Bigg Bossನಲ್ಲಿ ಎಮೋಷನಲಿ ಬೆತ್ತಲಾಗೋದು ಇಷ್ಟವಿಲ್ಲ, ಸ್ಟಾರ್ಸ್​ಗೆ ದೂರದಿಂದ್ಲೇ ನಮಸ್ಕಾರ ಎಂದ Vijay Suriya

Bigg Bossನಲ್ಲಿ ಎಮೋಷನಲಿ ಬೆತ್ತಲಾಗೋದು ಇಷ್ಟವಿಲ್ಲ, ಸ್ಟಾರ್ಸ್​ಗೆ ದೂರದಿಂದ್ಲೇ ನಮಸ್ಕಾರ ಎಂದ Vijay Suriya

Bigg Bossನಲ್ಲಿ ಎಮೋಷನಲಿ ಬೆತ್ತಲಾಗೋದು ಇಷ್ಟವಿಲ್ಲ, ಸ್ಟಾರ್ಸ್​ಗೆ ದೂರದಿಂದ್ಲೇ ನಮಸ್ಕಾರ ಎಂದ Vijay Suriya

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಪಟ್ಟಿಯಲ್ಲಿ ನಟ ವಿಜಯ್ ಸೂರ್ಯ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ,  ಭಾವನಾತ್ಮಕವಾಗಿ ಬೆತ್ತಲಾಗಲು ಇಷ್ಟವಿಲ್ಲದಿರುವುದು ಮತ್ತು ಸುದೀಪ್ ಅವರ ಮೇಲಿನ ಗೌರವವೂ ತಮ್ಮ ನಿರ್ಧಾರಕ್ಕೆ ಕಾರಣ ಎಂದು ವಿಜಯ್ ಸೂರ್ಯ ವಿವರಿಸಿದ್ದಾರೆ.

Bigg Boss Season 12 ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭ ಆಗಲಿದೆ. ಇದರಲ್ಲಿ ಸ್ಪರ್ಧಿಗಳು ಯಾರ್ಯಾರು ಇರುತ್ತಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಅವರು ಇರುತ್ತಾರೆ, ಇವರು ಇರುತ್ತಾರೆ ಎಂದೆಲ್ಲಾ ಒಂದಷ್ಟು ಮಂದಿಯ ಹೆಸರು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದರೂ ನಿಜವಾಗಿಯೂ ಯಾರು ಇರುತ್ತಾರೆ ಎನ್ನುವುದು ಕೆಲವೇ ಗಂಟೆಗಳಲ್ಲಿ ರಿವೀಲ್​ ಆಗಲಿದೆ. ನಾಳೆ (ಸೆ.28) Bigg Boss Grand Opening ಆಗಲಿದೆ.

ಇದಾಗಲೇ ಹಲವಾರು ಸ್ಪರ್ಧಿಗಳ ಹೆಸರು ರಿವೀಲ್​ ಆಗಿದೆ. ತಮಗೆ ಇಷ್ಟ ಬಂದವರ ಹೆಸರುಗಳನ್ನು ಹೇಳುವ ದೊಡ್ಡ ವರ್ಗವೇ ಇದೆ. ಇದೇ ಫೈನಲ್​ ಪಟ್ಟಿ ಎಂದೂ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಆದರೆ ಎಲ್ಲವೂ ಗೊತ್ತಾಗುವುದು ಬಿಗ್​ಬಾಸ್​ ಶುರುವಾದ ಮೇಲಷ್ಟೇ.

ಹೀಗೆ ಹರಿದಾಡುತ್ತಿದ್ದ ಹೆಸರುಗಳಲ್ಲಿ ಒಂದು ನಟ ನಟ ವಿಜಯ್​ ಸೂರ್ಯ (Vijay Suriya) ಅವರದ್ದು. ವಿಜಯ್​ ಅವರು ಬಿಗ್​ಬಾಸ್​ ಸೀಸನ್​ 12ಕ್ಕೆ ಹೋಗುತ್ತಾರೆ ಎಂದು ಇಲ್ಲಿಯವರೆಗೂ ಅಂದುಕೊಳ್ಳಲಾಗಿತ್ತು. ದೃಷ್ಟಿಬೊಟ್ಟು ಸೀರಿಯಲ್​ನಲ್ಲಿ ಅವರು ಕೊನೆಯಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೂ ಬಿಗ್​ಬಾಸ್​ ಕಾರಣ ಎನ್ನಲಾಗಿತ್ತು.

