‘Black magic’ ಮಾಡಿದ ನಟಿ ಜ್ಯೋತಿಕಾ: ನಟಿಯ ಫಿಟ್ನೆಸ್​ಗೆ ಫ್ಯಾನ್ಸ್ ಫಿದಾ

‘Black magic’ ಮಾಡಿದ ನಟಿ ಜ್ಯೋತಿಕಾ: ನಟಿಯ ಫಿಟ್ನೆಸ್​ಗೆ ಫ್ಯಾನ್ಸ್ ಫಿದಾ

‘Black magic’ ಮಾಡಿದ ನಟಿ ಜ್ಯೋತಿಕಾ: ನಟಿಯ ಫಿಟ್ನೆಸ್​ಗೆ ಫ್ಯಾನ್ಸ್ ಫಿದಾ

Jyotika Fitness: ತಮಿಳು ಚಿತ್ರರಂಗದ ಸ್ಟಾರ್ ನಟಿ ಹಾಗೂ ನಟ ಸೂರ್ಯ ಅವರ ಪತ್ನಿ ಜ್ಯೋತಿಕಾ ಹಂಚಿಕೊಂಡಿರುವ ಹೊಸ ಫೋಟೊಸ್ ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ. 47ನೇ ವಯಸ್ಸಿನಲ್ಲಿ ನಟಿ ಇಷ್ಟೊಂದು ಫಿಟ್ ಆಗಿರುವ ಹಿಂದಿನ ಸೀಕ್ರೆಟ್ ಏನು ಎಂದು ಕೇಳುತ್ತಿದ್ದಾರೆ.

ತಮಿಳು ಚಿತ್ರರಂಗದ ಜನಪ್ರಿಯ ನಟಿ ಜ್ಯೋತಿಕಾ. ಆರಂಭದಲ್ಲಿ ಚಬ್ಬಿಚಬ್ಬಿಯಾಗಿ ಗುರುತಿಸಿಕೊಂಡಿದ್ದ ಜ್ಯೋತಿಕಾ, ಬಳಿಕ ಮದುವೆ, ಮಕ್ಕಳಾಗಿ ದೇಹ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಇದೀಗ 47ನೇ ವಯಸ್ಸಿನಲ್ಲಿ ಜ್ಯೋತಿಕಾ ಲುಕ್ ನೋಡಿದ್ರೆ, ಶಾಕ್ ಅನಿಸ್ತಿದೆ. ಫಿಟ್ ಮತ್ತು ಸ್ಲಿಮ್ ಆಗಿ ನಟಿ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯುವ ನಟಿಯಂತೆ ಕಾಣಿಸುತ್ತಿದ್ದಾರೆ.

