
ಕನ್ನಡ, ತಮಿಳು ತೆಲುಗು, ಮಲಯಾಳ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಕಿಶೋರ್, ಸದಾ ಸುದ್ದಿಯಲ್ಲಿ ಇರುವ ನಟ. ಸೋಷಿಯಲ್ ಮೀಡಿಯಾದಿಂದ ಹಿಡಿದು ಭಾಷಣಗಳಲ್ಲಿ ಅವರು ಆಡುವ ಮಾತುಗಳು ಕಾಂಟ್ರವರ್ಸಿಯಾಗುವುದೇ ಹೆಚ್ಚು. ರಾಜಕೀಯದಿಂದ ಹಿಡಿದು ಸಿನಿಮಾ ರಂಗದವರೆಗೂ ಅವರು, ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡು ಪ್ರಚಾರದಲ್ಲಿ ಇರುವುದನ್ನೇ ಬಯಸುವವರು. ಅದರಲ್ಲಿಯೂ ಬಿಜೆಪಿ, ಆರ್ಎಸ್ಎಸ್, ಪ್ರಧಾನಿ ಮೋದಿ ಅವರ ಬಗ್ಗೆಯಂತೂ ನೆಗೆಟಿವ್ ಮಾತನಾಡಿರುವ ಮೂಲಕ ಚಾಲ್ತಿಯಲ್ಲಿ ಇರುವ ನಟ ಕಿಶೋರ್.