ಆದರೆ, ಇದೀಗ ವಿಜಯ್​ ಅವರು ಬಾಸ್ ಟಿವಿಗೆ ನೀಡಿರುವ ಸಂದರ್ಶನದ ಪ್ರಕಾರ, ಅವರು ಈ ಬಾರಿಯ ಬಿಗ್​ಬಾಸ್​ಗೂ ಹೋಗುತ್ತಿಲ್ಲ! ಈ ಹಿಂದೆ 3-4 ಬಾರಿ ಅವರಿಗೆ ಆಫರ್​ ಬಂದಿತ್ತು. ಆದರೆ ಆಗಲೂ ಅವರು ಬಿಗ್​ಬಾಸ್​ಗೆ ಹೋಗಲು ಒಪ್ಪಿರಲಿಲ್ಲ. ಇದಕ್ಕೆ ತಾವು ಬೇರೆ ಸೀರಿಯಲ್​ಗಳಲ್ಲಿ ಬಿಜಿಯಾಗಿರುವುದಾಗಿ ತಿಳಿಸಿದ್ದರು. ಆದರೆ ಈ ಬಾರಿ ಹೋಗುವುದು ಕನ್​ಫರ್ಮ್​ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಈ ಸೀಸನ್​ನಲ್ಲಿ ನನಗೆ ಆಫರ್​ ಬಂದಿಲ್ಲ ಎಂದಿದ್ದಾರೆ.

ಆದರೆ, ಇದೀಗ ಅವರು ಬಿಗ್​ಬಾಸ್​ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ. ಬಿಗ್​ಬಾಸ್​ಗೆ ಹೋಗುವುದು ಎರಡು ಕಾರಣಕ್ಕೆ ಒಂದು ಫೇಮ್​ ಹಾಗೂ ಮತ್ತೊಂದು ಹಣಕ್ಕಾಗಿ ಎಂದಿರುವ ಅವರು, ಭಗವಂತ ಇವುಗಳನ್ನು ನನಗೆ ತಕ್ಕಮಟ್ಟಿಗೆ ಕೊಟ್ಟಿದ್ದಾನೆ, ಕಷ್ಟಪಟ್ಟು ನನ್ನ ಕರಿಯರ್​ ಅನ್ನು ಶೇಪ್​ಅಪ್​ ಮಾಡಿಕೊಂಡಿದ್ದೇನೆ. ಅಕಸ್ಮಾತ್​ ಒಳಗೆ ಹೋಗಿ ಸಣ್ಣ ಪುಟ್ಟ ಏನೋ ವಿಚಾರ ಆಯ್ತು ಎಂದರೆ ಆ ಮೈಂಡ್​ಸೆಟ್​ನಿಂದ ನನ್ನನ್ನು ನೋಡುತ್ತಾರೆ. ಅದು ನನಗೆ ಇಷ್ಟವಿಲ್ಲ ಎಂದು ವಿಜಯ್​ ಸೂರ್ಯ ಹೇಳಿದ್ದಾರೆ.

ನನ್ನ ಒಂದು ಪ್ರಿನ್ಸಿಪಲ್​ ಇದೆ. ಎಮೋಷನಲಿ ಬೆತ್ತಲು ಆಗಬೇಕಾಗುತ್ತದೆ. ಅಲ್ಲಿ ನಾನು ಪಾತ್ರ ಆಗಿರುವುದಿಲ್ಲ. ನಿಜವಾಗಿಯೂ ಇರುತ್ತೇನೆ. ಆದರೆ ಹೊರಗಡೆ ಪಾತ್ರವನ್ನು ಪ್ಲೇ ಮಾಡುವಾಗ ಆ ಪಾತ್ರದಲ್ಲಿ ಬೇರೆ ಬೇರೆ ರೋಲ್​ ಮಾಡುತ್ತೇನೆ. ಅದಕ್ಕೆ ಬಿಗ್​ಬಾಸ್​ ಒಳಗೆ- ಹೊರಗೆ ಎರಡೂ ಬೇರೆ ಬೇರೆಯಾದಾಗ ಅಭಿಮಾನಿಗಳನ್ನು ಅದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ ನಟ.

