45 Movie Release Date: ನಟ ಡಾ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ ನಟನೆಯ ‘45 ‘ ಚಿತ್ರವು ಟಿವಿಯಲ್ಲಿ ಪ್ರಸಾರ ಆಗಲಿದೆ. 45 ಸಿನಿಮಾವು ಫ್ಯಾಂಟಸಿ ಆಕ್ಷನ್ ಡ್ರಾಮಾ ಆಗಿದ್ದು, ಇಲ್ಲಿ ಫಿಲಾಸಫಿ ಜೊತೆಗೆ ಆಕ್ಷನ್, ಭಾವನಾತ್ಮಕ ಅಂಶಗಳು ಕೂಡ ಇದ್ದು, ಮನಮುಟ್ಟುವಂತಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ನಿರ್ದೇಶನದ ಮೊದಲ ಸಿನಿಮಾವಿದು. ಈ ಸಿನಿಮಾವನ್ನು ಎಂ ರಮೇಶ್ ರೆಡ್ಡಿ ಅವರು ಸುರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಉತ್ತಮ ತಾರಾಬಳಗ, ವಿಭಿನ್ನವಾದ ಕಥೆ ಇಲ್ಲಿದೆ. ಈ ಸಿನಿಮಾದಲ್ಲಿ ಅತೀಂದ್ರೀಯ ಅಂಶಗಳು, ಜೀವನದ ಮೌಲ್ಯಗಳನ್ನು ಅದ್ಭುತವಾಗಿ ತೋರಿಸಿದ್ದಾರೆ. ಮೂವರು ದಿಗ್ಗಜರು ಜೊತೆಯಾಗಿ ನಟಿಸಿರುವ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುತ್ತದೆ.

ವಿನಯ್ (ರಾಜ್ ಬಿ. ಶೆಟ್ಟಿ) ಎಂಬ ಸಾಧುಸ್ವಭಾವದ ಸಾಫ್ಟ್‌ವೇರ್ ಇಂಜಿನಿಯರ್ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ತಾಯಿಯೊಂದಿಗೆ, ತನ್ನ ಗೆಳತಿ ಮೇಘನಾಳ ಜೊತೆ ಸರಳ, ಸಂತೋಷಕರ ಜೀವನ ನಡೆಸುತ್ತಿದ್ದ ಅವನ ಬದುಕು, ಒಂದು ಅನಿರೀಕ್ಷಿತ ಘಟನೆಯಿಂದ ಸಂಪೂರ್ಣವಾಗಿ ಬದಲಾಗುತ್ತದೆ. ಲೋಕಲ್ ಡಾನ್ ರಾಯಪ್ಪ (ಉಪೇಂದ್ರ) ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದ ‘ರೋಸಿ’ ಎಂಬ ಕಪ್ಪು ನಾಯಿಯನ್ನು ವಿನಯ್ ಅರಿಯದೆ ಗುದ್ದುತ್ತಾನೆ, ಆ ನಾಯಿ ಸಾಯುವುದು. ಆ ಬಳಿಕ ಏನಾಗುವುದು ಎನ್ನುವುದು ಈ ಸಿನಿಮಾದಲ್ಲಿದೆ.

ಚೀಫ್ ಚಾನೆಲ್ ಆಫೀಸರ್, ಜೀ ಕನ್ನಡ, ಬಿಸಿನೆಸ್ ಹೆಡ್ ಕನ್ನಡ ಜೀ5, ದೀಪಕ್ ಶ್ರೀರಾಮುಲು ಅವರು "ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರು ಜೊತೆಯಾಗಿ ಕಾಣಿಸಿಕೊಂಡಿರುವುದು ಈ ಸಿನಿಮಾದ ತೂಕವನ್ನು ದುಪ್ಪಟ್ಟು ಮಾಡಿದೆ. ಈ ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುವುದನ್ನು ನೋಡುವುದೇ ಒಂದು ಚಂದದ ಅನುಭವಎಂದರು.

ವಿನಯ್ ಬಂದಿರುವ ಕಷ್ಟದಿಂದ ಪಾರಾಗ್ತಾನಾ? ಅಥವಾ ವಿಧಿಬರಹಕ್ಕೆ ಗುರಿಯಾಗ್ತಾನಾ? ಇವಕ್ಕೆಲ್ಲಾ ಉತ್ತರ ತಿಳ್ಕೊಳೋಕೆ ಜೀ ಕನ್ನಡ ವಾಹಿನಿಯಲ್ಲಿ ಫೆಬ್ರವರಿ 22 ರಂದು ಸಂಜೆ 4:30 ಕ್ಕೆ 45 ಸಿನಿಮಾ ನೋಡಿ.

Source link
ಟಿವಿಗೆ ಬಂತು ಶಿವರಾಜ್‌ಕುಮಾರ್, ಉಪೇಂದ್ರ ನಟನೆಯ 45 ಸಿನಿಮಾ; ಗರುಡ ಪುರಾಣದ ಟಚ್ ಕೊಟ್ಟ ಅರ್ಜುನ್ ಜನ್ಯ