ಆ ರೀತಿ ಮಾತಾಡೋದು ತಪ್ಪು; ಇದರ ಪರಿಣಾಮ ಕರ್ಣ ಸೀರಿಯಲ್‌ ಮೇಲೂ ಆಗುತ್ತೆ: Kiran Raj Interview

ಆ ರೀತಿ ಮಾತಾಡೋದು ತಪ್ಪು; ಇದರ ಪರಿಣಾಮ ಕರ್ಣ ಸೀರಿಯಲ್‌ ಮೇಲೂ ಆಗುತ್ತೆ: Kiran Raj Interview

ಆ ರೀತಿ ಮಾತಾಡೋದು ತಪ್ಪು; ಇದರ ಪರಿಣಾಮ ಕರ್ಣ ಸೀರಿಯಲ್‌ ಮೇಲೂ ಆಗುತ್ತೆ: Kiran Raj Interview

ಧಾರಾವಾಹಿಗಳನ್ನು ವೀಕ್ಷಕರು ವೈಯಕ್ತಿಕವಾಗಿ ತಗೊಳ್ಳುವುದು ಈಗಲೂ ಇದೆ. ಸೀರಿಯಲ್‌ನಲ್ಲಿ ನಡೆಯುವುದೆಲ್ಲ ಸತ್ಯ ಎಂದು ನಂಬಿ, ಹಿಡಿಶಾಪ ಹಾಕುವವರೂ ಇದ್ದಾರೆ. ಈಗ ಕರ್ಣ ಧಾರಾವಾಹಿಯ ಪಾತ್ರಧಾರಿಗಳ ಬಗ್ಗೆ ನೆಗೆಟಿವ್‌ ಕಾಮೆಂಟ್‌ ಮಾಡಲಾಗ್ತಿದೆಯಂತೆ. ನಟ ಕಿರಣ್‌ ರಾಜ್‌ ಈ ಬಗ್ಗೆ ದನಿ ಎತ್ತಿದ್ದಾರೆ.

ಕರ್ಣ ಧಾರಾವಾಹಿಯಲ್ಲಿ ಓರ್ವ ಹೀರೋ, ಇಬ್ಬರು ನಾಯಕಿಯರು.‌ ಕಿರಣ್‌ ರಾಜ್‌ ಫ್ಯಾನ್ಸ್‌ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆಯಿಲ್ಲ. ಹಾಗೆಯೇ ಈ ಧಾರಾವಾಹಿಯ ಇಬ್ಬರು ನಟಿಯರು ಈ ಹಿಂದೆ ಹಿಟ್‌ ಧಾರಾವಾಹಿಗಳಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದರು. ಹೀಗಾಗಿ ಇವರಿಬ್ಬರಿಗೂ ಅಭಿಮಾನಿ ಬಳಗ ಇದೆ, ಅಷ್ಟೇ ಅಲ್ಲದೆ ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿದ್ದಕ್ಕೆ ಫ್ಯಾನ್ಸ್‌ ಸಂಖ್ಯೆ ಜಾಸ್ತಿ ಆಗಿದೆ.

ಈಗ ಈ ಸೀರಿಯಲ್‌ನಲ್ಲಿ ಕರ್ಣನ ತಂದೆ ರಮೇಶ್‌ ಪಾತ್ರದಲ್ಲಿ ಟಿ ಎಸ್‌ ನಾಗಾಭರಣ ಅವರು ನಟಿಸುತ್ತಿದ್ದರು. ಈಗ ಇವರ ಬದಲು ನಟ ಅಭಿಜಿತ್‌ ನಟಿಸುತ್ತಿದ್ದಾರೆ. ನಾಗಾಭರಣ ಅವರು ವೈಯಕ್ತಿಕ ಕಾರಣಕ್ಕೆ ಸೀರಿಯಲ್‌ನಿಂದ ಹೊರಬಂದಿದ್ದು, ಇವರ ಜಾಗಕ್ಕೆ ಹೊಸ ನಟನ ಆಗಮನ ಆಗಿದೆ.

ಅಂದಹಾಗೆ ಅವರ ಪಾತ್ರಕ್ಕೆ ಒತ್ತು ಕೊಡ್ತಿಲ್ಲ, ಇವರ ಪಾತ್ರಕ್ಕೆ ಒತ್ತು ಕೊಡ್ತಿಲ್ಲ ಎಂಬ ಮಾತು ಕೇಳಿ ಬರುತ್ತಲೇ ಇರುವುದು. ಆ ಮಧ್ಯೆ ಅವರು ಜೋಡಿಯಾಗಿರಲಿ, ಇವರು ಜೋಡಿಯಾಗಿರಲಿ ಎನ್ನುತ್ತಾರೆ. ಕೆಲವೊಮ್ಮೆ ಕಥೆಯನ್ನು, ಕಥೆಯ ಟ್ವಿಸ್ಟ್‌ನ್ನೋ ಇಷ್ಟಪಡದೆ, ಬಾಯಿಗೆ ಬಂದಹಾಗೆ ಕಾಮೆಂಟ್‌ ಮಾಡುತ್ತಿರುತ್ತಾರೆ. ಇನ್ನೂ ಕೆಲವೊಮ್ಮೆ ಪಾತ್ರಧಾರಿಗಳ ನಟನೆ ಬಗ್ಗೆ ಮಾತನಾಡದೆ, ಅವರ ಕ್ಯಾರೆಕ್ಟರ್‌ ಬಗ್ಗೆ ಕೆಟ್ಟದಾಗಿ ಮಾತನಾಡೋದಿದೆ. ಆಗ ಇಡೀ ಧಾರಾವಾಹಿ ಸೆಟ್‌ನ ವಾತಾವರಣ ಕೂಡ ಹಾಳಾಗೋದಿದೆ.

ನಟ ಕಿರಣ್‌ ರಾಜ್‌ ಈ ಬಗ್ಗೆ ಮಾತನಾಡಿದ್ದು, “ಎಲ್ಲ ಕಲಾವಿದರು ಅವರಿಗೆ ಕೊಟ್ಟ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ, ಕೆಲವೊಮ್ಮೆ ಪಾತ್ರ ಬದಲಾವಣೆ ಆಗುವುದು, ಹಾಗೆಂದ ಮಾತ್ರಕ್ಕೆ ಬೇರೆ ಕಲಾವಿದರ ಮನಸ್ಸಿಗೆ ನೋವು ಆಗುವಂತೆ ಕಾಮೆಂಟ್‌ ಮಾಡೋದು ಸರಿ ಅಲ್ಲ. ಇದರಿಂದ ಎಲ್ಲರಿಗೂ ಬೇಸರ ಆಗುವುದು, ಇದರ ಪರಿಣಾಮ ಧಾರಾವಾಹಿ ಮೇಲೆ ಆಗುವುದು, ಸೀರಿಯಲ್‌ನ್ನು ಸೀರಿಯಲ್‌ ಥರ ತಗೊಳ್ಳಿ” ಎಂದು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *