75ನೇ ವಸಂತಕ್ಕೆ ಕಾಲಿಟ್ಟ ನಟಿ ಗಿರಿಜಾ ಲೋಕೇಶ್, ಮನೆಯಲ್ಲಿ ಪೂಜೆ ಸಂಭ್ರಮ

75ನೇ ವಸಂತಕ್ಕೆ ಕಾಲಿಟ್ಟ ನಟಿ ಗಿರಿಜಾ ಲೋಕೇಶ್, ಮನೆಯಲ್ಲಿ ಪೂಜೆ ಸಂಭ್ರಮ

75ನೇ ವಸಂತಕ್ಕೆ ಕಾಲಿಟ್ಟ ನಟಿ ಗಿರಿಜಾ ಲೋಕೇಶ್, ಮನೆಯಲ್ಲಿ ಪೂಜೆ ಸಂಭ್ರಮ

Girija Lokesh Birthday: ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಜನವರಿ 10ರಂದು 75ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ವಿಶೇಷ ಪೂಜೆ ನಡೆಸಲಾಗಿದೆ. ಸರಳ ಸಮಾರಂಭದಲ್ಲಿ ಸಿನಿಮಾ ಗಣ್ಯರು ಸೇರಿ, ಹಲವು ಬಂಧು ಮಿತ್ರರು ಆಗಮಿಸಿದ್ದರು.

ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಇತ್ತೀಚೆಗೆ ಅಂದರೆ ಜನವರಿ 10ರಂದು 75ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಯ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.

ಅಮ್ಮನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ಸೃಜನ್ ಲೋಕೇಶ್ ಮನೆಯಲ್ಲಿ ವಿಶೇಷ ಪೂಜೆಯನ್ನು ಇಟ್ಟುಕೊಂಡಿದ್ದರು, ಜೊತೆಗೆ ಸರಳ ಸಮಾರಂಭವನ್ನು ಸಹ ನಡೆಸಿದ್ದರು. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಆಗಮಿಸಿ ಶುಭಕೋರಿದ್ದರು.

ಗಿರಿಜಾ ಲೋಕೇಶ್ ಹುಟ್ಟುಹಬ್ಬಕ್ಕೆ ಹಿರಿಯ ನಟಿ ಜಯಮಾಲ ಸೇರಿ, ಹಿರಿತೆರೆ ಹಾಗೂ ಕಿರುತೆರೆಯ ಹಲವು ಕಲಾವಿದರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಇದೊಂದು ಸರಳ ಸಮಾರಂಭವಾಗಿದ್ದು, ನಟ ಸೃಜನ್ ಫೋಟೊ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಗಿರಿಜಾ ಲೋಕೇಶ್ ಅವರು ಕಳೆದ 50 ವರ್ಷಗಳಿಂದ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1973ರಲ್ಲಿ ನಟನೆಗೆ ಎಂಟ್ರಿ ಕೊಟ್ಟ ಗಿರಿಜಾ ಮತ್ತೆ ತಿರುಗಿ ನೋಡಿಯೇ ಇಲ್ಲ. ಸಿನಿಮಾ, ಸೀರಿಯಲ್, ನಾಟಕಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ.

ಬಾಲ್ಯದಲ್ಲಿಯೇ ನೃತ್ಯವನ್ನು ಅಭ್ಯಸಿಸಿರುವ ಗಿರಿಜಾ ಲೋಕೇಶ್ ಅವರು, ತಂದೆಗೆ ಬ್ಯುಸಿನೆಸ್ ನಲ್ಲಿ ಲಾಸ್ ಆದ ಬಳಿಕ 8ನೇ ತರಗತಿಯಲ್ಲಿ ಇರುವಾಗಲೇ ಇವರು ನೃತ್ಯ ಹೇಳಿಕೊಡಲು ಆರಂಭಿಸಿದರು. ಬಳಿಕ ನಾಟಕಗಳಲ್ಲೂ ಸಹ ಗುರುತಿಸಿಕೊಂಡರು.

ಸಿನಿಮಾಗೆ ಬರುವುದಕ್ಕೂ ಮುನ್ನವೇ ಗಿರಿಜಾ ಲೋಕೇಶ್ ಶಿಶುವಿಹಾ, ರಂಗಸಂಪದ ಮತ್ತು ನಟರಂಗದಲ್ಲಿ ಸುಮಾರು ನೂರನ್ನು ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ ಕನ್ನಡ ಮಾತ್ರವಲ್ಲದೇ, ಉರ್ದು, ತೆಲುಗು, ತಮಿಳು ಮತ್ತು ಮಲಯಾಲಂ ನಾಟಕಗಳಲ್ಲೂ ಅಭಿನಯಿಸಿದ್ದಾರೆ.

ಗಿರಿಜಾ ಲೋಕೇಶ್ ಅಬಚೂರಿನ ಪೋಸ್ಟ್ ಆಫೀಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ 1973ರಲ್ಲಿ ಎಂಟ್ರಿ ಕೊಟ್ಟರು. ಈ ಚಿತ್ರಕ್ಕೆ 21ನೇ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿದೆ. ಬಳಿಕ ಕಾಕನ ಕೋಟೆ, ಹಳ್ಳಿ ಮೇಷ್ಟ್ರು, ಭೂತಯ್ಯನ ಮಗ ಅಯ್ಯು ಸಿನಿಮಾಗಳಲ್ಲಿ ಹಾಗೂ ಹಲವಾರು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಜೊತೆಯಾಗಿ ನಾಟಕ ಮಾಡುತ್ತಿದ್ದ ಗಿರಿಜಾ ಮತ್ತು ಲೋಕೇಶ್ ಅವರು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ರವಿಚಂದ್ರನ್ ತಂದೆ ವೀರಸ್ವಾಮಿ ಬಳಿ 3ಸಾವಿರ ಸಾಲ ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದರು.

Source link

Leave a Reply

Your email address will not be published. Required fields are marked *