Headlines

ಭೀಕರ ಕಾರು ಅಪಘಾತದಲ್ಲಿ 30 ವರ್ಷದ ನಟಿ ಸಾವು: ಸಿಸಿಟಿವಿಯಲ್ಲಿ ಸೆರೆಯಾಯ್ತು ನಡುಕ ಹುಟ್ಟಿಸುವ ದೃಶ್ಯ!

ಭೀಕರ ಕಾರು ಅಪಘಾತದಲ್ಲಿ 30 ವರ್ಷದ ನಟಿ ಸಾವು: ಸಿಸಿಟಿವಿಯಲ್ಲಿ ಸೆರೆಯಾಯ್ತು ನಡುಕ ಹುಟ್ಟಿಸುವ ದೃಶ್ಯ!

ಭೀಕರ ಕಾರು ಅಪಘಾತದಲ್ಲಿ 30 ವರ್ಷದ ನಟಿ ಸಾವು: ಸಿಸಿಟಿವಿಯಲ್ಲಿ ಸೆರೆಯಾಯ್ತು ನಡುಕ ಹುಟ್ಟಿಸುವ ದೃಶ್ಯ!

ಖ್ಯಾತ ನಟಿ ಮತ್ತು ಮಾಡೆಲ್ ಹರ್ಷಿಲ್ ಕಾಲಿಯಾ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅವರ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.

ಖ್ಯಾತ ನಟಿ ಮತ್ತು ಮಾಡೆಲ್ ಹರ್ಷಿಲ್ ಕಾಲಿಯಾ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದು, ಈ ಘಟನೆಯ ಸಿಸಿಟಿವಿ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ‘ಕ್ರೈಮ್ ನೆಕ್ಸ್ಟ್ ಡೋರ್’ (Crime Next Door) ವೆಬ್ ಸರಣಿ ಮತ್ತು ಹಲವು ರಾಜಸ್ಥಾನಿ ಮ್ಯೂಸಿಕ್ ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದ 30 ವರ್ಷದ ಹರ್ಷಿಲ್, ಮಾರ್ಚ್ 23ರ ಸೋಮವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

ವರದಿಗಳ ಪ್ರಕಾರ, ಹರ್ಷಿಲ್ ಕಾಲಿಯಾ ಕೆಲಸ ಮುಗಿಸಿ ತಡರಾತ್ರಿ ಮನೆಗೆ ಮರಳುತ್ತಿದ್ದಾಗ ಅವರ ಕಾರು ದಿಢೀರ್ ನಿಯಂತ್ರಣ ತಪ್ಪಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರ ಕಾರು ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದು, ಎಡಭಾಗಕ್ಕೆ ಪಲ್ಟಿಯಾಗುವ ಭಯಾನಕ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಇತರ ವಾಹನ ಸವಾರರು ಮತ್ತು ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ಪಲ್ಟಿಯಾಗಿದ್ದ ಕಾರಿನಿಂದ ಹರ್ಷಿಲ್ ಅವರನ್ನು ಹೊರತೆಗೆದು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವೈದ್ಯರು ಪರೀಕ್ಷಿಸಿದ ನಂತರ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಅಪಘಾತದ ರಭಸಕ್ಕೆ ಹರ್ಷಿಲ್ ಅವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದು, ಇದೇ ಅವರ ಸಾವಿಗೆ ಮುಖ್ಯ ಕಾರಣ ಎಂದು ವರದಿಗಳು ತಿಳಿಸಿವೆ. ಕಾರು ನಿಯಂತ್ರಣ ತಪ್ಪಲು ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಅತಿ ವೇಗ ಕಾರಣವೇ ಅಥವಾ ಬೇರೆ ಯಾವುದಾದರೂ ತಾಂತ್ರಿಕ ದೋಷವಿತ್ತೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಹರ್ಷಿಲ್ ಕಾಲಿಯಾ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿದ್ದರು. ವೆಬ್ ಶೋಗಳು ಮತ್ತು ಪ್ರಾದೇಶಿಕ ಸಂಗೀತ ವಿಡಿಯೋಗಳ ಹೊರತಾಗಿ, ಅವರು ಮಾಡೆಲ್ ಆಗಿಯೂ ಯಶಸ್ವಿಯಾಗಿದ್ದರು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿದ್ದರು. ಉದಯೋನ್ಮುಖ ನಟಿಯ ಈ ಅಕಾಲಿಕ ಸಾವು ಅವರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

Source link

Leave a Reply

Your email address will not be published. Required fields are marked *