Headlines

ಡಿವೋರ್ಸ್‌ ಕೇಳಿರೋ ದಳಪತಿ ವಿಜಯ್‌ ಹೆಂಡ್ತಿ ಸಂಗೀತಾ ಸಾಮಾನ್ಯದವರಲ್ಲ! ಕೂತು ತಿನ್ನುವಷ್ಟಿದೆ ಅಪ್ಪನ ಆಸ್ತಿ!

ಡಿವೋರ್ಸ್‌ ಕೇಳಿರೋ ದಳಪತಿ ವಿಜಯ್‌ ಹೆಂಡ್ತಿ ಸಂಗೀತಾ ಸಾಮಾನ್ಯದವರಲ್ಲ! ಕೂತು ತಿನ್ನುವಷ್ಟಿದೆ ಅಪ್ಪನ ಆಸ್ತಿ!

ಡಿವೋರ್ಸ್‌ ಕೇಳಿರೋ ದಳಪತಿ ವಿಜಯ್‌ ಹೆಂಡ್ತಿ ಸಂಗೀತಾ ಸಾಮಾನ್ಯದವರಲ್ಲ! ಕೂತು ತಿನ್ನುವಷ್ಟಿದೆ ಅಪ್ಪನ ಆಸ್ತಿ!

ನಟ ದಳಪತಿ ವಿಜಯ್‌ ಪತ್ನಿ ಸಂಗೀತಾ ಅವರು ಡಿವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಂದಹಾಗೆ ಸಂಗೀತಾ ಅವರು ಮೊದಲು ವಿಜಯ್‌ ಅಭಿಮಾನಿಯಾಗಿ, ಪ್ರೀತಿಸಿ ಮದುವೆಯಾಗಿದ್ದರು. ವಿಜಯ್‌ ಅವರಿಗೆ ಬೇರೆ ನಟಿಯ ಜೊತೆ ಅನೈತಿಕ ಸಂಬಂಧವಿದೆ ಎಂದು ಸಂಗೀತಾ ಹೇಳಿದ್ದರು.

80ರ ದಶಕದಿಂದ ವಿಜಯ್‌ ದಳಪತಿ ಅವರು ನಟನೆ ಆರಂಭಿಸಿ, ಹೀರೋ ಆಗಿದ್ದರು. ಅದಕ್ಕಿಂತ ಮುಂಚೆಯೇ ಲಂಡನ್‌ನ ಯಶಸ್ವಿ ಉದ್ಯಮಿ ಶ್ರೀಲಂಕಾ ಮೂಲದ ಅವರ ಸ್ವರ್ಣಲಿಂಗಂ ಮಗಳು ಸಂಗೀತಾ ಲಂಡನ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗಲೇ ವಿಜಯ್ ದೊಡ್ಡ ಅಭಿಮಾನಿಯಾಗಿದ್ದರು. ಅಲ್ಲಿಂದಲೇ ದಳಪತಿಗೆ ಸತತವಾಗಿ ಪತ್ರಗಳನ್ನು ಬರೆಯುತ್ತಾ, ಅವರ ಸಿನಿಮಾ ಜರ್ನಿಯಲ್ಲಿ ಭಾಗಿ ಆಗಿದ್ದರು.

1996ರಲ್ಲಿ ತೆರೆಕಂಡ ವಿಜಯ್‌ ಹಾಗೂ ಸಂಗೀತಾ ಮಾಧವನ್ ಅಭಿನಯದ ‘ಪೂವೆ ಉನ್ನಕ್ಕಾಗ’ ಸಿನಿಮಾ ಯಶಸ್ಸಿಗೆ ಶುಭಾಶಯ ತಿಳಿಸಲು ಭಾರತಕ್ಕೆ ಬಂದಿದ್ದರು. ಆಗ ಇವರಿಬ್ಬರ ಪರಿಚಯ ಆಗಿ, ಸ್ನೇಹ, ಪ್ರೀತಿ ಉಂಟಾಗಿತ್ತು. ವಿಜಯ್‌ ಕೂಡ ಮನೆಯವರಿಗೆ ಸಂಗೀತಾ ಪರಿಚಯ ಮಾಡಿಸಿದ್ದರು. ಸಂಗೀತಾ ಹಿಂದು ಧರ್ಮಕ್ಕೆ ಸೇರಿದವರಾದ್ದರಿಂದ 1999ರಲ್ಲಿ ಹಿಂದು ಧರ್ಮದಂತೆ ಈ ಜೋಡಿ ಮದುವೆ ಆಯ್ತು.

ಮಾಧ್ಯಮದ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದ ಪತ್ನಿ ಸಂಗೀತಾ ಬಗ್ಗೆ 2004ರ ಕಾರ್ಯಕ್ರಮ ಒಂದರಲ್ಲಿ ನಟ ವಿಜಯ್ ಅವರೇ, `ನಾನೆಷ್ಟು ಚೆನ್ನಾಗಿದ್ದೀನಿ ಅಂತ ಗೊತ್ತಿಲ್ಲ. ಆದರೆ ನನಗಿಷ್ಟು ಚಾರ್ಮ್ ಬರಲು, ನಟಿಸಲು ನನ್ನಮ್ಮ ಹಾಗೂ ನನ್ನ ಪತ್ನಿ ಸಂಗೀತಾ ಕಾರಣ’ ಎಂದು ಹೇಳಿದ್ದರು. 2021ರಿಂದ ವಿಜಯ್ ಹಾಗೂ ನಟಿಯೊಬ್ಬರ ಜತೆಗೆ ಅನೈತಿಕ ಸಂಬಂಧ ಇದೆ ಎನ್ನಲಾಗಿದೆ.‌ ಸಂಗೀತಾ ಮತ್ತು ವಿಜಯ್‌ ದಂಪತಿಗೆ ದೇಸನ್ ಸ೦ಜಯ್‌ ಹಾಗೂ ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

ತಂದೆ ಸ್ವರ್ಣಲಿಂಗಂ ನಡೆಸುವ ಬಿಸ್ಸೆಸ್ ಹಾಗೂ ಸಂಗೀತಾ ಆಸ್ತಿ ಮೌಲ್ಯವೇ 400 ಕೋಟಿ ರೂಪಾಯಿಗೂ ಅಧಿಕವಿದೆ. ಈಗ ಸಂಗೀತಾ ಅವರು ತವರು ಮನೆ ಸೇರಿಕೊಂಡು, ತಂದೆ ಬ್ಯುಸಿನೆಸ್‌ ನೋಡಿಕೊಳ್ತಿದ್ದಾರಂತೆ.

Source link

Leave a Reply

Your email address will not be published. Required fields are marked *