
ಖ್ಯಾತ ನಟಿ ಜ್ಯೋತಿಕಾ (ಜ್ಯೋತಿಕಾ) ಈಗ ಅವರಿಗೆ 47 ವರ್ಷ ವಯಸ್ಸು. ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದ್ದರೂ ಕೂಡ ಅವರು ಫಿಟ್ನೆಸ್ ಕಳೆದುಕೊಂಡಿಲ್ಲ. ಅವರು ತಪ್ಪದೇ ವರ್ಕೌಟ್ ಮಾಡುತ್ತಾರೆ. ಆ ಕಾರಣದಿಂದ ಅವರು ಫಿಟ್ ಆಗಿದ್ದಾರೆ. ತಮ್ಮ ವರ್ಕೌಟ್ ಹೇಗಿದೆ ಎಂದು ಅಭಿಮಾನಿಗಳಿಗೆ ತೋರಿಸಲು ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. 47ರ ಪ್ರಾಯದ ಜ್ಯೋತಿಕಾ ಅವರು ಹದಿಹರೆಯದ ಹುಡುಗಿಯ ರೀತಿಯಲ್ಲಿ ವರ್ಕೌಟ್ ಮಾಡುತ್ತಾರೆ. ಅವರ ಶಿಸ್ತು ಮತ್ತು ಉತ್ಸಾಹ ಎಲ್ಲರಿಗೂ ಮಾದರಿ ಆಗುವಂತಿದೆ. ಇತ್ತೀಚಿನ ವರ್ಷಗಳಲ್ಲಿ ಜ್ಯೋತಿಕಾ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆ ಆಗಿದೆ. ದೊಡ್ಡ ಪರದೆಯಲ್ಲಿ ಅಭಿಮಾನಿಗಳನ್ನು ಅವರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.