಟನ ಬಗ್ಗೆ ಅಂದು ಜಗ್ಗೇಶ್ ನುಡಿದಿದ್ದ ಭವಿಷ್ಯ ಇದೀಗ ನಿಜವಾಗುತ್ತಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

ಬಿಗ್​ಬಾಸ್​​ನಲ್ಲಿ (Bigg Boss) ವಿನ್ನರ್​ ಯಾರಾಗುತ್ತಾರೆ ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಇದಾಗಲೇ ಲಕ್ಷಾಂತರ ಮಂದಿ ಅಭಿಮಾನಿಗಳ ಮನಸ್ಸನ್ನು ಗೆದ್ದು ಬೀಗಿದವರು ಗಿಲ್ಲಿ ನಟ (Gilli Nata). ಇವರೇ ವಿನ್ನರ್​ ಎಂದು ಬಿಗ್​ಬಾಸ್​ನಿಂದ ಹೊರಬಂದಿರುವ ಸ್ಪರ್ಧಿಗಳೂ ಹೇಳಿಯಾಗಿದೆ.

ಆದರೆ, ಕೊನೆ ಕ್ಷಣದವರೆಗೂ ಏನೂ ಹೇಳಲು ಆಗದು. ಯಾವಾಗ ಬೇಕಾದರೂ ಉಲ್ಟಾ ಹೊಡೆಯಬಹುದು. ಗೆಲುವು ಯಾರ ಕಡೆಗಾದರೂ ಆಗಬಹುದು. ಬಿಗ್​ಬಾಸ್​ ಮನಸ್ಸಿನಲ್ಲಿ ಏನು ಇದ್ಯೋ ಹೇಳುವುದೂ ಕಷ್ಟ. ವಿನ್ನರ್​ ಯಾರೇ ಆಗಲಿ, ಗಿಲ್ಲಿ ನಟ ಮಾತ್ರ ತಮ್ಮ ಫ್ಯಾನ್ಸ್​ ಸಂಖ್ಯೆಯನ್ನು ನೂರಾರು ಪಟ್ಟು ಹೆಚ್ಚಿಸಿಕೊಂಡದ್ದಂತೂ ಸುಳ್ಳಲ್ಲ.

ಇದರ ನಡುವೆಯೇ, ನಟ ಜಗ್ಗೇಶ್​ (Actor Jaggesh about Gilli Nata) ಅವರು ಕಾಮಿಡಿ ಕಿಲಾಡಿ ಸಂದರ್ಭದಲ್ಲಿ ಗಿಲ್ಲಿ ನಟನ ಬಗ್ಗೆ ಹೇಳಿದ್ದ ಮಾತೊಂದು ಇದೀಗ ವೈರಲ್​ ಆಗುತ್ತಿದೆ. ಅವರು ಅಂದೇ ಗಿಲ್ಲಿಯ ಬಗ್ಗೆ ಭವಿಷ್ಯ ನುಡಿದಿದ್ದರು ಎಂದು ಹೇಳಲಾಗುತ್ತಿದೆ.

ಕಾಮಿಡಿ ಕಿಲಾಡಿಯಲ್ಲಿ ಗಿಲ್ಲಿ ನಟನ ಪರ್ಫಾಮೆನ್ಸ್ ನೋಡಿದ್ದ ನಟ ಜಗ್ಗೇಶ್​ ಅವರು, ಬರುವ ವರ್ಷ ಇವನು ಛತ್ರಿ ಹಿಡಿಯೋಕೆ ಒಬ್ಬರನ್ನ ಇಟ್ಕೊಂಡು, ಜೊತೆಗೆ ನಾಲ್ಕು ಜನ ಬಾಡಿ ಗಾರ್ಡ್ ಹಾಕೊಂಡು ಓಡಾಡೋ ಸ್ಟೇಜ್‌ಗೆ ಬರ್ತಾನೆ ಕಣಯ್ಯ ಎಂದಿದ್ದರು. ಇದೀಗ ನಿಜವಾಗ್ತಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳಲಾಗುತ್ತಿದೆ.

ಜಗ್ಗೇಶ್‌ ಅವರು ರಾಯರ ಭಕ್ತರು. ಅವರು ಮನಸಾರೆ ಹಾರೈಸಿದರೆ ಖಂಡಿತ ನಿಜ ಆಗುತ್ತೆ. ಈ ಬಾರಿ ಬಿಗ್‌ ಬಾಸ್ ಗೆಲುವು ಖಂಡಿತವಾಗಿಯೂ ಗಿಲ್ಲಿ ಅವರಿಗೇನೇ ಎಂದು ಹಲವರು ಈ ವಿಡಿಯೋಗೆ ಕಮೆಂಟ್​ ಹಾಕುತ್ತಿದ್ದಾರೆ.

Source link

Leave a Reply

Your email address will not be published. Required fields are marked *