ಕನ್ನಡದ ‘ಭದ್ರ’, ‘ಬಾಡಿಗಾರ್ಡ್’ ಹಾಗೂ ಹಿಂದಿಯ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಡೈಸಿ ಶಾ (ಡೈಸಿ ಶಾ) ಅವರು ಈಗ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕನ್ನಡದೇ ತಮಿಳು, ಮರಾಠಿ, ಮಲಯಾಳಂ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ‘ಜೈ ಹೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಡೈಸಿ ಶಾ ಅವರು, ದಕ್ಷಿಣ ಭಾರತದ ನಿರ್ಮಾಪಕರಿಂದ (ದಕ್ಷಿಣ ಚಲನಚಿತ್ರ ನಿರ್ಮಾಪಕ) ತಮಗೆ ಎದುರಾದ ಅತ್ಯಂತ ಮುಜುಗರದ ಮತ್ತು ಕಹಿ ಘಟನೆ ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಆಡಿಷನ್ ವೇಳೆ ದಕ್ಷಿಣ ಭಾರತದ ಸಿನಿಮಾ ನಿರ್ಮಾಪಕರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಡೈಸಿ ಶಾ ಅವರು ಬಹಿರಂಗಪಡಿಸಿದ್ದಾರೆ. ‘ಫ್ರೀ ಪ್ರೆಸ್ ಜರ್ನಲ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡೈಸಿ ಶಾ ಅವರು ತಮ್ಮ ಕಹಿ ಅನುಭವವನ್ನು ತೆರೆದಿಟ್ಟಿದ್ದಾರೆ. ಆದರೆ, ಈ ಘಟನೆಗೆ ಕಾರಣವಾದ ದಕ್ಷಿಣದ ನಿರ್ಮಾಪಕ ಯಾರು ಎಂಬ ಹೆಸರನ್ನು ಮಾತ್ರ ಡೈಸಿ ಶಾ ತೋರಿಸಿಲ್ಲ.
‘ದಕ್ಷಿಣದ ಚಿತ್ರ ನಿರ್ಮಾಪಕ ಕಾಸ್ಟಿಂಗ್‌ಗಾಗಿ ಮುಂಬೈಗೆ ಬಂದಿದ್ದರು. ಸುಮಾರು 6-7 ಹುಡುಗಿಯರು ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಅವರ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಭೇಟಿ ಮಾಡಿ. ನಾನು ಅವರನ್ನು ಭೇಟಿಯಾದಾಗ ಅವರು ನನ್ನನ್ನು ಕೆಟ್ಟದಾಗಿ ಸ್ಪರ್ಶಿಸಿದರು ಮತ್ತು ನನ್ನ ಕೈ ಹಿಡಿದುಕೊಂಡರು. ಅವರ ವರ್ತನೆ ನನಗೆ ಅಸಮಾಧಾನ ತರಿಸಿತು’ ಎಂದು ಡೈಸಿ ಶಾ ಹೇಳಿದ್ದಾರೆ.
‘ಯಾರಾದರೂ ನನ್ನನ್ನು ಮುಟ್ಟಿದರೆ ನನಗೆ ಇಷ್ಟವಾಗುವುದಿಲ್ಲ. ಆ ಕಾರಣಕ್ಕಾಗಿಯೇ ನಾನು ಔಷಧಿಯನ್ನು ಕೂಡ ಮಾಡಿಕೊಳ್ಳುವುದಿಲ್ಲ. ಒಬ್ಬ ಮಹಿಳೆ ಮುಟ್ಟುವುದೇ ನನಗೆ ಇಷ್ಟವಿಲ್ಲದಿರುವಾಗ, ಒಬ್ಬ ಪುರುಷ ಅಸಭ್ಯವಾಗಿ ವರ್ತಿಸುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಆ ಘಟನೆಯಿಂದ ನನಗೆ ತುಂಬಾ ಬೇಸರವಾಯಿತು. ನಾನು ನಿಮ್ಮನ್ನು ನಂತರ ಸಂಪರ್ಕಿಸುತ್ತೇನೆ ಅಂತ ಅವರಿಗೆ ಹೇಳಿ ಅಲ್ಲಿಂದ ಹೊರಬಂದೆ. ಆದರೆ ಆಮೇಲೆ ಯಾರನ್ನೂ ಭೇಟಿಯಾಗಲಿಲ್ಲ’ ಎಂದು ಕಹಿ ಘಟನೆಯನ್ನು ಡೈಸಿ ಶಾ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ನಾನು ಬಿಗ್ ಬಾಸ್‌ಗೆ ಬರಲ್ಲ’; ವದಂತಿಗೆ ಸ್ಪಷ್ಟನೆ ನೀಡಿದ ‘ಭದ್ರ’ ಸಿನಿಮಾ ನಟಿ
ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಬಳಿ ಸಹಾಯಕಿಯಾಗಿ ವೃತ್ತಿಜೀವನ ಆರಂಭಿಸಿದ ಡೈಸಿ, ನಂತರ ಹಲವು ಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದರು. ಅವರು ನಾಯಕಿಯಾಗಿ ಮೊದಲು ಗುರುತಿಸಿಕೊಂಡಿದ್ದೇ ಕನ್ನಡದಲ್ಲಿ. ಪ್ರಜ್ವಲ್ ದೇವರಾಜ್ ಅಭಿನಯದ ‘ಭದ್ರ’ ಮತ್ತು ಜಗ್ಗೇಶ್ ಅಭಿನಯದ ‘ಬಾಡಿಗಾರ್ಡ್’ ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ಸಲ್ಮಾನ್ ಖಾನ್ ಅಭಿನಯದ ‘ಜೈ ಹೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ನಂತರ ‘ಹೇಟ್ ಸ್ಟೋರಿ 3’ ಚಿತ್ರದಲ್ಲೂ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.