ಇದೀಗ ಜ್ಯೋತಿಕಾ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಕಪ್ಪು ಬಣ್ಣದ ಆಫ್ ಶೋಲ್ಡರ್, ಹೈ ಸ್ಲಿಟ್, ಬಾಡಿಕಾನ್ ಗೌನ್ ಧರಿಸಿರುವ ಜ್ಯೋತಿಕಾ ‘Black Magic’ ಎಂದು ಕ್ಯಾಪ್ಶನ್ ಕೊಟ್ಟಿದ್ದು, ನಟಿಯ ಈ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಭಿಮಾನಿಗಳು ಕಾಮೆಂಟ್ ಮಾಡಿ, ನಿಮಗೆ ವಯಸ್ಸೇ ಆಗುತ್ತಿಲ್ವಾ? ಸ್ಟನ್ನಿಂಗ್, ಫ್ಯಾಬುಲಸ್, ಗಾರ್ಜಿಯಸ್, ಫಿಲಂ ಫೇರ್ ಅವಾರ್ಡ್ ನ ಲೇಡಿ ನೀವೇನೆ, ಬ್ಲ್ಯಾಕ್ ಮ್ಯಾಜಿಕ್ ಮಾಡುತ್ತಿರುವ ಮಹಿಳೆಗೆ ಮನಸೋತಿದ್ದೇವೆ, ನಿಮ್ಮ ಫಿಟ್ನೆಸ್ ಸೂಪರ್, ನಿಮ್ಮ ವಯಸ್ಸು ರಿವರ್ಸ್ ಗೇರ್ ಹಾಕಿದ ಹಾಗಿದೆ ಎಂದು ಜನ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಹಿಂದೊಮ್ಮೆ ಇಂಟರ್ವ್ಯೂನಲ್ಲಿ ತಮ್ಮ ವೈಟ್ ಲಾಸ್ ಜರ್ನಿ ಬಗ್ಗೆ ಮಾತನಾಡಿದ ಜ್ಯೋತಿಕಾ, ತೂಕ ನಿರ್ವಹಣೆ ನನಗೆ ಯಾವಾಗಲೂ ಕಷ್ಟದ ಕೆಲಸ; ಭಾರೀ ವ್ಯಾಯಾಮಗಳು, ಅಂತ್ಯವಿಲ್ಲದ ಆಹಾರ ಪದ್ಧತಿಗಳು ಮತ್ತು ಅನಿಯಮಿತ ಮಧ್ಯಂತರ ಉಪವಾಸವು ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಸಹಾಯ ಮಾಡಲಿಲ್ಲ. ಕೊನೆಗೂ ಅದು ಅಮುರಾದಿಂದಾಗಿ ಸಾಧ್ಯವಾಯಿತು ಎಂದು ಚೆನ್ನೈ ಮೂಲದ ನ್ಯೂಟ್ರಿಶಿಯನ್ ಗ್ರೂಪ್ ಅಮೂರಾ ಹೆಲ್ತ್ ಗೆ ಥ್ಯಾಂಕ್ಯೂ ಹೇಳಿದ್ದರು.

ನನ್ನ ಕರುಳು, ಜೀರ್ಣಕ್ರಿಯೆ, ಇನ್ಫ್ಲಮೆಟರಿ ಆಹಾರಗಳು ಮತ್ತು ಆಹಾರ ಸಮತೋಲನದ ಬಗ್ಗೆ ಕಲಿತಿದ್ದೇನೆ. ಹೆಚ್ಚು ಮುಖ್ಯವಾಗಿ, ನನ್ನ ಯೋಗಕ್ಷೇಮ ಮತ್ತು ಮನಸ್ಥಿತಿಗಳ ಮೇಲೆ ಅದರ ಪ್ರಭಾವವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಸಕಾರಾತ್ಮಕ ಭಾವನೆಯನ್ನು ತುಂಬುತ್ತೇನೆ. ಪರಿಣಾಮವಾಗಿ, ಇಂದು ಒಬ್ಬ ವ್ಯಕ್ತಿಯಾಗಿ ನಾನು ಅತ್ಯಂತ ಚೈತನ್ಯಶೀಲ ಮತ್ತು ಆತ್ಮವಿಶ್ವಾಸವನ್ನು ಅನುಭವಿಸುತ್ತೇನೆ.

ನನ್ನ ದೇಹ ಮತ್ತು ಅದರ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರೊಂದಿಗೆ ವ್ಯಾಯಾಮಗಳನ್ನು ಸಂಯೋಜಿಸುವುದು ನನ್ನ ಅನುಭವದ ಮೇಲೆ ಗರಿಷ್ಠ ಪರಿಣಾಮ ಬೀರಿತ್ತು ಎನ್ನುತ್ತಾ ನಟಿ ತಮ್ಮ ಫಿಟ್ನೆಸ್ ಜರ್ನಿಯ ಬಗ್ಗೆ ತಿಳಿಸಿದ್ದರು. ಅಂದ ಹಾಗೆ ನಟಿ ಜ್ಯೋತಿಕಾ ಕೇವಲ ಮೂರು ತಿಂಗಳಲ್ಲಿ 9 ಕೆಜಿ ಇಳಿಸುವ ಮೂಲಕ 47 ಆದ್ರೂ ತಾವು ಫಿಟ್ ಆಂಡ್ ಫೈನ್ ಆಗಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

Source link

Leave a Reply

Your email address will not be published. Required fields are marked *