ಪಾತ್ರ ಕಾಪಾಡಲು ರಿಯಲ್​ ಎಮೋಷನ್​ ಉಳಿಸಿಕೊಳ್ಳಬೇಕಾಗುತ್ತದೆ. ಬಿಗ್​ಬಾಸ್​ ಎಕ್ಸ್​ಪೋಸ್​ ಮಾಡುವುದು ಕಷ್ಟ. ಆದ್ರೆ ಹೋಗ್ತೀನಿ, ನನ್ನ ಮೈಂಡ್​ನಲ್ಲಿ ಒಂದು ಅಮೌಂಟ್​ ಇದೆ. ಅಷ್ಟು ಕೊಟ್ಟರೆ ಹೋಗ್ತೇನೆ. ಆದರೆ ಅಷ್ಟನ್ನು ಕೊಡಲ್ಲ ಎನ್ನೋದು ಗೊತ್ತು. ಅಷ್ಟು ದೊಡ್ಡ ಅಮೌಂಟ್​ ಕೊಟ್ಟರೆ ಎಫ್​ಡಿ ಇಟ್ಟು ಆರಾಮಾಗಿ ಇರ್ತೇನೆ, ಆದರೆ ಅದನ್ನು ಅವರಿಂದ ಕೊಡಲು ಆಗುವುದಿಲ್ಲ ಎಂದಿದ್ದಾರೆ.

ಸುದೀಪ್​ ಅವರ ದೊಡ್ಡ ಅಭಿಮಾನಿ ನಾನು. ಬಿಗ್​ಬಾಸ್​​ನಲ್ಲಿ ನಮ್ಮನ್ನು ನಾವು ಪ್ರೂವ್​ಮಾಡಿಕೊಳ್ಳಲು ಮಾತನಾಡಬೇಕಾಗುತ್ತದೆ. ವಾಯ್ಸ್​ ರೇಸ್​ ಮಾಡಬೇಕಾಗುತ್ತದೆ. ಅದು ಆಗುತ್ತದೆ. ಸುದೀಪ್​ ಸರ್​ ಮುಂದೆ ಆ ರೀತಿ ಮಾತನಾಡಲು ಆಗುವುದಿಲ್ಲ. ಸ್ಟಾರ್​ಗಳನ್ನು ದೂರದಿಂದ ನೋಡಿ ಖುಷಿಪಡೋದೇ ಒಳ್ಳೆಯದು ಎಂದಿದ್ದಾರೆ.

ಸುದೀಪ್​ ಸರ್​ ಮುಂದೆ ಆ ರೀತಿ ಮಾತನಾಡಲು ಆಗುವುದಿಲ್ಲ. ಸ್ಟಾರ್​ಗಳನ್ನು ದೂರದಿಂದ ನೋಡಿ ಖುಷಿಪಡೋದೇ ಒಳ್ಳೆಯದು ಎಂದಿದ್ದಾರೆ.

ಸ್ಪರ್ಧಿಗಳಿಗೆ ಅಲ್ಲಿ ಫ್ರೀಡಮ್​ ಇರುತ್ತೆ. ತುಂಬಾ ಮಂದಿ ಅಡ್ವಾಂಟೇಜ್​ ತಗೊಂಡಿದ್ದಾರೆ. ಅದು ನನಗೆ ಇಷ್ಟವಾಗುವುದಿಲ್ಲ. ಆದರೆ ಅಲ್ಲಿ ಕೆಲವೊಮ್ಮೆ ಎಲ್ಲವೂ ಹೇಳಬೇಕಾಗುತ್ತದೆ. ಅದನ್ನೆಲ್ಲಾ ಮಾಡಲು ನನಗೆ ಆಗುವುದಿಲ್ಲ. ಅದಕ್ಕಾಗಿಯೇ ಹೋಗಲು ಇಷ್ಟವಿಲ್ಲ ಎಂದಿದ್ದಾರೆ ನಟ.

Source link

Leave a Reply

Your email address will not be published. Required fields are marked *