ಅಂದು ಹೇಳಿದಂತೆ ನಡೆದುಕೊಂಡ ನಟ ಉಪೇಂದ್ರ ಮಗ ಆಯುಷ್;‌ ಇದಪ್ಪಾ ಮಾತು ಅಂದ್ರೆ!

ಅಂದು ಹೇಳಿದಂತೆ ನಡೆದುಕೊಂಡ ನಟ ಉಪೇಂದ್ರ ಮಗ ಆಯುಷ್;‌ ಇದಪ್ಪಾ ಮಾತು ಅಂದ್ರೆ!

ಅಂದು ಹೇಳಿದಂತೆ ನಡೆದುಕೊಂಡ ನಟ ಉಪೇಂದ್ರ ಮಗ ಆಯುಷ್;‌ ಇದಪ್ಪಾ ಮಾತು ಅಂದ್ರೆ!

Ayush Upendra Movie: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಚಿತ್ರ ಸದ್ದಿಲ್ಲದೆ ಪ್ರಾರಂಭವಾಗಿದೆ. ಈ ಮೂಲಕ ಆಯಷ್ ಉಪೇಂದ್ರ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಆಯುಷ್ ಹೀರೋ ಆಗಿ ನಟಿಸುತ್ತಿರುವ ಮೊದಲ‌ ಸಿನಿಮಾಕ್ಕೆ ಕಾಶ್ಮೀರದಲ್ಲೇ ಮುಹೂರ್ತ ನೆರವೇರಿದ್ದು, ಅಲ್ಲಿಯೇ 25 ದಿನಗಳ ಮೊದಲ ಹಂತದ ಶೂಟಿಂಗ್ ಕೂಡ ನಡೆದಿದೆ.

ಆಯುಷ್ ಅವರು ಹೀರೋ ಆಗಲು ಬೇಕಾಗಿರುವ ಪೂರ್ವ ತಯಾರಿಗಳನ್ನೆಲ್ಲ ಮಾಡಿಕೊಂಡಿದ್ದಾರೆ. ರಾಕಿಂಗ್‌ ಸ್ಟಾರ್ ಯಶ್ ಅಭಿನಯದ "ಮೊದಲಾಸಲ" ಸಿನಿಮಾವನ್ನು ನಿರ್ದೇಶಿಸಿದ್ದ ಪುರುಷೋತ್ತಮ ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಶ್ರೀಕಲ್ಪವೃಕ್ಷ ಮೂವೀ ಮೇಕರ್ಸ್ ಲಾಂಛನದಲ್ಲಿ ಅಭಿಷೇಕ್ ಎನ್ ಸಿರಿವಂತ್ ಸಿನಿಮಾ ನಿರ್ಮಾಣ ನಿರ್ಮಿಸುತ್ತಿದ್ದಾರೆ. ಇದು ಅಭಿಷೇಕ್ ಎನ್ ಸಿರಿವಂತ್ ಅವರ ಮೊದಲ ಸಿನಿಮಾ.

ಎಚ್ ಸಿ ವೇಣು ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಸಿನಿಮಾಕ್ಕಿದೆ.

ಸದ್ಯದಲ್ಲೇ ಚಿತ್ರದ ಟೈಟಲ್, ಉಳಿದ ತಾರಾಬಳಗ ಮತ್ತು ತಂತ್ರಜ್ಞರ ಕುರಿತು ಮಾಹಿತಿ ನೀಡಲಿದ್ದಾರಂತೆ.

ಕಾಶ್ಮೀರದಲ್ಲಿ ಮಗನ ಮೊದಲ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಇದ್ದರು. ಆಗ ಮಗ ಆಯುಷ್‌ಗೆ ಮಾರ್ಗದರ್ಶನ ನೀಡಿದ್ದಾರೆ.

ಅಂದು ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದಾಗ, ತಂದೆ ನಿರ್ದೇಶನದಲ್ಲಿ ನಾನು ನಟಿಸೋದಿಲ್ಲ, ನಾನು ಆಯುಷ್‌ ಆಗಿ ಬೆಳೆಯಬೇಕು, ಅಪ್ಪನ ಹೆಸರು ಇಟ್ಟುಕೊಂಡು ಬೆಳೆಯೋದಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಅದರಂತೆ ಆಯುಷ್‌ ಹೆಜ್ಜೆ ಇಟ್ಟಿದ್ದಾರೆ.

Source link

Leave a Reply

Your email address will not be published. Required fields are marked *